
ಉದಯವಾಹಿನಿ, ಔರಾದ್ : ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಗಾಲದ ಸಮಸ್ಯೆ ಉಂಟಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ಪ್ರತಿ ವರ್ಷ ಸಂಗ್ರಹವಾಗಬೇಕಿದ್ದ ನೀರಿನ ಪ್ರಮಾಣವು ಕುಸಿತ ಕಂಡಿದ್ದು, ಇದರಿಂದಾಗಿ ರೈತರ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವ ಆತಂಕ ಉಂಟಾಗಿದೆ. ಅದರ ಜೊತೆಗೆ ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಅಭಾವದಿಂದ ರೈತರ ಪಂಪಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ನಿರಂತರ ೭ ಗಂಟೆಗಳ ಕಾಲ ವಿದ್ಯುತ ಪೂರೈಕೆ ಮಾಡಬೇಕಾಗಿತ್ತು. ಆದರೆ ಇತ್ತೀಚಿಗೆ ಅನಿಯಮಿತ ಲೋಡ್ ಶೆಡಿಂಗ್‌ಗಳ ಪರಿಣಾಮ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಬರಗಾಲಕ್ಕೆ ತುತ್ತಾಗಿರುವ ರೈತರು ಈಗಾಗಲೇ ಶೇ ೮೦% ರಷ್ಟು ಬೆಳೆಗಳನ್ನು ಭಿತ್ತನೆ ಮಾಡಿದ್ದು ಅವುಗಳನ್ನು ರಕ್ಷಿಸಿಕೊಳ್ಳಲು ವಿದ್ಯುತ್ ಸಮಸ್ಯೆ ಉಂಟಾಗಿ ರೈತ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ವತಿಯಿಂದ ಶುಕ್ರವಾರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಮುಲಕ ಸಲ್ಲಿಸಿದರು.
ಅಲ್ಲದೇ ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಲವಾರು ರೈತಪರ ಯೋಜನೆಗಳಾದ ಕಿಸಾನ್ ಸಮ್ಮಾನ ನಿಧಿ ಯೋಜನೆ, ರೈತ ವಿಧ್ಯಾನಿದಿ ಯೋಜನೆ, ಭೂ ಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ ಯೋಜನೆ, ಕ್ಷೀರ ಸಮೃದ್ದಿ ಸಹಕಾರ ಬ್ಯಾಂಕ್ ಈ ಎಲ್ಲ ಯೋಜನೆಗಳನ್ನು ರದ್ದು ಮಾಡುವ ಮೂಲಕ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಸುಮಾರು ೪೨ ಜನ ರೈತರ ಆತ್ಮಹತ್ಯೆ ಪ್ರಕರಣಗಳ ವರದಿಯಾಗಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ.
ವಿಷಯಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು, ಸಂಬಂಧಿಸಿದ ಸಚಿವರು ಗಮನ ಹರಿಸುವ ಮೂಲಕ ತಕ್ಷಣ ರೈತರ ಸಹಾಯಕ್ಕೆ ಬರಬೇಕಾದ ಅಗತ್ಯವಿದೆ. ಹೀಗಾಗಿ ರಾಜ್ಯದಲ್ಲಿ ರೈತರ ಪಂಪಸೆಟ್‌ಗಳಿಗೆ ಉಂಟಾಗಿರುವ ಅನಿಯಮಿತ ಲೋಡ್ ಶೆಡಿಂಗ್ ರದ್ದು ಪಡಿಸಿ, ಹಗಲು ಹೊತ್ತಿನಲ್ಲಿ ೭ ಗಂಟೆಗಳ ಕಾಲ ವಿದ್ಯುತ್ ಪೂರೈಸುವುದು ಸೇರಿದಂತೆ ಮಳೆಯ ಅಭಾವದಿಂದ ಉಂಟಾಗಿರುವ ಬರಗಾಲ ಸ್ಥಿತಿ ನಿವಾರಣೆಗೋಸ್ಕರ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಹಾಗೂ ರೈತರ ಆತ್ಮಹತ್ಯೆಯಂತಹ ಅನಾಹುತಗಳಿಗೆ ಆಸ್ಪದಕೊಡದಿರುವ ರೀತಿಯಲ್ಲಿ ರೈತ ವರ್ಗಕ್ಕೆ ಧೈರ್ಯ ತುಂಬುವ ಮತ್ತು ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದ್ದು ಅತ್ಯಂತ ಅವಶ್ಯಕವಾಗಿದೆ. ಸರ್ಕಾರ ಈ ಬಗ್ಗೆ ಯುದ್ದೋಪಾದಿಯಲ್ಲಿ ಕ್ರಮಕೈಗೊಂಡು ರೈತರ ನೆರವಿಗೆ ಧಾವಿಸಬೇಕಾಗಿದ್ದು ಅತ್ಯಂತ ಅಗತ್ಯವಾಗಿದೆ ಎಂದು ವತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕ ಭಾಜಪಾ ಅಧ್ಯಕ್ಷ ರಾಮಶೇಟ್ಟಿ ಪನ್ನಾಳೆ, ಮಂಡಲ ಪ್ರಧಾನ ಕಾರ್ಯದರ್ಶಿ ಖಂಡೋಬಾ ಕಂಗಟೆ, ಶಿವಾಜಿರಾವ ಪಾಟೀಲ, ಶಿವಾಜಿರಾವ ಕಾಳೆ, ರಮೆಶ ಬೀರಾದಾರ, ಸಂಜು ವಡೆಯರ, ದಯಾನಂದ ಹಳ್ಳಿಖೆಡೆ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಬಸವರಾಜ ಹಳ್ಳೆ, ಶ್ರೀಮಂತ ಪಾಟೀಲ, ಶಿವರಾಜ ಅಲಮಾಜೆ, ಮುಂಡಲ ಉಪಾಧ್ಯಕ್ಷ ಅಶೋಕ ಅಲಮಾಜೆ, ರಾಮರೆಡ್ಡಿ ಪಾಟೀಲ, ಮಾರುತಿರೆಡ್ಡಿ ಪಟ್ನೆ, ಮಹಾಶಕ್ತಿಕೆಂದ್ರ ಅಧ್ಯಕ್ಷರಾದ ಪ್ರಕಾಶ ಜಿರ್ಗೆ, ರಾಜಕುಮಾರ ಸೋರಳ್ಳೆ ಶ್ರೀ ಸಂಜು ಮುರ್ಕೆ, ಸಚ್ಚಿನ ಬೀರಾದಾರ, ರವಿಂದ್ರ ರೆಡಿ ಮೋರ್ಚಾ ಅಧ್ಯಕ್ಷರಾದ ಶ್ರೀ ಗೋವಿಂದ ಹಿಲಾಲಪೂರೆ, ಖಾಜಾ ಮಿಯ್ಯಾ, ಸಿದ್ರಾಮಪ್ಪಾ ನಿಡೋದೆ, ನಾಗಶೇಟ್ಟಿ ಗಾದಗೆ, ಸಂತೋಷ ಬಾರೂಳೆ, ವೇಂಕಟರಾವ ಜಾಧವ, ಸಂತೋಷ ಬಾರೋಳೆ, ಜಗದೀಶ ಪಾಟೀಲ, ಅಶೋಕ ಕೋಳೂರು, ಬಜರಂಗ ಪಾಂಡರೆ, ನಾಗನಾಥ ಮೋರ್ಗೆ, ಈರಾರೆಡಿ, ನವನಾಥ ಭಾಲ್ಕೆ, ಪ್ರಕಾಶ ಖಾನಾಪೂರ, ಸಂದೀಪ ಪಾಟೀಲ, ಸುಜಿತ ನೆಲಕಲೆ, ರಮೇಶ ಗೌಡಾ, ಯೋಗೆಶ ಸೂರನಾರ, ಭರತ ಕದಂ, ಪ್ರವಿಣ ಕಾರಬಾರಿ, ಯೋಗೆಶ ಬಿರಾದಾರ, ಅಂಕೋಶ ವಾಡಕರ್, ವಿಶ್ವನಾಥ ಅಷ್ಟುರೆ, ಗಣೇಶ ಕುಂಬಾರ. ಮಾಹಾದೇವ ಅಲಮಾಜೆ, ಬಾಲಾಜಿ ಕಾಸಲೆ, ಗಂಗಶೇಟ್ಟಿ ಮುಲಗೆ, ಶಿವಲಿಂಗ ಹೆಡಗಾಪೂರ, ಗುರು ಪಟೇಲ, ನರಸಿಂಗ ಗುರದಾಳೆ, ಶಿವಕಾಂತ ಲಾಧಾ, ಶಿತಾರಾಮ ಬಿರಾದಾರ ಸೋಮನಾಥ ಆಲೂರ, ರೇವಣಪ್ಪಾ ಆಲೂರ, ಭವರಾವ ಆಲೂರ ತಾಂಡಾ ಹಾಗೂ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
