ಉದಯವಾಹಿನಿ,ಶಿಡ್ಲಘಟ್ಟ: ಶ್ರಾವಣ ಮಾಸದ ನಾಲ್ಕನೇ ಶನಿವಾರದ ಪ್ರಯುಕ್ತ ವಿವಿಧ ದೇವಾಲಯಗಳಿಗೆ ಸಮಾಜ ಸೇವಕ ಆಂಜಿನಪ್ಪ ಪುಟ್ಟು ಭೇಟಿ ನೀಡಿ ದೇವಾಲಯಗಳ ಜಿರ್ಣೋದ್ಧಾರಕ್ಕಾಗಿ ದೇಣಿಗೆ ನೀಡಿದರು.ತಾಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ತಾಲೂಕಿನ ಎಲ್ಲಾ ರೈತಾಪಿ ವರ್ಗದವರಿಗೆ ಸಕಲ ಕಷ್ಟಗಳು ದೂರವಾಗಿ ಸಮಸ್ಯೆಗಳು ಇತ್ಯರ್ಥವಾಗಿ ಭವಿಷ್ಯದಲ್ಲಿ ಅವರ ಕುಟುಂಬಗಳು ಚೆನ್ನಾಗಿರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು ದೇವಾಲಯಗಳ ನಿರ್ಮಾಣಕ್ಕೆ ಗ್ರಾಮಸ್ಥರ ಸಹಕಾರ ಹಾಗೂ ಭಕ್ತಾದಿಗಳ ಸಹಕಾರ ಅಗತ್ಯವಾಗಿದೆ ಎಂದು ಆಂಜಿನಪ್ಪ ಪುಟ್ಟು ತಿಳಿಸಿದರು.ಶಿಡ್ಲಘಟ್ಟ ತಾಲೂಕಿನ ಗಂಭೀರನಹಳ್ಳಿ, ಎದ್ದಲ ತಿಪ್ಪೇನಹಳ್ಳಿ , ಶೆಟ್ಟಹಳ್ಳಿ, ಆನೆಮಡಗು ಗ್ರಾಮದ ಗಂಗಮ್ಮ ಹಾಗೂ ಶ್ರೀ ಆಂಜನೇಯ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಮಾಜ ಸೇವಕ ಆಂಜಿನಪ್ಪ ಪುಟ್ಟು ತಮ್ಮ ಎಸ್ ಎನ್ ಕ್ರಿಯಾ ಟ್ರಸ್ಟ್ ವತಿಯಿಂದ ಚೆಕ್ ಗಳನ್ನು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ದೇವಾಲಯದ ಮುಖಂಡರಾದ ಶಿಕ್ಷಕ ಎ.ವಿ ವೆಂಕಟನರಸಪ್ಪ, ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿ ಮುಖಂಡರಾದ ಕೆ.ಬೈರಾರೆಡ್ಡಿ, ನಾರಾಯಣಸ್ವಾಮಿ,ಆನಂದ್,ಚಯಚಂದ್ರ,ಸತೀಶ್,ರವಿ,ಗಂಗರೆಡ್ಡಿ,ಮೌಲಾಸ್ವಾಮಿ, ಹರೀಶ್,ಮಂಜುನಾಥ್, ನಾರಾಯಣಸ್ವಾಮಿ (ಹಾವಳಿ),ಮುನಿಯಪ್ಪ,ಗ್ರಾ ಪಂ ಸದಸ್ಯ ಸಿಕೆ ಮಂಜುನಾಥ್, ಮುನಿಶಾಮಿ,ಗೌಡನಹಳ್ಳಿ ಮಂಜುನಾಥ್,ಮಳಮಾಚನಹಳ್ಳಿ ಮುನಿರಾಜು, ವಿಶ್ವನಾಥ್, ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!