ಉದಯವಾಹಿನಿ,ಶಿಡ್ಲಘಟ್ಟ: ರೈತರು ಹಾಗೂ ಮಹಿಳಾ ಸಂಘಗಳ ಪ್ರತಿನಿಧಿಗಳು ಸಹಕಾರ ಬ್ಯಾಂಕ್‌ನಿಂದ ಸಿಗುವ ಸೌಲಭ್ಯ ಸದುಪಯೋಗಪಡಿಸಿಕೊಂಡು ನಿಗದಿತ ಸಮಯದಲ್ಲಿ ಮರು ಪಾವತಿ ಮಾಡುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಶಕ್ತಿ ತುಂಬಿಸುವ ಕಾರ್ಯ ಮಾಡಬೇಕು ಎಂದು ಅಧ್ಯಕ್ಷ ಡಾ.ಜಯರಾಮರೆಡ್ಡಿ ತಿಳಿಸಿದರು.ತಾಲ್ಲೂಕಿನ ಆನೆಮಡಗು ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 2023-24ನೇ ಸಾಲಿನ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಬ್ಯಾಂಕಿನಲ್ಲಿ ವ್ಯವಹರಿಸಬೇಕು. ರಾಷ್ಟ್ರೀಯ ಬ್ಯಾಂಕ್‌ಗಳಿಗಿಂತಲೂ ಉತ್ತಮವಾದ ಸೌಲಭ್ಯ ಇಲ್ಲಿ ಕಲ್ಪಿಸಿಕೊಡಲಾಗುತ್ತಿದೆ. ಸಾಲ ಪಡೆದಂತವರು ಸಮಯಕ್ಕೆ ಸರಿಯಾಗಿ ಹಿಂತಿರುಗಿಸಿ, ಪುನಃ ಪಡೆದುಕೊಂಡರೆ ಸಂಘವು ಅಭಿವೃದ್ಧಿಯಾಗುತ್ತದೆ, ಹಾಗೆಯೇ ಮತ್ತಷ್ಟು ರೈತರಿಗೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದರು.ರೈತರು ಸಾಲ ಪಡೆದುಕೊಂಡಷ್ಟು ಡಿಸಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡಲು ಅನುಕೂಲವಾಗಲಿದೆ. ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ತಮ್ಮ ದೈನಂದಿನ ಹಣಕಾಸಿನ ವ್ಯವಹಾರವನ್ನು ಸಹಕಾರ ಬ್ಯಾಂಕಿನಲ್ಲೇ ಮಾಡುವ ಮೂಲಕ ಉತ್ತಮ ಸೇವೆ ಪಡೆಯಬೇಕು. ರೈತರಿಗೆ ಇತರೆ ಬ್ಯಾಂಕಿನಲ್ಲಿ ಹೆಚ್ಚಿನ ಬಡ್ಡಿ ವಿಧಿಸುತ್ತಾರೆ. ನಮ್ಮ ಬ್ಯಾಂಕ್ ಕೇವಲ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತೇವೆ ಅದನ್ನ ಸಮಯಕ್ಕೆ ಸರಿಯಾಗಿ ಹಿಂದುರುಗಿಸಿ ಇತರರಿಗೂ ಅನುಕೂಲ ಮಾಡಿಕೊಡಬೇಕು ಎಂದು ಉಪಾಧ್ಯಕ್ಷ ಚಿಕ್ಕತೇಕಹಳ್ಳಿ ಸಿ ವೆಂಕಟೇಶಪ್ಪ ತಿಳಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಕೆ.ಬೈರಾರೆಡ್ಡಿ, ಸೋಮಶೇಖರ್ ರೆಡ್ಡಿ,ಎ.ಎನ್.ಲಕ್ಮಿನಾರಾಯಣ, ನರಸಿಂಹಪ್ಪ,ಡಿ.ಬಿ.ವೆಂಕಟೇಶ್,ನರಸಿಂಹಪ್ಪ,ಲಕ್ಷ್ಮಿನಾರಾಯಣ,ಎಲ್.ಅನುಸೂಯಮ್ಮ,ಸುಶೀಲಮ್ಮ,ಎಂ.ಪಿಸಿಎಸ್ ಅಧ್ಯಕ್ಷ ಎ.ಎಂ.ವೆಂಕಟರೆಡ್ಡಿ,ಸಂಘದ ಮಾಜಿ ಅಧ್ಯಕ್ಷ ನರಸಪ್ಪ,ಎವಿ ದೇವರಾಜ್,  ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸದಾಶಿವ,ಪಿ ಎನ್.ನರಸಿಂಹರೆಡ್ಡಿ, ಸಹಕಾರ ಸಂಘದ ಸಿಬ್ಬಂದಿ ಮತ್ತು ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!