
ಉದಯವಾಹಿನಿ ರಾಮನಗರ: ನವದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ರಾಷ್ಟ್ರೀಯ ಲೋಕ ಅದಾಲತ್‌ನ್ನು ಆಯೋಜಿಸಲಾಗಿತ್ತು.ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ನ್ಯಾಯಾಲಯಗಳಲ್ಲಿ ಒಟ್ಟು 20 ಪೀಠಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನ್ನು ಆಯೋಜಿಸಿ, ಲೋಕ ಅದಾಲತ್‌ಗೆ ಜಿಲ್ಲೆಯಾದ್ಯಂತ ಇರುವ ಒಟ್ಟು 52,898 ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಲ್ಲಿ 10,396 ಪ್ರಕರಣಗಳನ್ನು ಅದೇ ರೀತಿ ಒಟ್ಟು 40,988 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂದಾನಕ್ಕಾಗಿ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ 4,037 ಪ್ರಕರಣಗಳನ್ನು ಹಾಗೂ 37,797 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಒಟ್ಟಾರೆ 41,834 ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಲಾಯಿತು. ಅಲ್ಲದೆ ಒಟ್ಟು ಮೊತ್ತ 149,00,2,683 ರೂ.ಗಳನ್ನು ವಸೂಲಿ ಮಾಡಲಾಯಿತು.ರಾಮನಗರ ಜಿಲ್ಲೆಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂದಾನದ ಮೂಲಕ ಇತ್ಯರ್ಥಗೊಂಡ ಪ್ರಕರಣಗಳ ವಿವರ : 48 ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳು, 132 ನೆಗೋಷಲ್ ಇನ್ಸ್ಟ್ರೂಮೆಂಟ್ ಕಾಯಿದೆ ಪ್ರಕರಣಗಳು, 14 ಸಾಲ ವಸೂಲಾತಿ ಪ್ರಕರಣಗಳು, 39 ಮೋಟಾರು ವಾಹನ ಅಪಘಾತ ಪ್ರಕರಣಗಳು, 4 ಕಾರ್ಮಿಕ ವಿವಾದ ಪ್ರಕರಣ, 19 ಗಣಿ ಮತ್ತು ಭೂ ವಿಜ್ಞಾನ ಪ್ರಕರಣಗಳು, 10 ವೈವಾಹಿಕ ಪ್ರಕರಣಗಳು, 56 ಆಸ್ತಿ ವಿಭಾಗದ ಪ್ರಕರಣಗಳು, 41 ನಿರ್ಧಿಷ್ಟ ಪ್ರಕರಣಗಳು, 1 ಅಂತಿಮ ಡಿಕ್ರಿ ಕಾರ್ಯಾಚರಣೆ ಪ್ರಕರಣಗಳು, 50 ಜಾರಿ ಪ್ರಕರಣಗಳು, 49 ಹಕ್ಕು ಘೋಷಣೆ, ಶಾಶ್ವತ ನಿರ್ಭಂದಕಾಜ್ಞೆ ಹಾಗೂ ಇತರೆ, 85 ಜನನ ಮತ್ತು ಮರಣ ಪ್ರಮಾಣ ಪತ್ರಕ್ಕೆ ಸಂಬAಧಿಸದ ಪ್ರಕರಣಗಳು, 3450 ಲಘು ವಾಜ್ಯ ಪ್ರಕರಣಗಳು, 11 ಇತರೆ ಕ್ರಿಮಿನಲ್ ಪ್ರಕರಣಗಳು, 16 ಬ್ಯಾಂಕ್ ಸ್ಯೂಟ್ಸ್, 125 ಸಿಆರ್. ಪಿ.ಸಿ 11 ಪ್ರಕರಣಗಳು, 1 ಡಿವಿ ಆಕ್ಟ್ ಹಾಗೂ 37797 ಪ್ರಿ ಲಿಟಿಗೇಷನ್ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ರಾಷ್ಟ್ರೀಯ ಲೋಕ ಅದಾಲತ್‌ನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ನ್ಯಾ. ನಿಂಗಪ್ಪ ಪರಶುರಾಮ ಕೋಪರ್ಡೆ ಅವರ ಮೇಲುಸ್ತುವಾರಿಯಲ್ಲಿ ನಿರ್ವಹಣೆ ಮಾಡಲಾಯಿತು ಎಂದು ರಾಮನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅನಿತಾ ಅವರು ತಿಳಿಸಿದರು.
