
ಉದಯವಾಹಿನಿ ಶಿಡ್ಲಘಟ್ಟ: ರೈತರು ಹಾಗೂ ಮಹಿಳಾ ಸಂಘಗಳಿಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ, ಶೂನ್ಯ ಬಡ್ಡಿಯಲ್ಲಿ ಸಾಲ ನೀಡುತ್ತಿರುವ ಏಕೈಕ ಬ್ಯಾಂಕ್ ಅದು ನಮ್ಮ ಡಿಸಿಸಿ ಬ್ಯಾಂಕ್ ಮಾತ್ರ ಎಂದು ಅಧ್ಯಕ್ಷ ಜೆ.ಎನ್ ರಾಮಚಂದ್ರಪ್ಪ ತಿಳಿಸಿದರು. ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾ ಸಭೆಯ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರೈತರು ಹಾಗೂ ಮಹಿಳಾಪ್ರತಿನಿಧಿಗಳು ಸಹಕಾರಿ ಬ್ಯಾಂಕ್‌ನಿಂದ ಸಿಗುವ ಸೌಲಭ್ಯ ಸದುಪಯೋಗಪಡಿಸಿಕೊಂಡು ನಿಗದಿತ ಸಮಯದಲ್ಲಿ ಮರು ಪಾವತಿ ಮಾಡುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಬಲ ತುಂಬಿಸುವ ಕೆಲಸ ಮಾಡಬೇಕು.ರೈತರಿಗೆ ರಾಷ್ಟ್ರೀಯ ಬ್ಯಾಂಕ್‌ಗಳಿಗಿಂತಲೂ ಉತ್ತಮವಾದ ಸೌಲಭ್ಯ ಇಲ್ಲಿ ಕಲ್ಪಿಸಿಕೊಡಲಾಗುತ್ತಿದೆ. ಸಾಲ ಪಡೆದಂತವರು ಸಮಯಕ್ಕೆ ಸರಿಯಾಗಿ ಹಿಂತಿರುಗಿಸಿ, ಪುನಃ ಸಾಲ ಪಡೆದುಕೊಂಡರೆ ಸಂಘವು ಅಭಿವೃದ್ಧಿಯಾಗುತ್ತದೆ ಹಾಗೆಯೇ ಮತ್ತಷ್ಟು ರೈತರಿಗೆ ಸಾಲ ನೀಡಲು ಅನುಕೂಲವಾಗುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಗುಡಿಯಪ್ಪ ಮಾತನಾಡಿ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಆಸೆಯಂತೆ ಸಹಕಾರಿ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಕೊಂಡಯ್ಯಬೇಕು ಎಂದು ವೈದ್ಯನಾಥನ್ ಸಮಿತಿಯ ರಚಿಸಿದರು. ಅದರಂತೆ ಭರತ ಖಂಡದಲ್ಲಿ ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ರೈತರಿಗೆ ಉತ್ತಮ ಅನುಕೂಲವಾಗಲಿದೆ. ಸಮಯಕ್ಕೆ ತಕ್ಕಂತೆ ಬ್ಯಾಂಕನ್ನು ಅಭಿವೃದ್ಧಿ ಪಡೆಸಲು ಹೆಚ್ಚಿನ ರೀತಿಯಲ್ಲಿ ಸಹಕರಿಸಿದ್ದಾರೆ. ಅದೇ ರೀತಿ ರೈತರು ಹಾಗೂ ಮಹಿಳಾ ಸಂಘಗಳು ಸಹಕಾರಿ ಬ್ಯಾಂಕ್ ಅದರೊಂದಿಗೆ ಸಮಯಕ್ಕೆ ತಕ್ಕಂತೆ ನೆಚ್ಚಿನ ರೀತಿಯಲ್ಲಿ ಸಹಕರಿಸಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೋ-ಚಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್,ಬಂಕ್ ಮುನಿಯಪ್ಪ,ಹುಜಗೂರು ರಾಮಣ್ಣ,ತಾ.ಪಂ ಮಾಜಿ ಸದಸ್ಯ ಕೆಎಂ ಶ್ರೀನಿವಾಸ್, ರೈ.ಸಂ.ರಾ.ಪ್ರ.ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ರೈ.ತಾ.ಅಧ್ಯಕ್ಷ ತಾದೂರು ಮಂಜುನಾಥ್,ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ,ಬೆಳ್ಳೂಟಿ ವೆಂಕಟೇಶ್,ಸಹಕಾರ ಸಂಘದ ಉಪಾಧ್ಯಕ್ಷೆ ಎಂ ಶೋಭಾರಾಣಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವಿಕ, ಸಹಕಾರ ಸಂಘದ ಸಿಬ್ಬಂದಿ ಮತ್ತು ಗ್ರಾಮಸ್ಥರು ಹಾಜರಿದ್ದರು.
