ಉದಯವಾಹಿನಿ, ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಆರೋಗ್ಯ ಕೇಂದ್ರದ ವ್ಯಾಪಿಯ ಇದೇ ಗ್ರಾಮದ ಮಾದರಿ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ರಾಷ್ಟ್ರೀಯ ಪೋಷಣ್ ಮಾಸಚರಣೆ ಹಾಗೂ ಅಯುಷ್ಮಾನಭವ ಕಾರ್ಯಕ್ರಮಕ್ಕೆ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳಾದ ಶ್ರೀಮತಿ ಸುಧಾ ಚಾಲನೆ ನೀಡಿ “ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆಯ ಕೊರತೆ ನಿಗಿಸಲು ಸರ್ಕಾ ರವು ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬೆಳಗಟ್ಟ ಗ್ರಾಮ ಪಂಚಾಯತಿ , ಉಪಾಧ್ಯಕ್ಷರಾದ  ಶ್ರೀಮತಿ ಕವಿತಾ ದುಷ್ಯಂತ್, ಡಿ.ಎಸ್.ಹಳ್ಳಿ ಗ್ರಾ. ಪಂ. ಉಪಾಧ್ಯಕ್ಷರಾದ ಶ್ರೀಮತಿ ಸುಧಾ, ಬೆಳಗಟ್ಟ ಅಡಳಿತ ವೈದ್ಯಾಧಿಕಾರಿಗಳಾದ ಡಾ.ನಳಿನಾಕ್ಷಿ   ಕ್ಷೇತ್ರ ಶಿಕ್ಷಣಾಧಿರಿ ಮೂಗಪ್ಪ ,ಬೆಳಗಟ್ಟ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಡಿ., ಯೋಗ ಪ್ರಚಾರಕ್ ರವಿ ಕೆ.ಅಂಬೇಕರ್, ಅಂಗನವಾಡಿ ಮೇಲ್ವಿಚಾರಕರಾದ ವಿನೋದಮ್ಮ, ಕ್ಷಯರೋಗ ನಿಯಂತ್ರಣ ಕಚೇರಿಯ ಎಸ್ ಟಿ ಎಲ್ ಎಸ್ ಮಹೇಂದ್ರ, ಸಮುದಾಯ ಅರೋಗ್ಯ ಅಧಿಕಾರಿ ಮಂಜುಶ್ರೀ, ಆರೋಗ್ಯ ಸುರಕ್ಷಣಾಧಿಕಾರಿ ಶ್ರೀಮತಿ ಶಾಂತಮ್ಮ, ನಿರ್ಮಲ, KHPTಯ ಸದಸ್ಯರಾದ ತಿಪ್ಪಮ್ಮ, ಪ್ರಿಯದರ್ಶಿನಿ,   ಫಲಾನುಭವಿಗಳು, ಅಶಾ ಮತ್ತು ಅಂಗನವಾಡಿ  ಕಾರ್ಯಕರ್ತೆಯರು, ಗ್ರಾಮಸ್ಥರು, ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!