ಉದಯವಾಹಿನಿ ಕುಶಾಲನಗರ :-ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ 2೦22-23 ನೇ ಸಾಲಿನ ಹಾಗೂ 56 ನೇ ವಾರ್ಷಿಕ ಮಹಾಸಭೆಯು ಯೂನಿಯನ್ ಅಧ್ಯಕ್ಷರಾದ ಎ.ಕೆ.ಮನುಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಯೂನಿಯನ್ ಸಭಾಂಗಣದಲ್ಲಿ ನಡೆಯಿತು.ಯೂನಿಯನ್ ಅಧ್ಯಕ್ಷರಾದ ಎ.ಕೆ.ಮನು ಮುತ್ತಪ್ಪ ಅವರು ಮಾತನಾಡಿ, ಸಹಕಾರ ಸಂಘಗಳ ಸದಸ್ಯರು ಸಕ್ರೀಯವಾಗಿ ಸಂಘದ ಕಾರ್ಯ ಚಟುವಟಿಕೆಗಳಲ್ಲಿ, ವಿಶೇಷವಾಗಿ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಬೇಕು. ಆಗ ಮಾನದಂಡಗಳಿಗೆ ಅನುಸಾರವಾಗಿ ಚುನಾವಣೆ ಹಕ್ಕು ಹಾಗೂ ಸದಸ್ಯತ್ವ ಅರ್ಹತೆಗಳು ಮುಂದುವರೆಯುತ್ತವೆ. ಯೂನಿಯನ್ ಪ್ರಮುಖ ಉದ್ದೇಶವಾದ ಶಿಕ್ಷಣ, ತರಬೇತಿ, ಪ್ರಚಾರ ಕಾರ್ಯಕ್ರಮಗಳಲ್ಲಿ ಸದಸ್ಯ ಸಂಘಗಳ ಪ್ರತಿನಿಧಿಗಳು ಕಡ್ಡಾಯವಾಗಿ ಹಾಜರಾಗಿ ಮಾಹಿತಿಯನ್ನು ಸದಸ್ಯರಿಗೆ ತಲುಪುವ ಕೆಲಸ ಮಾಡಬೇಕು.ಸದಸ್ಯ ಸಂಘಗಳ ಕೋರಿಕೆ ಅನ್ವಯ ಸಹಕಾರ ಕ್ಷೇತ್ರಕ್ಕೆ ಸಂಬ0ಧಿಸಿದ ವಿವಿಧ ರೀತಿಯ ತರಬೇತಿಗಳನ್ನು, ಕಾರ್ಯಾಗಾರ ಹಮ್ಮಿಕೊಂಡು ಸಂಘಗಳ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಪ್ರಯತ್ನಿಸಬಹುದಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಕಾಫಿಗೆ ಉಚಿತ 10 ಎಚ್.ಪಿ. ಉಚಿತ ವಿದ್ಯುತ್ ಪೂರೈಸಬೇಕೆಂದು ಸರ್ಕಾರವನ್ನು ಕೋರುವಂತೆ ಈ ಸಂದರ್ಭದಲ್ಲಿ ನಿರ್ಣಯಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಪಿ.ಸಿ.ಮನು ರಾಮಚಂದ್ರ, ನಿರ್ದೇಶಕರಾದ ಬಿ.ಎ.ರಮೇಶ್ ಚಂಗಪ್ಪ, ಎನ್.ಎ.ರವಿಬಸಪ್ಪ, ಪ್ರೇಮ ಸೋಮಯ್ಯ, ಸಿ.ಎಸ್.ಕೃಷ್ಣ ಗಣಪತಿ, ಕನ್ನಂಡ ಸಂಪತ್, ಪಿ.ವಿ.ಭರತ್, ಕೆ.ಪಿ.ಮುದ್ದಯ್ಯ, ಎನ್.ಎ.ಉಮೇಶ್ ಉತ್ತಪ್ಪ, ಪಿ.ಬಿ.ಯತೀಶ್, ವಿ.ಕೆ.ಅಜಯ್ ಕುಮಾರ್, ಸಹಕಾರ ಸಂಘಗಳ ಉಪನಿಬಂಧಕರಾದ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು. ಯೂನಿಯನ್ ನಿರ್ದೇಶಕರಾದ ಕೆ.ಎಂ.ತಮ್ಮಯ್ಯ ಸ್ವಾಗತಿಸಿ, ಕೆ.ಎಸ್. ಗಣಪತಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!