ಉದಯವಾಹಿನಿ ದೇವದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಒಂದು ಅಸ್ತ್ರ ಇದ್ದಂತೆ. ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಬಸವ ಕಾಲೇಜು ಆವರಣದಲ್ಲಿ ತಾಲೂಕ ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ  ದಿನಾಚರಣೆ ಹಾಗೂ ಸಾಮೂಹಿಕ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಬರೆದು ಸಮಾನತೆ ನೀಡಿದ್ದು, ಭಾರತದಲ್ಲಿ ನಾವೆಲ್ಲರೂ ಹುಟ್ಟಿದ್ದು, ಪಣ್ಯ ಎಂದರು. ಬಿಟಿಷರ್ ಗುಲಾಮಗಿರಿಯಿಂದ ಬದುಕಲು ಮುಕ್ತ ಸ್ವಾತಂತ್ರ್ಯ ಕಲ್ಪಿಸಿಕೊಟ್ಟಿದ್ದಾರೆ. ಅವರ ಆದರ್ಶ ತತ್ವಗಳು ಜೀವನಕ್ಕೆ ಅಳವಡಿಸಿಕೊಳ್ಳುವ ಜತೆ ಸಂವಿಧಾನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಹೇಳಿದರು. ಇವತ್ತಿನ ದಿನ ಒಂದು ಹಬ್ಬ ಇದ್ದಂತೆ. ನಾವೆಲ್ಲರೂ ಡಾ.ಬಿ.ಆರ್. ಅಂಬೇಡ್ಕರ್ ಕೊಟ್ಟಿರುವಂತ ಮಾರ್ಗದಲ್ಲೇ ನಡೆಯಬೇಕು. ಸಂವಿಧಾನ ಶೋಷಿತ, ಹಿಂದುಳಿದ, ದಲಿತ ಸಮುದಾಯಗಳಿಗೆ ಒಂದು ಅಸ್ತ್ರ ಇದ್ದಂತೆ. ಅವರ ಸಂವಿಧಾನ ನಾವೆಲ್ಲರೂ ಒಂದೊಂದು ಸ್ಥಾನಕ್ಕೆ ಬರಲು ಪ್ರೇರಣೆ ಆಗಿದೆ ಎಂದು ಹೇಳಿದರು. ಸಂವಿಧಾನ ಪೀಠಿ ಶಾಲಾ-ಕಾಲೇಜಿನಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಅರಿವು ಮೂಡಿಸಬೇಕು. ಇಂತಹ ಕಾರ್ಯಕ್ರಮ ಹಬ್ಬದಂತೆ ಸಾಕ್ಷಿ ಎಂಬಂತಿದೆ ಎಂದರು. ಸಂವಿಧಾನ ಪೀಠಿಕೆ ತಪ್ಪು ಓದಿದ ತಹಶೀಲ್: ಇಲ್ಲಿನ ಬಸವ ಕಾಲೇಜು ಆವರಣದಲ್ಲಿ ತಾಲೂಕ ಆಡಳಿತ ವತಿಯಿಂದ ಆಯೋಜಿಸಿದ ಭಾರತದ ಸಂವಿಧಾನ ಪೀಠಿಕೆ ಕಾರ್ಯಕ್ರಮ ಶಾಸಕಿ ಕರೆಮ್ಮ ಗೋಪಾಲಕೃಷ್ಣ ಉದ್ಘಾಟಿಸಿ ನಂತರ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭಾರತದ ಸಂವಿಧಾನ ಪೀಠಿಕೆ ಓದುತ್ತಿರುವ ವೇಳೆ ಆಗಾಗ ತಪ್ಪು ತಪ್ಪು ಓದುವ ಜತೆ ತಡಪಡಿಸಿದರು. ಕಾರ್ಯಕ್ರಮ ದಲಿತ ಸಂಘಟನೆಯ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು. ಶಾಸಕಿ ಕರೆಮ್ಮ ಗೋಪಾಲಕೃಷ್ಣ ಉದ್ಘಾಟನೆ ಭಾಷಣ ಮಾಡಿದ ನಂತರ ವೇದಿಕೆಯಿಂದ ತೆರಳುತ್ತಿದ್ದಂತೆ ತಾಲೂಕ ಮಟ್ಟದ ಅಧಿಕಾರಿಗಳು ವೇದಿಕೆಯಿಂದ ಹೋಗುತ್ತಿರುವ ವೇಳೆ ದಲಿತ ಮುಖಂಡರು ವಿರುದ್ಧ ವ್ಯಕ್ತಪಡಿಸಿದ್ದರಿಂದ ಕೆಲವೊತ್ತ ವೇದಿಕೆ ಕಾರ್ಯಕ್ರಮ ಗೊಂದಲಕ್ಕೀಡಾಯಿತು. ಬಿಸಿಲಿನಲ್ಲಿ ಮಕ್ಕಳು: ಭಾರತ ಸಂವಿಧಾನ ಪೀಠಿಕೆ ಕಾರ್ಯಕ್ರಮಕ್ಕೆ ಕೆಲ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಂದಿದ್ದರೂ. ಬಹುತೇಕರಿಗೆ ಸೂಕ್ತ ಆಸನ ವ್ಯವಸ್ಥೆ ಸಿಕ್ಕಿದ್ದೂ ಕೆಲ ಶಾಲಾ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಇಲ್ಲದೇ ಕಾರಣ ರಣ ಬಿಸಿಲಿನಲ್ಲಿ ನೆಲದ ಮೇಲೆ ಕುಳಿತು ಕಾರ್ಯಕ್ರಮ ವಿಕ್ಷೀಸಿದರು. ಶಾಸಕಿ ಸೇರಿ ಅಧಿಕಾರಿಗಳ ವರ್ಗ ನೆರಳಿನ ವೇದಿಕೆ ಮೇಲೆ ಕುಳಿತು ಭಾಷಣ ಬೀಗಿದರು. ಇದಕ್ಕೆ ಬಹುತೇಕ ದಲಿತ ಮುಖಂಡರು ತಾಲೂಕ ಆಡಳಿತ ವಿರೋಧ ಆಕ್ರೋಶ ವ್ಯಕ್ತಪಡಿಸಿದರು. ಪೂರಕ ಮಾಹಿತಿ ಕೊರತೆ ಕಾರ್ಯಕ್ರಮ ಆಯೋಜಿಸಿದ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡ ಇಲಾಖೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದರು. ಇದೇ ಸಂದರ್ಭದಲ್ಲಿ ಟಿಎಪಿಎಂಸಿ ಅಧ್ಯಕ್ಷ ಶರಣಗೌಡ ಕಮತಿಗಿ, ತಾಪಂ ಇಒ ರಾಮರೆಡ್ಡಿ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸುಖದೇವ್, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಪಿಐ ಹೊಸಕೇರಪ್ಪ, ಸಿಪಿಐ ಗೂಂಡರಾವ್, ಕೃಷಿ ಅಧಿಕಾರಿ ಬಸವರಾಜ ಸಿದ್ದರೆಡ್ಡಿ, ಡಾ.ಬನದೇಶ್ವರ, ನಂದಕುಮಾರ, ವೆಂಕಟಪ್ಪ, ಮಾನಪ್ಪ ಮೇಸ್ತ್ರಿ, ಮಹಾಂತೇಶ ಭವಾನಿ, ವಿಶ್ವನಾಥ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!