
ಉದಯವಾಹಿನಿ ಯಾದಗಿರಿ : ನಮ್ಮ ಮನೆ, ವಾರ್ಡ್ ಜೊತೆಗೆ ಗ್ರಾಮವನ್ನು ಸ್ವಚ್ಛವಾಗಿಡಲು ಗ್ರಾಮಸ್ಥರಿಗೆ ಸ್ವಚ್ಛತೆ ಅರಿವು ಮೂಡಿಸುವತ್ತ ಎಲ್ಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಿ, ಜನರಲ್ಲಿ ಬದಲಾವಣೆ ತರುವಲ್ಲಿ ಕಾರ್ಯನಿರ್ವಹಿಸಿ. ಆಗ ಮಾತ್ರ ಮಾದರಿ ಸ್ವಚ್ಛ ಗ್ರಾಮವಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಗರಿಮಾ ಪನ್ವಾರ್ ಅವರು ಸೂಚಿಸಿದರು.ಜಿಲ್ಲೆಯ ಶಹಾಪುರ ತಾಲೂಕಿನ ದಿಗ್ಗಿ ಗ್ರಾಮದ ಅಂಬೇಡ್ಕರ್ ಭವನದ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್ ಯಾದಗಿರಿ, ತಾಲ್ಲೂಕು ಪಂಚಾಯತ್ ಶಹಾಪುರ, ಗ್ರಾಮ ಪಂಚಾಯತ್ ಹೋತಪೇಟ ಮತ್ತು ಸ್ವಚ್ಛ ಭಾರತ ಮಿಷನ್(ಗ್ರಾ) ಹಂತ-2 ವತಿಯಿಂದ ಸ್ವಚ್ಛತೆಯೇ ಸೇವೆ ಪಾಕ್ಷಿತ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿಜ್ಞಾ ವಿಧಿ ಭೋದಿಸಿ ಅವರು ಮಾತನಾಡಿದರು.ನಮ್ಮ ಮನೆ ಮತ್ತು ಗ್ರಾಮಗಳ ಸ್ವಚ್ಛತೆ ಇಂದ ಪರಿಸರ ಮತ್ತು ಮನುಷ್ಯನಲ್ಲಾಗುವ ಬದಲಾವಣೆ ಕುರಿತಾಗಿ ತಿಳಿ ಹೇಳಲು ತಿಳಿಸಿದ ಅವರು, ರಸ್ತೆ ಬದಿಯಲ್ಲಿ ಮನೆ ಅಕ್ಕ ಪಕ್ಕದಲ್ಲಿ ಕಸ ಬಿಸಾಡುವುದು ಆರೋಗ್ಯಕ್ಕೆ ಮತ್ತು ನಿಸರ್ಗಕ್ಕೆ ಕೆಡಕನ್ನು ಉಂಟುಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿ ಹಸಿ ಕಸ, ಒಣ ಹಸಗಳನ್ನು ವಿಂಗಡಿಸಿ ಗ್ರಾಮ ಪಂಚಾಯಿತಿಯಿಂದ ಬರುವ ಕಸ ಸಂಗ್ರಹಣ ವಾಹನದಲ್ಲಿ ಹಾಕಿದರೆ ಗ್ರಾಮವು ಸ್ವಚ್ಛ, ಸುಂದರ ಆರೋಗ್ಯರವಾಗಿಸುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು.
ಇಂದಿನ ಯುವ ಜನಾಂಗ ಮತ್ತು ಹಳ್ಳಿಗಳಲ್ಲಿ ಜನಸಾಮಾನ್ಯರ ಬಿಡುವಿನ ಸಮಯದಲ್ಲಿ ಸ್ವಚ್ಛತಾ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಮಾದರಿ ಗ್ರಾಮ ಮಾಡುವಲ್ಲಿ ಶ್ರಮಿಸಿದ್ದಲ್ಲಿ ಶ್ರೇಯಸ್ಸು ಇಡಿ ಗ್ರಾಮಕ್ಕೆ ಸಲ್ಲುತ್ತದೆ ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹಾಗೂ ಸ್ವಚ್ಚ ಭಾರತ ಮಿಷನ್ ಜಿಲ್ಲಾ ನೋಡಲ್ ಅಧಿಕಾರಿಗಳಾದ ಗುರುನಾಥ ಗೌಡಪ್ಪನವರ್, ತಾಲ್ಲೂಕು ಸಹಾಯಕ ನಿರ್ದೇಶಕರು ಭೀಮರಾಯ ಬಿರಾದಾರ್,ಎ.ಎಚ್.ಓ ಡಾ. ವಿವೇಕಾನಂದ, ಸಿಡಿಪಿಓ ಮೀನಾಕ್ಷಿ, ಸ್ವಚ್ಛ ಭಾರತ ಮಿಷನ್ ಜಿಲ್ಲಾ ಹಾಗೂ ತಾಲೂಕು ಸಮಾಲೋಚಕರು, ಗ್ರಾಮ ಪಂಚಾಯತ್ ಸಿಬ್ಬಂದಿಯವರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
