
ಉದಯವಾಹಿನಿ,ಶಿಡ್ಲಘಟ್ಟ: ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಈ ಕಾಲೇಜಿಗೆ ಏನು ಬೇಕಾದರೂ ಸಹ ಮಾಡಲು ಸಿದ್ಧನಿದ್ದೇನೆ. ಮುಂದಿನ ದಿನಗಳಲ್ಲಿ ಈ ಕಾಲೇಜಿನಲ್ಲಿ ಸಾವಿರ ವಿದ್ಯಾರ್ಥಿಗಳನ್ನು ನಾನು ನೋಡಬೇಕು ಎಂದು ಶಾಸಕ ಬಿ.ಎನ್. ರವಿಕುಮಾರ್ ಅಭಿಪ್ರಾಯ ಪಟ್ಟರು.ನಗರದ ಪ್ರಥಮ ದರ್ಜೆ ಕಾಲೇಜಿನ ೨೦೨೨-೨೩ ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋ ಭವ ಎಂದು ಹಿರಿಯರು ಹೇಳುತ್ತಾರೆ. ಮನೆಯಲ್ಲಿ ತಂದೆ ತಾಯಿಯ ಮಾತು, ಶಾಲಾ ಕಾಲೇಜುಗಳಲ್ಲಿ ಗುರುಗಳು ಹೇಳಿದ ಪಾಠವನ್ನು ಶ್ರದ್ಧೆಯಿಂದ ಕೇಳಿ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಹಾಗೂ ತಂದೆ ತಾಯಿಗಳಿಗೆ ಕೀರ್ತಿ ತರಬೇಕು ಎಂದರು. ನನ್ನ ತಾಲೂಕಿನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ ಅದಕ್ಕೆ ಬೇಕಾಗುವ ವ್ಯವಸ್ಥೆಗಳನ್ನು ಕಲ್ಪಿಸಿ ಕೊಡುತ್ತೇನೆ. ಈ ಕಾಲೇಜಿನಲ್ಲಿ 450ರಿಂದ 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ 1000 ವಿದ್ಯಾರ್ಥಿಗಳನ್ನ ಈ ಕಾಲೇಜಿನಲ್ಲಿ ನೋಡಬೇಕು ಅದಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯು ಹಾಗೂ ಈ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರರು ಪೋಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯವರು ಸಹಕರಿಸಬೇಕು ಎಂದರು. ಬುಡಕಟ್ಟು ಹಾಗೂ ಜಾನಪದ ತಜ್ಞ ಡಾ.ಆಯನೂರು ಚಂದ್ರೇಗೌಡರು ಜನಪದ ಹಾಗೂ ಸೋಬಾನೆಪದಗಳನ್ನು ಹಾಡಿ ನೆರೆದಿದ್ದ ಗಣ್ಯರನ್ನು ಹಾಗೂ ಕಾಲೇಜಿನ ವಿದ್ಯಾರ್ಥಿಗಳನ್ನು ರಂಜಿಸಿದರು. ಮಾನಸಿಕ ನೆಮ್ಮದಿ ನೀಡುವಂತಹ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಿ ಅದು ಉದ್ಯೋಗ ಆಗಬಹುದು ಅಥವಾ ನಿಮ್ಮ ಪ್ರತಿಭೆ ತೊರಿಸುಂತಹ ಕಲಾವಿದರಾಗಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜಯ ಪತಾಕೆ ಹಾರಿಸಿದ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನ ಶಾಸಕ ರವಿಕುಮಾರ್ ವಿತರಿಸಿದರು.ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎನ್ ಸ್ವಾಮಿ, ಪ್ರಾಂಶುಪಾಲ ಡಾ.ವಿ ವೆಂಕಟೇಶ್,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಕ್ ಮುನಿಯಪ್ಪ, ತಾದೂರು ರಘು, ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್, ನಗರಸಭಾ ಸದಸ್ಯರಾದ ಬಸ್ ಮಂಜಣ್ಣ ,ಚೈತ್ರ ಮನೋಹರ್, ಅನಿಲ್ ಕುಮಾರ್,ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ವಿಸ್ಡಂ ನಾಗರಾಜ್, ಉಪನ್ಯಾಸಕ ಡಾ. ಶಫಿವುಲ್ಲಾ ,ಡಾ. ಉಮೇಶ್ ರೆಡ್ಡಿ, ಬೋಧಕ ಹಾಗೂ ಬೋಧಕೇತರರು ಉಪಸ್ಥಿತರಿದ್ದರು.
