
ಉದಯವಾಹಿನಿ, ಔರಾದ್ :ದೇಶ ಮೊದಲು ಎನ್ನುವ ಸಿದ್ಧಾಂತ ಹೊಂದಿರುವ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷವಾಗಿದೆ. ಜನತೆಯಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸಲು ನಿರಂತರವಾಗಿ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಈ ದಿಶೆಯಲ್ಲಿ ಪಕ್ಷದ ವರಿಷ್ಠರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ವಚ್ಛ ಭಾರತ ಅಭಿಯಾನ, ತಿರಂಗಾ ಯಾತ್ರಾ, ಮನೆ-ಮನೆಯಲ್ಲಿ ಧ್ವಜಾರೋಹಣದಂತಹ ಅನೇಕ ಮಾದರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅದರಂತೆ ಈ ಬಾರಿ ಜನರಲ್ಲಿ ತನ್ನ ಮಣ್ಣಿನ ಮಹತ್ವದ ಕುರಿತು ಜಾಗೃತಿ ಮೂಡಿಸಲು ದೇಶಾದ್ಯಂತ ನನ್ನ ಮಣ್ಣು ನನ್ನ ದೇಶ ಎನ್ನುವ ವಿನೂತನ ಅಭಿಯಾನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ಮುಂದಿನ ದಿನಗಳಲ್ಲಿ ಭಾರತ ದೇಶವು ಜಗತ್ತಿನ ಶಕ್ತಿಶಾಲಿ ರಾಷ್ಟವಾಗಿ ಹೊರಹೊಮ್ಮಲಿದೆ ಎಂದು ಮಾಜಿ ಶಾಸಕರಾದ ಗುಂಡಪ್ಪ ವಕೀಲ ಹೇಳಿದರು.
ಭಾರತೀಯ ಜನತಾ ಪಕ್ಷ ಔರಾದ(ಬಾ) ಮಂಡಲ ಘಟಕದ ವತಿಯಿಂದ ಔರಾದ ಪಟ್ಟಣದ ಶ್ರೀ ಅಮರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ನನ್ನ ಮಣ್ಣು ನನ್ನ ದೇಶ ಅಭಿಯಾನ ನಡೆಯಿತು. ಬಿಜೆಪಿ ತಾಲೂಕು ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ ಮಾತನಾಡಿ, ಹುತಾತ್ಮ ಯೋಧರನ್ನು ಗೌರವಿಸುವ ಉದ್ದೇಶದಿಂದ ದೇಶಾದ್ಯಂತ ‘ಮೇರಿ ಮಾಟಿ ಮೇರಾ ದೇಶ್’(ನನ್ನ ಮಣ್ಣು, ನನ್ನ ದೇಶ) ಎಂಬ ಅಭಿಯಾನ ನಡೆಸಲಾಗುತ್ತಿದ್ದು, ದೇಶದ ಮೂಲೆ ಮೂಲೆಗಳಿಂದ ಮಣ್ಣು ಸಂಗ್ರಹಿಸಿ, ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ದ ಸ್ಮಾರಕದ ಬಳಿ ಆ ಮಣ್ಣಿನಲ್ಲಿ ಗಿಡಗಳನ್ನು ನೆಟ್ಟು ಅಮೃತ ಉದ್ಯಾನವನ ನಿರ್ಮಿಸಲಾಗುತ್ತಿದೆ. ಈ ಉದಯಾನವು ಏಕ ಭಾರತ ಶ್ರೇಷ್ಠ ಭಾರತ ಸಂದೇಶ ನೀಡಲಿದೆ ಎಂದು ಹೇಳಿದರು. ಭಾರತೀಯ ಜನತಾ ಪಕ್ಷವು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಬಳಿಗೆ ಹೋಗುವ ಪಕ್ಷವಾಗದೇ ಸದಾ ಜನರೊಂದಿಗೆ ಬೆರೆಯುವ ಅಪರೂಪದ ಪಕ್ಷವಾಗಿದೆ. ಕಾರ್ಯಕರ್ತರು ಸದಾ ಜಾಗೃತರಾಗಿ ಕೆಲಸ ಮಾಡುವ ಏಕೈಕ ಪಕ್ಷವಾಗಿದೆ ಎಂದು ತಿಳಿಸಿದರು. ಇದೇ ವೇಳೆ ಭಾರತ ದೇಶವು ೨೦೪೭ರ ವರೆಗೆ ಶಕ್ತಿಶಾಲಿ ದೇಶವಾಗಬೇಕೆಂದು ಕಾರ್ಯಕರ್ತರು ಪ್ರಮಾಣ ಮಾಡಿದರು. ಈ ಸಂದರ್ಭದಲ್ಲಿ ಹಾವೇರಿಯ ಗುರುಪಾದ ಶಾಸ್ತ್ರಗಳು, ಮಂಡಲ ಪ್ರಭಾರಿಗಳಾದ ವೀರಣ್ಣ ಕಾರಬಾರಿ, ಮುಖಂಡರಾದ ವಸಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ಖಂಡೋಬಾ ಕಂಗಟೆ, ದೊಂಡಿಬಾ ನರೋಟೆ, ಸಂದೀಪ ಪಾಟೀಲ, ಶಿವಾಜಿರಾವ ಕಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ರಾಜೇಂದ್ರ ಮಾಳಿ, ಶಿವರಾಜ ಅಲ್ಮಾಜೆ, ವಿನಾಯಕ ಜಗದಾಳೆ, ಪ್ರಕಾಶ ಅಲ್ಮಾಜೆ, ಗಣೇಶ ಕಾರೆಗಾಂವೆ, ರಾಮರೆಡ್ಡಿ ಪಾಟೀಲ, ಮಾರುತಿರೆಡ್ಡಿ ಪಟ್ನೆ, ಸಂಜು ಮಾನಕಾರೆ, ನಾಗಶೆಟ್ಟಿ ಗಾದಗೆ, ಬಸವರಾಜ ಹಳ್ಳೆ, ಸಂದೀಪ ಪಾಟೀಲ, ಪ್ರಕಾಶ ಜೀರ್ಗಾ, ಸಂಜು ಮುರ್ಕೆ, ಸಚಿನ್ ಬಿರಾದಾರ, ಉದಯ ಸೋಲಾಪೂರೆ, ತಾನಾಜಿ ಡೊಂಬಾಳೆ, ಪ್ರವೀಣ ಕಾರಬಾರಿ, ಅಶೋಕ ಮೇತ್ರೆ, ಯೋಗೇಶ ಸುರನಾರ, ಇನಿಲ ಸಂಗಮ್, ಭರತ ಕದಂ, ರಮೇಶ ಪಾಟೀಲ, ಪ್ರಕಾಶ ಖಾನಾಪೂರೆ, ಪ್ರಕಾಶ ವಾಲ್ದೊಡ್ಡಿ ಹಾಗೂ ಇತರರಿದ್ದರು.
