
ಉದಯವಾಹಿನಿ,ಚಿಂಚೋಳಿ: ಪಟ್ಟಣಕ್ಕೆ ಆಗಮಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಮೂಲ ಖಾತೆ ಸಹ ಸಚಿವರಾದ ಭಗವಂತ ಖೂಬಾವರಿಗೆ ತಾಲ್ಲೂಕಿನ ಹುಡದಳ್ಳಿ ಗ್ರಾಮದ ವೀರಶೈವ ಲಿಂಗಾಯತ ಸಮಾಜದ ಬಾಂಧವರಿಗೆ ಸಮೂದಾಯ ಭವನ ಮಂಜೂರು ಮಾಡಬೇಕೆಂದು ತಾಲೂಕ ವೀರಶೈವ ಲಿಂಗಾಯತ ಸಮಾಜದ ತಾಲೂಕಾಧ್ಯಕ್ಷರಾದ ಸಂಜೀವಕುಮಾರ್ ಪಾಟೀಲ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿದರು. ಅಶೋಕ ಪಾಟೀಲ,ಪವನ ಕುಮಾರ ಪಾಟೀಲ,ವೀರೇಶ ದೇಸಾಯಿ,ಸಂಜು ಪಾಟೀಲ ಎಂಪಳ್ಳಿ,ಭೀಮಶೇಟ್ಟಿ ಮುರುಡಾ,ಸಂತೋಷ ಗಡಂತಿ,ಅಲ್ಲಂಪ್ರಭು ಪಾಟೀಲ,ಸಂತೋಷ ಕಶೆಟ್ಟಿ,ವಿವೇಕ ಪಾಟೀಲ,ವಿಶಾಲ ಪಾಟೀಲ,ಓಂ ಪ್ರಕಾಶ ಪಾಟೀಲ,ಇದ್ದರು
