ಉದಯವಾಹಿನಿ, ಅಫಜಲಪುರ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳ ಪ್ರಯುಕ್ತ ಶಾಂತಿ ಸಭೆ ನಡೆಯಿತು. ಸಿಪಿಐ ಪಂಡಿತ ಸಗರ ನೇತೃತ್ವದಲ್ಲಿ ಶಾಂತಿ ಸಭೆ ಜರುಗಿತು. ಸಭೆ ಉದ್ದೇಶಿಸಿ ಮಾತನಾಡಿದ ಸಿಪಿಐ ಪಂಡಿತ್ ಸಗರ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳು ಭಾಂದವ್ಯ ಬೇಸೆಯುವ ಹಬ್ಬಗಳಾಗಿದ್ದು, ಎಲ್ಲಾ ಧರ್ಮಿಯರು ಸೊದರತೆಯ ಭಾವದಿಂದ ಹಬ್ಬಗಳನ್ನು ಆಚರಣೆ ಮಾಡಬೇಕು.ಯಾರೂ ಕಾನೂನಿನ ಚೌಕಟ್ಟು ಮೀರಬಾರದು. ಸಂತಸ ಸಡಗರದಿಂದ ಶಾಂತಿಯುತವಾಗಿ ಹಬ್ಬಗಳನ್ನು ಮಾಡಬೇಕು ಎಂದರು. ಗಣೇಶ ಕುಡಿಸುವ ಮೊದಲು ಪೊಲೀಸ್ ಇಲಾಖೆ ಅಥವಾ ಸಂಬಂದ ಪಟ್ಟ ಇಲಾಖೆಯ ಪರವಾನಿಗೆ ಪಡೆದುಕೊಳ್ಳಬೇಕು.ನಿಗದಿತ ಸಮಯದಲ್ಲಿ ಮೆರವಣಿಗೆಗಳು ಮುಗಿಸಬೇಕು ಎಂದರು.ನಂತರ ಮಾತನಾಡಿದ ಪಿಎಸ್ಐ ಮಡಿವಾಳಪ್ಪ ಭಾಗೋಡಿ ,ಭಾವನಾತ್ಮಕ ಭಾವ ಬೇಸೆಯುವ ಹಬ್ಬಗಳಾದ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳು, ಅವುಗಳ ಸ್ವಾರಸ್ಯವನ್ನು ನಾವೆಲ್ಲರೂ ಅರಿತು ಯಾವುದೇ ಕೋಮುಗಲಭೆಗಳಿಗೆ ಎಡೆ ಮಾಡಿಕೊಡದೇ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಬೇಕು ಎಂದರು. ಇಲ್ಲಿಯವರೆಗೂ ಅಫಜಲಪುರ ತಾಲ್ಲೂಕಿನಲ್ಲಿ ಗಣೇಶೋತ್ಸವದಲ್ಲಿ ಯಾವುದೇ ಗದ್ದಲ ಗಲಾಟೆ ಘಟನೆಗಳು ನಡೆದಿಲ್ಲ ಮುಂದೆಯೂ ನಡೆಯುವದಿಲ್ಲ ಎಂದು ಭಾವಿಸಿದ್ದೆನೆ. ಎಲ್ಲರೂ ಹಬ್ಬಗಳಲ್ಲಿ ಭಾಗಿಯಾಗಿ ಸಡಗರದಿಂದ ಯಾವುದೇ ಕೋಮಿನ ಧರ್ಮಿಯರಿಗೆ ತೊಂದರೆಯಾಗದಂತೆ ಆಚರಿಸೋಣ.ಪೊಲೀಸರೊಂದಿಗೆ ತಾವು ಕೂಡಾ ಉತ್ತಮ ಬಾಂದವ್ಯದೊಂದಿಗೆ ಸಹಕರಿಸಿ ಎಂದರು.ನಂತರ ಸಭೆಯಲ್ಲಿ ಮುಖಂಡರಾದ ಮಕ್ಬೂಲ ಪಟೇಲ, ಮತ್ತಿನ್ ಪಟೇಲ್ ,ಮಳೇಂದ್ರ ಡಾಂಗೆ  ದಾನು ಪತಾಟೇ, ಆನಂದ ಶೆಟ್ಟಿ, ರಾಜು ಆರೇಕಾರ, ಸೇರಿದಂತೆ ಅನೇಕರು ಶಾಂತಿಯುತ ಗಣೇಶೋತ್ಸವಕ್ಕೆ ಸಲಹೆ ಸೂಚನೆಗಳನ್ನು ನೀಡಿದರು.ಇದೇ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ, ಅಗ್ನಿಶಾಮಕ ಠಾಣೆಯ ಅಧಿಕಾರಿ ವಿಶ್ವನಾಥ,ತಾಲೂಕಿನ ಪ್ರಮುಖರಾದ, ಚಂದು ದೇಸಾಯಿ,ಪುರಸಭೆ ಸದಸ್ಯರು ತಾಲೂಕಿನ ಮುಖಂಡರು ಸಭೆಯಿಂದ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!