ಉದಯವಾಹಿನಿ, ಮುಂಬೈ : ಮರಾಠವಾಡ ಪ್ರಾಂತ್ಯದ ಅಭಿವೃದ್ಧಿಗಾಗಿ ₹ 60 ಸಾವಿರ ಕೋಟಿಯ ಪ್ಯಾಕೇಜ್ ಅನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಶನಿವಾರ ಘೋಷಿಸಿದರು.
‘ವಿವಿಧ ಯೋಜನೆಗಳು, ಕಾರ್ಯಯೋಜನೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಾಗಿ ಮರಾಠವಾಡ ಪ್ರಾಂತ್ಯಕ್ಕೆ ₹ 45 ಸಾವಿರ ಕೋಟಿ ಪ್ಯಾಕೇಜ್ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೇ ನೀರಾವರಿ ಯೋಜನೆಗಳಿಗಾಗಿ ₹ 14 ಸಾವಿರ ಕೋಟಿ ಮೊತ್ತದ ಪರಿಷ್ಕೃತ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಇದು ಎಂಟು ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಒಳಪಡಿಸಲು ಅನುವು ಮಾಡಿಕೊಡುತ್ತದೆ. ಒಟ್ಟಾರೆಯಾಗಿ ಇದು ಸುಮಾರು ₹ 60 ಸಾವಿರ ಕೋಟಿಯ ಪ್ಯಾಕೇಜ್ ಆಗಿದೆ’ ಎಂದು ಶಿಂದೆ ಹೇಳಿದರು.
‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರು ವಿಶೇಷ ಸಭೆಯನ್ನು ಪಂಚತಾರಾ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಿದ್ದಾರೆ’ ಎಂದು ವಿರೋಧ ಪಕ್ಷಗಳು ಮಾಡಿದ ಆರೋಪಗಳನ್ನು ಅಲ್ಲಗಳೆದ ಶಿಂದೆ ಅವರು, ‘ನಾವೆಲ್ಲರೂ ಸರ್ಕಾರಿ ಅತಿಥಿ ಗೃಹದಲ್ಲೇ ತಂಗಿದ್ದೇವೆ’ ಎಂದು ಸ್ಪಷ್ಟನೆ ನೀಡಿದರು.
