ಉದಯವಾಹಿನಿ, ಇರಾನ್ ವಿರುದ್ಧದ ಸಮರಕ್ಕೆ ಅಮೆರಿಕ ಸನ್ನದ್ಧವಾಗುತ್ತಿರುವ ಬೆನ್ನಲ್ಲೇ, ಅನಿರೀಕ್ಷಿತ ದುರಂತವೊಂದು ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಅತಿದೊಡ್ಡ ಆಘಾತ ನೀಡಿದೆ. ಇರಾಕ್ನಲ್ಲಿ) ಅಮೆರಿಕದ ) ಅತ್ಯಾಧುನಿಕ ‘KC-135’ ಟ್ಯಾಂಕರ್ ವಿಮಾನ ಪತನಗೊಂಡಿದ್ದು, ಯುದ್ಧದ ತಂತ್ರಗಾರಿಕೆಗೆ ವಿಧಿಯೇ ಅಡ್ಡಗಾಲು ಹಾಕಿದಂತಿದೆ. ಗಡಿಭಾಗದಲ್ಲಿ ಸಂಘರ್ಷ ಸೃಷ್ಟಿಯಾಗಿರುವ ಹೊತ್ತಲ್ಲೇ ಸಂಭವಿಸಿದ ಈ ಕ್ರ್ಯಾಶ್, ವೈಟ್ ಹೌಸ್ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ
ಅಮೆರಿಕದ ಪ್ರಕಾರ!
ಈ ವಿಮಾನವು ಮಧ್ಯ ಗಗನದಲ್ಲಿ ಇತರ ಯುದ್ಧವಿಮಾನಗಳಿಗೆ ಇಂಧನ ತುಂಬಿಸುವ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತಿತ್ತು. ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ವಿಮಾನವು ನಿಯಂತ್ರಣ ಕಳೆದುಕೊಂಡು ಪಶ್ಚಿಮ ಇರಾಕ್ ಪ್ರದೇಶದಲ್ಲಿ ಅಪ್ಪಳಿಸಿದೆ. ಈ ವಿಮಾನದಲ್ಲಿ ಕನಿಷ್ಠ ಮೂರು ಸಿಬ್ಬಂದಿಗಳು ಇದ್ದಿರಬಹುದೆಂದು ಅಂದಾಜಿಸಲಾಗಿದೆ. ಅಪಘಾತ ಸಂಭವಿಸಿದ ತಕ್ಷಣವೇ ಆ ಪ್ರದೇಶದಲ್ಲಿ ತುರ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ.
ಅಮೆರಿಕ ಮಿಲಿಟರಿ ಪಡೆ ಹೇಳೋದೇನು?
ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕ ಮಿಲಿಟರಿ, ಘಟನೆಯಲ್ಲಿ ಎರಡು ವಿಮಾನಗಳು ಭಾಗಿಯಾಗಿದ್ದವು ಎಂದು ತಿಳಿಸಿದೆ. ಅವುಗಳಲ್ಲಿ ಒಂದು ಸುರಕ್ಷಿತವಾಗಿ ನೆಲಕ್ಕಿಳಿದರೆ, ಇನ್ನೊಂದು ವಿಮಾನ ಅಪಘಾತಕ್ಕೀಡಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಘಟನೆ ಶತ್ರು ದಾಳಿ ಅಥವಾ ಮಿತ್ರ ಪಡೆಗಳ ತಪ್ಪಿನಿಂದ ಸಂಭವಿಸಿಲ್ಲ ಎಂದು ಅಮೆರಿಕ ಮಿಲಿಟರಿ ಸ್ಪಷ್ಟಪಡಿಸಿದೆ. ಆದಾಗ್ಯೂ, ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತನಿಖೆಯಲ್ಲಿದೆ.
3 ಷರತ್ತಿಟ್ಟ ಇರಾನ್!
ಅಮೆರಿಕವು ಇರಾನ್ ವಿರುದ್ಧ ನಡೆಸುತ್ತಿರುವ ಈ ಸೈನಿಕ ಕಾರ್ಯಾಚರಣೆಗೆ ಆಪರೇಷನ್ ಎಫಿಕ್ ಪ್ಯೂರಿ ಎಂದು ಹೆಸರು ನೀಡಲಾಗಿದೆ. ಈ ನಡುವೆ, ಯುದ್ಧವನ್ನು ಕೊನೆಗೊಳಿಸುವ ಮೊದಲ ದೇಶ ತಾನೇ ಆಗಲಿದೆ ಎಂದು ಇರಾನ್ ಘೋಷಿಸಿಕೊಂಡಿದ್ದು, ಅದಕ್ಕಾಗಿ ಮೂರು ಪ್ರಮುಖ ಷರತ್ತುಗಳನ್ನು ಕೂಡ ಮುಂದಿಟ್ಟಿದೆ. ಇದರಿಂದ ಯುದ್ಧದ ತೀವ್ರತೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
