
ಉದಯವಾಹಿನಿ,ಚಿಂಚೋಳಿ: ಅಬಕಾರಿ ವಲಯ ವ್ಯಾಪ್ತಿಯಲ್ಲಿ ಬರುವ ಮೊನುನಾಯಕ ತಾಂಡಾ ಯಲ್ಮಮಡಿ ತಾಂಡಾದಲ್ಲಿ ಆಕ್ರಮವಾಗಿ ತೆಲಂಗಾಣ ರಾಜ್ಯದ ಮದ್ಯವನ್ನು ಮಾರಾಟಕ್ಕಾಗಿ ಸಂಗ್ರಹಿಸಿದ ಕಿರಾಣಿ ಅಂಗಡಿಯಲ್ಲಿ 16200ರೂ.ಬೆಲೆವುಳ್ಳ 16.200ಲೀಟರ್ ಮದ್ಯವನ್ನು ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಸಿಪಿಐ ಜೆಟ್ಟೆಪ್ಪ ಬಿ.ಬೆಲೂರ ತಿಳಿಸಿದ್ದಾರೆ.ಖಚಿತ ಮಾಹಿತಿ ಮೇರೆಗೆ ಮೊನುನಾಯಕ ತಾಂಡಾದ ಕಿರಾಣಿ ಅಂಗಡಿಯ ಮೇಲೆ ಸಿಬ್ಬಂದಿ ಜೋತೆ ದಾಳಿ ನಡೆಸಿ ತೆಲಂಗಾಣ ರಾಜ್ಯದ ಮದ್ಯದ ಜೋತೆ ನಾಮದೇವ ಕಾಶಿರಾಮ ಚಿನ್ನ ರಾಠೋಡ ಎಂಬ ಆರೋಪಿತನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಬಕಾರಿ ದಾಳಿಯಲ್ಲಿ ಪೇದೆಗಳಾದ ಗೌತಮಬುದ್ದ,ಸಿದ್ಧಾರೂಡ ಮತ್ತು ಶಿವರಾಜ,ಇದ್ದರು.
