
ಉದಯವಾಹಿನಿ ಮಾಲೂರು:- ನಾವು ನಮ್ಮ ಕೋಲಾರ ಜಿಲ್ಲೆಯಲ್ಲಿ ಲಭ್ಯವಿರುವ ಅದೆಷ್ಟೋ ರಾಜರ, ಸುಲ್ತಾನರ, ಹಾಗೂ ಪಾಳೇಗಾರ ರ ಆಳ್ವಿಕೆಯ ಬಗ್ಗೆ ಎಷ್ಟೋ ಶಾಸನಗಳು, ಪಳೆಯುಳಿಕೆಗಳು, ಕೋಟೆ, ವೀರಗಲ್ಲುಗಳು, ಮಾಸ್ತಿಗಲ್ಲುಗಳು ಇತ್ಯಾದಿ ಲಭ್ಯವಿದ್ದು ಹಾಗೂ ಇದರ ಅವಶೇಷಗಳು ಇಲ್ಲಿನ ಸ್ಥಳೀಯ ಆಡಳಿತಗಾರರ ಬಗ್ಗೆ ನಿದರ್ಶನಗಳಾಗಿವೆ. ಮಾಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ನಿಟ್ಟಿನಲ್ಲಿ ಈ ಎಲ್ಲಾ ನಿದರ್ಶನಗಳ ಮೂಲಕ ಸಂಶೋಧನೆ ಗಳನ್ನು ಕೈಗೊಂಡು, ಮಾಹಿತಿಗಳನ್ನು ಹುಡುಕುತ್ತಾ ಹೋದಲ್ಲಿ ನಮಗೆ ಅತೀ ಮುಖ್ಯವಾಗಿ ಕಾಣುವಂತ ಪಾಳೇಗಾರರು ಆಳಿದಂತ ಸುಗುಟೂರು ಗ್ರಾಮವು ಮುಖ್ಯವಾಗಿದೆ.ಏಕೆಂದರೆ ನಮ್ಮ ಅವಿಭಜಿತ ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿನ ಅವತಿ, ಹರಪನಾಯಕನಹಳ್ಳಿ, ತಾಡಿಗೋಳ್, ಸುಗುಟೂರು ಗ್ರಾಮಗಳು ಪಾಳೇಗಾರರ ಆಳ್ವಿಕೆಗೆ ಒಳಪಟ್ಟಿತು. ಹಾಗೂ ಪಾಳೇಗಾರರ ತಮ್ಮೆಗೌಡ, ದೇವಪ್ಪಗೌಡ, ರಣಬೈರಗೌಡ, ಹಾಗೂ ಇನ್ನೂ ಹಲವಾರು ಪಾಳೇಗಾರರ ಮೂಲ ಐತಿಹಾಸಿಕ ಬೆಳವಣಿಗೆ ಆಳ್ವಿಕೆಗಳ ಬಗ್ಗೆ ಸಮಗ್ರ ರಾಷ್ಟೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿದರು.ಈ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಅಶ್ವತ್ ನಾರಾಯಣ, ಉಪ ಪ್ರಾಂಶುಪಾಲರು ಶ್ರೀಕಾಂತ್, ವರ್ತೂರು ಕಾಲೇಜಿನ ಪ್ರಾಂಶುಪಾಲರು ಕೃಷ್ಣಪ್ಪ, ಪ್ರಾಧ್ಯಾಪಕರಾದ ಡಾ ಎಸ್ ಶಿಲ್ಪಾ, ಡಾ ಕವಿತಾ, ಮನೋಹರ್, ಗ್ರಂಥಾಲಯ ವೇಣು, ಹಾಗೂ ಹಲವಾರು ವಿಷಯ ಮಂಡಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
