
ಉದಯವಾಹಿನಿ ಬಸವನಬಾಗೇವಾಡಿ: ತಾಲೂಕಿನ ವಡವಡಗಿ ಗ್ರಾಮದ ಅತ್ಯಂತ ಪುರಾತನ ವಿದ್ಯಾ ಮಂದಿರವಾದ ಸಾಲಿಮಠದ ಶ್ರೀ ಸಿದ್ಧಲಿಂಗೇಶ್ವರ ಮಹಾಸ್ವಾಮೀಜಿ ಜಾತ್ರಾ ಕರ‍್ಯಕ್ರಮವನ್ನು ಐದು ದಿನಗಳ ಕಾಲ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಮಂಗಳವಾರ ಚಾಲನೆ ನೀಡಿದ್ದ ವಿಶೇಷವಾಗಿತ್ತು.ಗ್ರಾಮದ ಮೊದಲ ವಿದ್ಯಾ ಮಂದಿರವಾದ ಕಾರಣ ಮಠದಿಂದ ಮಣ್ಣಿನ ಗಣೇಶನನ್ನು ಜೊಡೆತ್ತಿನ ಬಂಡೆತ್ತಿನ ಮೇಲೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಮಣ್ಣು ಉಳಿಸಿ ಹಾಗೂ ಮಣ್ಣಿನ ಗಣೇಶ ಬಳಸಿ ಪರಿಸರ ಸಂರಕ್ಷಿಸಿ ಎಂಬ ಸಂದೇಶವನ್ನು ನೀಡುತ್ತಾ ಸಾಗಲಾಯಿತು. ನಂತರ ಪ್ರಾಥಮಿಕ ಶಾಲೆಯಲ್ಲಿಯೂ ಕೂಡ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು.ಈ ಸಂದರ್ಭದಲ್ಲಿ ಅಭೀ ಪೌಂಡೇಶನ್ ಸಂಸ್ಥಾಪಕರಾದ ಬಸವರಾಜ ಬಿರಾದಾರ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಉಳಿಯಬೇಕಾದರೆ, ಮಕ್ಕಳನ್ನು ಆಧ್ಯಾತ್ಮಿಕ ಕೇಂದ್ರಗಳ ಸಂಪರ್ಕಕ್ಕೆ ತರಬೇಕು ಎಂದರು..ಶಾಲಾ ಮುಖ್ಯ ಗುರುಮಾತೆ ಮಹಾನಂದ ಬ್ಯಾಕೋಡ ಮಾತÀನಾಡಿ, ಇಂದು ಮಣ್ಣು ಉಳಿಸುವ ಕರ‍್ಯಕ್ಕೆ ಮುಂದಾಗದಿದ್ದರೆ ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವಿಲ್ಲ. ಹೀಗಾಗಿ ಮಣ್ಣು ಉಳಿಸಿ ಅಭಿಯಾನದ ಸ್ವಯಂ ಸೇವಕರು ರಾಜ್ಯಾಧ್ಯಾಂತ ಜನಜಾಗೃತಿ ಮೂಡಿಸುವ ಕರ‍್ಯಕೈಗೊಂಡಿದ್ದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಈರಣ್ಣ ಯಲಗೋಡ, ಶಿವಕುಮಾರ ಮನಹಳ್ಳಿ, ಚಿದಾನಂದ ಮನಹಳ್ಳಿ, ಸಂಗಯ್ಯ ಸಾಲಿಮಠ, ಆನಂದ ಆಂದೇಲಿ, ಬಸವರಾಜ ನಾಕೆತ್ತಿನ, ಮುದುಕು ಮನಹಳ್ಳಿ ಸೇರಿದಂತೆ ಅನೇಕರು ಇದ್ದರು
