ಉದಯವಾಹಿನಿ,ಬಂಗಾರಪೇಟೆ: ಪಟ್ಟಣದ ಹೊರ ಹೊಲಯದ ಬೆಂಗನೂರು ಗ್ರಾಮದ ಎಸ್, ಎಸ್,ಎಸ್. ಬಡಾವಣೆಯ ಬಳಿ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನದಿಂದಾಗಿ 16 ವರ್ಷದ ಬಾಲಕ ವಿದ್ಯುತ್ ಸ್ಪರ್ಶದಿಂದ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಘಟನೆಗೆ ಕಾರಣ:
ತಮ್ಮೇನಹಳ್ಳಿ ಗ್ರಾಮದ ಬಡ ಕೂಳಿ ಕಾರ್ಮಿಕ ಕೃಷ್ಣಮೂರ್ತಿ ಮತ್ತು ಭುವನೇಶ್ವರಿಯ ಮಗನಾದ 16 ವರ್ಷದ ಪ್ರಜ್ವಲ್ ಪಟ್ಟಣದ ಸಾಂದೀಪನಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು, ಇಂದು ಗಣೇಶ ಹಬ್ಬದ ಪ್ರಯುಕ್ತ ಶಾಲೆಗೆ ರಜೆಯಿದ್ದ ಕಾರಣ ಹಸು ಮೇಯಿಸಲು ಹೋದ ಸಂದರ್ಭದಲ್ಲಿ “ಬಲಿ ಪಡೆಯಲು ಕಾದು ಕೂತಿದ್ದ” ಕಂಬದ ಬಳಿ ಹೋದಾಗ ವಿದ್ಯುತ್ ಸ್ಪರ್ಶಗೊಂಡು ಸಾವಿಗೀಡಾಗಿದ್ದಾನೆ, ಯುವಕನ ದೇಹವು ಸುಟ್ಟು ಕರಕಲಾಗಿದೆ.

ಅಧಿಕಾರಿಗಳ ಬೇಜವಾಬ್ದಾರಿತನದಿಂದ ಯುವಕನ ಬಲಿ!:ಎಸ್.ಎಸ್.ಎಸ್. ಬಡಾವಣೆಯ ಅನತಿ‌ ದೂರದಲ್ಲಿದ್ದ ಕಂಬದಲ್ಲಿ 11 ಕೆ.ವಿ.ವಿದ್ಯುತ್ ತಂತಿ ಚೇಂಬರ್ ನಿಂದ ಕೆಳಗೆ ಜಾರಿದೆ, ಕಂಬದ ಕೆಳಭಾಗದಲ್ಲಿ ಸಮರ್ಪಕವಾಗಿ ಅರ್ಥಿಂಗ್ ವ್ಯವಸ್ಥೆ ಇಲ್ಲದೆ ಕಬ್ಬಿಣದ ಕಂಬಿಗಳು ಭೂಮಿಯಿಂದ ಮೇಲ್ಭಾಗಕ್ಕೆ ಬಂದಿರುತ್ತದೆ, ಇದರ ಪರಿಣಾಮ 11 ಕೆ.ವಿ.ವಿದ್ಯುತ್ ಅರ್ಥಿಂಗ್ ಕಂಬಿಗಳ ಮೂಲಕ ಭೂಮಿಯನ್ನು ನೇರವಾಗಿ ಅಪ್ಪಳಿಸಿದೆ, ಇದೇ ಸಂದರ್ಭದಲ್ಲಿ ಬಾಲಕ ಅದೇ ಸ್ಥಳಕ್ಕೆ ಹಸು ಮೇಯಿಸಲು ಬಂದು ಸಾವಿಗೀಡಾಗಿದ್ದಾನೆ.

ಘಟನಾಸ್ಥಳಕ್ಕೆ ಬಾರದ ಬೆಸ್ಕಾಂ ಅಧಿಕಾರಿಗಳು:
ಘಟನೆ ನಡೆದು 6 ಗಂಟೆಗಳಾದರೂ ಬೆಸ್ಕಾಂ ಲೈನ್ ಮೆನ್ ಗಳನ್ನು ಹೊರತು ಪಡಿಸಿ ಯಾವೊಬ್ಬ ಅಧಿಕಾರಿಯೂ ಘಟನಾ ಸ್ಥಳಕ್ಕೆ ಬರಲಿಲ್ಲ, ಇದರಿಂದ ಸಾರ್ವಜನಿಕರು ಆಕ್ರೋಶಗೊಂಡು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು.

ತಾಲೂಕಿನಲ್ಲಿ ಬೆಸ್ಕಾಂ ಅಧಿಕಾರಿಗಳ ಬೇಜಾಬ್ದಾರಿ ದಿನೇ ದಿನೇ ಹೆಚ್ಚಾಗುತ್ತಿದೆ ಮತ್ತು ಸರ್ವಾಧಿಕಾರಿಗಳ ಹಾಗೆ ವರ್ತಿಸುತ್ತಿದ್ದಾರೆ ಬಾಲಕನ ಸಾವಿಗೆ ಅಧಿಕಾರಿಗಳೇ ನೇರ ಹೊಣೆ. ಮತ್ತು ಮೃತಪಟ್ಟ ಬಾಲಕನ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಇಲ್ಲದೆ ಹೋದರೆ ಪ್ರತಿಭಟನೆ ನಡೆಸಲಾಗುವುದು.
ಗ್ರಾ.ಪಂ. ಸದಸ್ಯ ಉಮಾ ಲಕ್ಷ್ಮಯ್ಯ

Leave a Reply

Your email address will not be published. Required fields are marked *

error: Content is protected !!