ಉದಯವಾಹಿನಿ ಕುಶಾಲನಗರ:-ಸೋಮವಾರಪೇಟೆ ತಾಲೂಕಿನ  ದೊಡ್ಡ ಮಳತೆ  ಗ್ರಾಮದ ಇತಿಹಾಸ ಪ್ರಸಿದ್ಧ ಹೊನ್ನಮ್ಮನ ಕೆರೆ ಕ್ಷೇತ್ರದಲ್ಲಿ ಗೌರಿ ಉತ್ಸವದ ಅಂಗವಾಗಿ ಕೆರೆಗೆ ಬಾಗಿನ ಬಿಡುವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು.ಸಂಪ್ರದಾಯದಂತೆ ಸಿದ್ದೇಶ್ವರ ಬಸವೇಶ್ವರ ಸ್ವರ್ಣ ಗೌರಿ ಹೊನ್ನಮ್ಮ ದೇವಾಲಯ ಸಮಿತಿ ಮತ್ತು ಹೊನ್ನಮ್ಮ ದೇವಿ ಕುಟುಂಬಸ್ಥರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನವನ್ನು ಬಂಗಾರದ ಕಲ್ಲಿನ ಮೇಲಿಟ್ಟು ಪೂಜಿಸಿದರು ನಂತರ ಕೆರೆಯಲ್ಲಿ ಅರ್ಪಿಸಿ ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಹಾಗೂ ನವದಂಪತಿಗಳು ಹರಕೆ ಬಾಗಿನವನ್ನು ಕೆರೆಗೆ ಅರ್ಪಿಸಿ ಪೂಜೆ ಸಲ್ಲಿಸಿದರು. ಅರಕಲಗೂಡು ಶಾಸಕ ಎ ಮಂಜು ಮಾತನಾಡಿ ನೂರಾರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬರುವ ಮೂಲಕ ಜನರ ನಂಬಿಕೆಗೆ ಈ ಕ್ಷೇತ್ರ ಪಾತ್ರವಾಗಿದೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಸಾವಿರಾರು ಜನರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ ಮುಂದೆಯೂ ಇದು ಮುಂದುವರೆಯಲಿ ಎಂದು ಆಶಿಸಿದರು ಪ್ರಧಾನ ಅರ್ಚಕ ವೀರಯ್ಯ ಹಿರೇಮಠ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು ದೇವಾಲಯದ ವತಿಯಿಂದ ಅನ್ನದಾನದ ವ್ಯವಸ್ಥೆ ಕಲ್ಪಿಸಲಾಗಿತ್ತು ಪೂಜಾ ಕಾರ್ಯದಲ್ಲಿ ಮುಖಂಡ ಮಾಜಿ ಸಚಿವ ಅಪ್ಪಚ್ಚು ರಂಜನ್ ಹೈಕೋರ್ಟ್ ವಕೀಲ ಎಚ್ಎಸ್ ಚಂದ್ರ ಮೌಳಿ ಕೆಪಿ ಚಂದ್ರಕಲಾ ಬಿ ಬಿ ಭಾರತಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು ದೇವಲಾಯ ಸಮಿತಿ ಅಧ್ಯಕ್ಷ ವೀರೇಶ್ ಉಪಾಧ್ಯಕ್ಷ ಪ್ರಸನ್ನ ಕಾರ್ಯದರ್ಶಿ ಕಿರಣ್ ಇದ್ದರು

Leave a Reply

Your email address will not be published. Required fields are marked *

error: Content is protected !!