ಉದಯವಾಹಿನಿ,ಚಿಂಚೋಳಿ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ವತಿಯಿಂದ ಸಾಲ ಪಡೆದ ಜನರಿಂದ 2.56ಕೋಟಿ ರೂ.ಸಾಲ ವಸೂಲಾತಿ ಆಗಬೇಕು,70ಲಕ್ಷ ರೂ.ರಾಜ್ಯ ಸಹಕಾರ ಇಲಾಖೆ ವತಿಯಿಂದ ಕೈಬಿಡುವ ಕಾರ್ಯ ನಡೆಯುತ್ತಿದೆ ಎಂದು ಪಿಕಾರ್ಡ ಬ್ಯಾಂಕ್ ವ್ಯವಸ್ಥಾಪಕ ನಾಗಣ್ಣ ಯಲ್ದೆ ಹೇಳಿದರು. ಪಟ್ಟಣದ ತಾಲ್ಲೂಕಾ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕನ 57ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು,ನಬಾರ್ಡ್ ಬ್ಯಾಂಕ್ ವತಿಯಿಂದ ಅಂದಾಜು 10ಕೋಟಿ ಸಾಲ ಪಡೆದು ಅಂದಾಜು 3ಕೋಟಿಯಷ್ಟು ವಸೂಲಾತಿ ಮಾಡಿದ್ದು ಸುಮಾರು 7500ಜನರು ಸಾಲ ಪಡೆದುಕೊಂಡಿದ್ದಾರೆ. ಹಿರಿಯ ಸಹಕಾರ ಧುರಿಣ ರಮೇಶ ಯಾಕಾಪೂರ ಮಾತನಾಡಿ ಬ್ಯಾಂಕಿನ ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರು ಬ್ಯಾಂಕಿನಲ್ಲಿ ಅಂದಾಜು 10ಸಾವಿರದಂತೆ ಹಣ ಠೇವಣಿ ಮಾಡಿದರೆ ಬಿಡಿಪಿ ಮೂಲಕ ಸರ್ಕಾರಿ ನೌಕರರಿಗೆ,ಉದ್ಯೋಗ ಮಾಡುವವರಿಗೆ,ರೈತರಿಗೆ,ಬೀದಿ ವ್ಯಪಾರಿಗಳಿಗೆ,ಬೆಳೆಸಾಲ,ರಸಗೊಬ್ಬರ,ಕ್ರಿಮಿಕೀಟಾನಾಶಕಕ್ಕೆ ಸಾಲ ನೀಡಿದರೆ ಬಡ್ಡಿಯಿಂದ ಆದಾಯ ಬರುತ್ತದೆ ಬ್ಯಾಂಕ್ ಸುಗಮವಾಗಿ ನಡೆಯುತ್ತದೆ. ಚಿಂಚೋಳಿ ತಾಲ್ಲೂಕಿಗೆ ಒಳಪಡುವ ಗ್ರಾಮಗಳು ಬ್ಯಾಂಕಗೆ ನಿರ್ದೇಶಕರು ಇದ್ದರೆ ಮಾತ್ರ 15ಜನ ನಿರ್ದೇಶಕರು ಈಗ ತಾಲ್ಲೂಕಿನ ಗ್ರಾಮಗಳು ಕಾಳಗಿ ಕಮಲಾಪೂರ ತಾಲ್ಲೂಕಿಗೆ ಒಳಪಟ್ಟಿದ್ದರಿಂದ 17ನಿರ್ದೇಶಕರು ಆಯ್ಕೆ ಮಾಡಬೇಕು,ಇಲ್ಲಾದಿದ್ದರೆ ಕಾಳಗಿ ಕಮಲಾಪೂರ ತಾಲ್ಲೂಕಿನ ಸದಸ್ಯರಿಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ನಿರ್ಣಯ ಮಾಡಿದಲ್ಲಿ ಪಿಕಾರ್ಡ ಬ್ಯಾಂಕ್ ಅವರ ತಾಲ್ಲೂಕುಗಳಲ್ಲಿ ಪ್ರಾರಂಭಿಸಬಹುದು ಅಂಥಹ ಸದಸ್ಯರ ಷೇರು ಮತ್ತು ಸಾಲ ವರ್ಗಾವಣೆ ಆಗುತ್ತದೆ ಎಂದರು. ಪಿಕಾರ್ಡ ಬ್ಯಾಂಕ್ ಅಧ್ಯಕ್ಷೆ ಚಂದ್ರಕಲಾ ಲಿಂಗಶೇಟ್ಟಿ ತಟ್ಟೆಪಳ್ಳಿ ಮಾತನಾಡಿ ಪಿಕಾರ್ಡ ಸಹಕಾರ ಬ್ಯಾಂಕ್  ಅನ್ನು 1962ರಲ್ಲಿ ಸ್ಥಾಪನೆಯಾಗಿದೆ,ತಾಲ್ಲೂಕಿನಲ್ಲಿ 11306ಜನರು ಅ ವರ್ಗದ ಸದಸ್ಯರಿದ್ದು ಪರಿಶೀಷ್ಟ ಜಾತಿ ಪರಿಶೀಷ್ಟ ಪಂಗಡದ 2692ಸದಸ್ಯರಿದ್ದಾರೆ,73.18ಲಕ್ಷ ರೂ.ಷೇರು ಬಂಡವಾಳ ಇದೆ. ವಿವಿಧ ಯೋಜನೆ ಯಡಿಯಲ್ಲಿ ಕಾಸ್ಕಾರ್ಡ ಬ್ಯಾಂಕಿನಿಂದ ಪಡೆದ 1037.36ಲಕ್ಷ ರೂ.ಸಾಲದ ಹೊರಬಾಕಿವಿದೆ,ಸಾಲಗಾರ ಸದಸ್ಯರಿಂದ ಬರಬೇಕಾದ ಸಾಲದ ಅಸಲು 391.47ಲಕ್ಷ ರೂ.ಇರುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಿಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಅಮರಜೀವನ ರಮೇಶ ಯಾಕಾಪೂರ,ಜಗದೀಶಸಿಂಗ್ ಠಾಕೂರ್,ಮಲ್ಲಿಕಾರ್ಜುನ ಬೆಳಕೇರಿ,ಸುಜಾತ ಲಾಲರೆಡ್ಡಿ,ಮಹಾದೇವಪ್ಪ,ಹಣಮಂತರಾವ,ನಾಗರೆಡ್ಡಿ,ಗೋಪಾಲರೆಡ್ಡಿ,ಕಾಶಿನಾಥ ಹೊಡೆಬೀರನಳ್ಳಿ,ದಶರಥ,ಶರಣಗೌಡ,ಸುಭಾಷ್ ಮಂತ್ರಿ,ಶ್ರೀನಿವಾಸ ಬಂಡಿ,ಶ್ರೀಹರಿ ಕಾಟಾಪೂರ,ಅಬ್ದುಲ್ ಬಾಷೀದ್,ವಿನಯಕುಮಾರ ಚಿಪಾತಿ,ಜ್ಯೋತಿ ಸಲಗರ,ಚಂದ್ರಕಾಂತ ರಾಠೋಡ್,ರಾಜಕುಮಾರ,ಆಶ್ವೀನಿ,ಅಂಬಣ್ಣ,ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!