ಉದಯವಾಹಿನಿ, ರಾಮನಗರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ರಾಮನಗರ, ಡಾ.ಚಂದ್ರಮ್ಮ ದಯಾನಂದ ಸಾಗರ ಆಸ್ಪತ್ರೆ ದೇವರ ಕಗ್ಗಲಹಳ್ಳಿ ಸಹಯೋಗದಲ್ಲಿ ಉಚಿತ ಅರೋಗ್ಯ ತಪಾಸಣೆ ಶಿಬಿರವನ್ನು ತಾಲ್ಲೂಕಿನ ಅರೆೆ ಹಳ್ಳಿ ಗ್ರಾಮದಲ್ಲಿ ನಡೆಯಿತು.ಕೆರೆ ಸಮಿತಿ ಅಧ್ಯಕ್ಷರಾದ ಎ.ಬಿ. ಗಂಗಾಧರ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಆರೋಗ್ಯ ಸೇವೆ ದುಬಾರಿಯಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಉಚಿತವಾಗಿಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವುದು ಬಡವರು ಮತ್ತು ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮುಖ್ಯ ಅತಿಥಿ ಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಮುರಳೀಧರ ಮಾತನಾಡಿ, ಕೆರೆ ಅಭಿವೃದ್ಧಿ, ಸಮುದಾಯ ಅಭಿವೃದ್ಧಿ, ಶಾಲೆಗಳಿಗೆ ಬೆಂಚು ಡೆಸ್ಕು ವಿತರಣೆ ಜ್ಞಾನ ದೀಪ ಶಿಕ್ಷಕರ ನೇಮಕಾತಿ, ಜನಮಂಗಳ ಕಾರ್ಯಕ್ರಮದ ಬಗ್ಗೆ ತಿಳಿಸಿದರು.ಸಭೆಯ ಅಧ್ಯಕ್ಷತೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿಎಂಸಿ ಅಧ್ಯಕ್ಷರು ಮಂಜುನಾಥ್ ವಹಿಸಿದ್ದರು. ತಜ್ಞ ವೈದ್ಯರಾದ ಡಾ. ದಾರ್ತಿ, ಡಾ. ಕಿಶೋರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವೇದರಾಜ್, ಒಕ್ಕೂಟ ಅಧ್ಯಕ್ಷ ರವಿರಾಜ್ ಅರೆಹಳ್ಳಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಸುಧಾಮಣಿ ಅರಹಳ್ಳಿ, ವಲಯ ಮೇಲ್ವಿಚಾರಕರು ಜ್ಞಾನವಿಕಾಸ ಸಮನ್ವ್ಯಾಧಿಕಾರಿ ಹಾಗೂ ಸೇವಾ ಪ್ರತಿನಿಧಿ ರವರು ಮತ್ತು ಊರಿನ ಸದಸ್ಯರು ಉಪಸಿತರಿದ್ದರು. 350 ಕ್ಕೂ ಅಧಿಕ ಮಂದಿ ಅರೋಗ್ಯ ತಪಾಸಣೆ ಮಾಡಿಸಿಕೊಂಡು ಪ್ರಯೋಜನ ಪಡೆದರು.
