??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಉದಯವಾಹಿನಿ,ಚಿಂಚೋಳಿ:ತಾಲ್ಲೂಕಿನ ಗೋಪುನಾಯಕ ತಾಂಡಾದಲ್ಲಿ ರೈತ 3.34ಏಕರೆ ಜಮೀನಿನಲ್ಲಿ 2.50 ಏಕರೆಯಲ್ಲಿ ಬೆಳೆದ ಕಬ್ಬು ಮೇಲ್ಗಡೆಯಿಂದ ಸಾಗಿಹೋಗಿದ ವಿದ್ಯುತ್ ತಂತಿಗಳು ಗಾಳಿಯಿಂದ ಸ್ವರ್ಶಿಸಿ ಬೆಂಕಿ ಸಿಡಿದು ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದ್ದು ರೈತ ಕಂಗಾಲಾಗಿದ್ದಾನೆ.ಗೋಪುನಾಯಕ ತಾಂಡಾದ ರೈತ ಕೇಸು ಪಾಂಡು ಎನ್ನುವ ರೈತನ ಜಮೀನಿನಲ್ಲಿ ಬೆಳೆದ ರೈತನ ಕಬ್ಬು ಸುಟ್ಟು ಕರಕವಾಗಿರುವುದರಿಂದ ಕೈಗೆ ಬಂದ ಬೆಳೆ ಬಾಯಿಗೆ ಬರಲಿಲ್ಲಾ ಎಂಬ ಸ್ಥಿತಿಯಲ್ಲಿ ರೈತ ಸಂಕಷ್ಟಕ್ಕೆ ಒಳಗಾಗಿದ್ದಾನೆ.ಕಟಾವುಗೆ ಬಂದ ಕಬ್ಬು ಗುರುವಾರ ಮಧ್ಯಾಹ್ನ ಏಕಾಏಕಿ ಗಾಳಿಯಿಂದ ವಿದ್ಯುತ್ ತಂತಿಗಳು ಸ್ವರ್ಶಿಸಿ ಬೆಂಕಿ ಸಿಡಿದು ಸಂಪೂರ್ಣ ಕಬ್ಬುಬೆಳೆ ನಾಶವಾಗಿದೆ ಕಬ್ಬು ಬೆಳೆಸಲು ಸಾಲಸೂಲ ಮಾಡಿ ಬೆಳೆ ಬೆಳೆಸಿದ್ದೇನೆ ಆದರೆ ವಿದ್ಯುತ್ ಅವಘಡದಿಂದ ಕಬ್ಬು ನಾಶವಾಗಿದೆ ಸಂಬಂಧ ಪಟ್ಟ ಇಲಾಖೆ ವತಿಯಿಂದ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ರೈತ ಕೇಸು ಪಾಂಡು ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.ಅಗ್ನಿಶಾಮಕ ಇಲಾಖೆಯವರು ಸಹ ಜಮೀನಿಗೆ ತೆರಳಿದರು ಅಷ್ಟರಲ್ಲಿ ಕಬ್ಬು ನಷ್ಟವಾಗಿದ್ದು ಪಂಚಾನಾಮ ಮಾಡಲಾಗಿದ್ದು,ವಿದ್ಯುತ್ ಇಲಾಖೆಯವರು,ಕಂದಾಯ ಇಲಾಖೆಯವರು ಸಂಬಂಧ ಪಟ್ಟ ಇಲಾಖೆಯವರು ಜಮೀನಿಗೆ ತೆರಳಿ ಪಂಚಾನಾಮ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
