ಉದಯವಾಹಿನಿ ಚಿತ್ರದುರ್ಗ: ರಾಜ್ಯದಲ್ಲಿ ಈ ಬಾರಿ ಸರಿಯಾಗಿ ಸಮಯಕ್ಕೆ ಮಳೆ ಬರದೆ ರೈತರ ಬೆಳೆಗಳೆಲ್ಲವೂ ಸಂಕಷ್ಟದಲ್ಲಿದ್ದು ರಾಜ್ಯದ ರೈತರು ಕಂಗಾಲಾಗಿದ್ದಾರೆ ರೈತರಿಗೆ ನಷ್ಟದಲ್ಲಿರುವ ಬೆಳೆಗಳಿಗೆ ಕೂಡಲೇ ಬೆಳೆ ವಿಮೆ ಬಿಡುಗಡೆ ಮಾಡಬೇಕು ರಾಜ್ಯ ಸರ್ಕಾರ ಕೂಡಲೇ ಸಂಕಷ್ಟಕ್ಕೆ ಭಾವಿಸಬೇಕು ಕಾವೇರಿ ವಿವಾದದಲ್ಲಿ ಸರ್ಕಾರದಿಟ್ಟ ನಿಲುವು ಕೈಗೊಂಡು ರಾಜ್ಯದ ರೈತರ ಪರ ಒಲವು ವ್ಯಕ್ತಪಡಿಸಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಒಕ್ಕೂಟದಲ್ಲಿ ಪ್ರಭಾವಿ ಸ್ವಾಮೀಜಿ ಆಗಿರುವ ಚಿತ್ರದುರ್ಗದ ಬಂಜಾರ್ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ತಿಳಿಸಿದ್ದಾರೆರಾಜ್ಯದಲ್ಲಿ ಈಗಾಗಲೇ ಕನ್ನಡ ಪರ ಸಂಘಟನೆಗಳು ಚಿತ್ರರಂಗ ನಾಡಿನ ಹಲವು ಖ್ಯಾತಪೀಠಾಧಿಪತಿಗಳು ಪ್ರತಿಭಟನೆಗೆ ಇಳಿದಿದ್ದು ಇದಕ್ಕೆ ಸಂಪೂರ್ಣವಾಗಿ ನಮ್ಮ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಒಕ್ಕೂಟದಿಂದ ಬೆಂಬಲವಿದೆಯೆಂದು ಶ್ರೀ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ತಿಳಿಸಿದ್ದಾರೆ.ಹಿಂದೂ ಪ್ರಚಾರಕರ ಹತ್ತಿಕ್ಕುವ ಹುನ್ನಾರ ಸಹಿಸುವುದಿಲ್ಲ ಸೇವಾಲಾಲ್ ಸ್ವಾಮೀಜಿರಾಜ್ಯದಲ್ಲಿ ಹಿಂದೂ ಪ್ರಚಾರಕರ ಹತ್ತಿಕುವ ವ್ಯವಸ್ಥಿತ ಕಾರ್ಯ ನಡೆಯುತ್ತಿದ್ದು ಇದನ್ನು ನಾವು ಎಂದಿಗೂ ಸಹಿಸುವುದಿಲ್ಲ ರಾಜಕೀಯದಲ್ಲಿ ಟಿಕೆಟ್ ಕೊಡಿಸುವ ವಿಚಾರವಾಗಿ ಹಣ ಪಡೆದಿದ್ದಾರೆ ಎಂದು ಆಪಾದಿಸುತ್ತಿರುವವರು ಹಣ ನೀಡುವವರಿಗೆ ಹಣ ಎಲ್ಲಿಂದ ಬಂತು ಇದರ ಹಿಂದಿರುವ ಕಾಣದ ಕೈಗಳ ಬಗ್ಗೆಯೂ ಸಹ ತನಿಖೆ ನಡೆಯಬೇಕಾಗಿದೆ ಎಂದು ಕೆಲವರನ್ನು ಮಾತ್ರ ತನಿಖೆ ನಡೆಸುವುದು ಸರಿಯಲ್ಲ ಎಂದು ಇತ್ತೀಚಿಗೆ ಬಂಜಾರ ಸರದಾರ್ ಸೇವಾಲಾಲ್ ಸ್ವಾಮೀಜಿ ಮಂಗಳೂರಿನಲ್ಲಿ ಖಾಸಗಿ ಸುದ್ದಿವಾಹಿನಿಯೊಂದಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!