
ಉದಯವಾಹಿನಿ,ಜಮಖಂಡಿ: ಒಂದು ಪ್ರಕರಣದ ತನಿಖೆಗಾಗಿ ಜಮಖಂಡಿ ತಾಲೂಕಿನ ಅಡಿಹುಡಿ ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಗಣಿತ ಬೋಧನೆ ಮಾಡಿದ ಡಿ ವೈ ಎಸ್ ಪಿ ಶಾಂತವೀರ್ ಅಮೂಲ್ಯ ಕ್ಷಣ ಮಕ್ಕಳಿಗೆ ಗಣಿತ ಭೋದನೆ ಮಾಡಿದ ನಂತರ ಮಕ್ಕಳ ಜೊತೆ ಸಂವಾದ ಮಾತುಗಳು ಆಧುನಿಕ ಜಗತ್ತಿಗೆ ವಿಜ್ಞಾನ ಬೇಕೇ ಬೇಕು. ವಿಜ್ಞಾನದ ಹಿಂದಿನ ಅನೇಕ ಸಂಶೋಧನೆಗಳು ಆವಿಷ್ಕಾರಗಳು ಇಂದಿನ ಪೀಳಿಗೆಗೆ ಸೌಲಭ್ಯಗಳನ್ನು, ಆರಾಮದಾಯಕ ಜೀವನವನ್ನು ಒದಗಿಸಿವೆ. ಬರಿ ಓದುವುದರಿಂದ ಆವಿಷ್ಕಾರಗಳ ಬಗ್ಗೆ ತಿಳಿಯಲು ಕಷ್ಟ. ಮನೆಯಲ್ಲಿ ಇಲ್ಲವೇ ಶಾಲೆಗಳಲ್ಲಿ ಚಿತ್ರಗಳ ಹಾಗೂ ಚಿಕ್ಕ-ಚಿಕ್ಕ ಪ್ರಯೋಗಗಳ ಮೂಲಕ ಮಕ್ಕಳಿಗೆ ವಿಜ್ಞಾನದ ಬಗ್ಗೆ ತಿಳಿಸಬೇಕು. ಇದರಿಂದ ಇಂದಿನ ಮಕ್ಕಳು ಸಹ ಇನ್ನೂ ಅನೇಕ ಹೊಸ ಹೊಸ ವಿಷಯಗಳನ್ನು ಕಂಡು ಹಿಡಿದು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ಇಂದು ನಮ್ಮ ಇಸ್ರೋ ವಿಜ್ಞಾನಿಗಳು ಚಂದಿರ ಅಂಗಳಕ್ಕೆ ವಿಕ್ರಂ 3 ಉಡಾವಣೆ ಮಾಡಿದರ ಬಗ್ಗೆ ನಮ್ಮ ದೇಶದ ವಿಜ್ಞಾನಿಗಳ ಹೆಮ್ಮೆಯ ವಿಷಯಗಳು ಮನ ಮುಟ್ಟುವ ಹಾಗೆ ಮಕ್ಕಳಿಗೆ ತಿಳಿಸಿಕೊಟ್ಟರು ಉದಾಹರಣೆಗೆ, ಪ್ರಾಣಿ ಸಂಗ್ರಹಾಲಯಕ್ಕೆ ಕರೆದುಕೊಂಡು ಹೋದರೆ ಪ್ರಾಣಿಗಳು ಯಾವ ರೀತಿ ಇರುತ್ತವೆ, ಅವುಗಳ ಆಹಾರ ಕ್ರಮಗಳೇನು. ಯಾವ ವಾತಾವರಣದಲ್ಲಿ ಜೀವಿಸುತ್ತವೆ.
ಅದರ ಬಗ್ಗೆ ಸಹ ಮಕ್ಕಳಿಗೆ ಮಾಹಿತಿ ನೀಡಬೇಕು ಸುತ್ತ ಮುತ್ತಲಿನ ಪರಿಸರ ಬಗ್ಗೆ ತಿಳಿವಳಿಕೆ ಇರಬೇಕು .ಒಳ್ಳೆಯ ಪುಸ್ತಕ ಓದಬೇಕು ನೀತಿಪಾಠಗಳನ್ನು ಕೇಳಬೇಕು ಮೊಬೈಲ್ ಪಠ್ಯ ಪುಸ್ತಕ ಬಗ್ಗೆ ಮಾಹಿತಿ ಇದ್ದಾಗ ಮಾತ್ರ ಮುಟ್ಟ ಬೇಕು ಶಿಕ್ಷಕರಿಗೆ ಗೌರವ ಕೊಡಬೇಕು ನಮಗೆ ತಾಯಿ ತಂದೆನೇ ಮೊದಲು ಗುರು ಅವರನ್ನ ಗೌರವ ಸ್ಥಾನ ನೀಡಬೇಕು ಶಾಲೆಯ ಸುತ್ತ ಮುತ್ತು ಗಿಡ ನೆಡುವ ಹಚ್ಚಬೇಕು ನಮ್ಮ ಮನುಸು ಯಾವಾಗ್ಲೂ ಖುಷಿ ಖುಷಿಯಾಗಿ ಇರಬೇಕು ಎಂದು ಶಾಂತವೀರ್ ಡಿ ವೈ ಎಸ್ ಪಿ ಹೇಳಿದರು.ಬೇರೆ ಬೇರೆ ಹಿನ್ನೆಲೆಯ ಕುಟುಂಬ, ಸಂಸ್ಕೃತಿಯಿಂದ ಬಂದ ಮಕ್ಕಳಿಗೆ ಬೇರೆ ಬೇರೆ ಅಭಿರುಚಿಗಳಿರುತ್ತವೆ. ಅವರ ಆಚಾರ-ವಿಚಾರಗಳಿಗೆ ಧಕ್ಕೆಯಾಗದಂತೆ ಎಲ್ಲರೊಡನೆ ಬೆರೆಯಲು ಸಹಾಯ ಮಾಡಬೇಕು. ನಮ್ಮ ತಾಯಿ ಭಾರತ ದೇಶದ ಬಗ್ಗೆ ಸಂಸ್ಕಾರ ಹಿರಿಯರಿಗೆ ಹೇಗೆ ಗೌರವ ನೀಡಬೇಕು ಶಿಕ್ಷಕರ ಜೊತೆ ಮಕ್ಕಳು ನಡೆದುಕೊಳ್ಳುವ ಹಾಗೂ ಮಕ್ಕಳಿಗೆ ನಡುವೆ ಕಾಳಜಿ, ಪ್ರೀತಿ-ವಿಶ್ವಾಸ, ವಸ್ತುಗಳನ್ನು ಅಥವಾ ಆಟಿಕೆಗಳನ್ನು ಹಂಚಿಕೊಳ್ಳುವುದು, ಹೊಂದಾಣಿಕೆಯಿಂದ ಇರುವುದನ್ನು ಕಲಿಸಬೇಕು. ಭಿನ್ನಾಭಿಪ್ರಾಯಗಳು ಅಥವಾ ಜಗಳಗಳು ಬಂದರೆ ಶಿಕ್ಷಕರು ತಾಳ್ಮೆಯಿಂದ ಪ್ರೀತಿಯಿಂದ ಮಕ್ಕಳಿಗೆ ತಿಳಿ ಹೇಳಬೇಕು.ಎಂದು ಶಿಕ್ಷಕರ ವೃಂದಕ್ಕೆ ಕಿವಿ ಮಾತು ಹೇಳಿದರು.
ಬೇರೆಯವರಿಗೆ ಭಯ ಪಡಬಾರದು ನಮ್ಮ ತನವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು ಇನ್ನೊಬ್ಬರ ಮನಸ್ಸು ನೋಯಿಸಿ ಬಾರದು ಬೇರೆಯವರ ನಮ್ಮ ನೋಡಿ ಭಯ ಪಡಬೇಡಬೇಕು ಅಂದ್ರೆ ಅದು ನಮ್ಮ ವಿದ್ಯ ಗೆ ಮಾತ್ರ: ಶಾಂತವೀರ್ ಡಿ ವೈ ಎಸ್ ಪಿ ಜಮಖಂಡಿ
