
ಉದಯವಾಹಿನಿ ದೇವದುರ್ಗ : ವಿದ್ಯಾರ್ಥಿಗಳ ಮನಸ್ಸನ್ನು ಶಿಲೆಯಂತೆ ಕೆತ್ತನೆ ಮಾಡಿ ಅವರ ವ್ಯಕ್ತಿತ್ವವನ್ನು ರೂಪಿಸುವ ಶಿಕ್ಷಕರ ಸೇವೆ ಗಣನೀಯವಾದದ್ದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಜಗನ್ನಾಥ ಕೋಟೆ ಹೇಳಿದರು.ಅವರು ಕಲ್ಯಾಣ ಕರ್ನಾಟಕ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ಮಲದಕಲ್ ಗೆಳೆಯರ ಬಳಗ ಹಾಗೂ ಜ್ಞಾನವೃಕ್ಷ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ದೇವದುರ್ಗ ಇವರ ಸಹಯೋಗದೊಂದಿಗೆ ನಡೆದ ಶಿಕ್ಷಕರ ದಿನಾಚರಣೆ ಹಾಗೂ ದೇವದುರ್ಗ ತಾಲೂಕಿನ ವಸತಿ ನಿಲಯಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ಪಡೆದುಕೊಂಡು ಉನ್ನತ ಮಟ್ಟದ ಸಾಧನೆ ಮಾಡಬೇಕು, ಯಾವಾಗಲೂ ವಿದ್ಯಾರ್ಥಿಗಳು ಶಿಕ್ಷಕರಿಗೆ ವಿಧೇಯರಾಗಿರಬೇಕು, ನಿರಂತರ ಪ್ರಯತ್ನ, ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಟ್ಟು ಓದುವುದರಿಂದ ಉನ್ನತ ಹುದ್ದೆಯನ್ನು ಪಡೆಯಬಹುದು ಎಂದು ಹೇಳಿದರು. ಕಾರ್ಯಕ್ರಮವನ್ನು ಕುರಿತು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಬಂದೋಲಿ, ಪ್ರಾ.ಶಾಲಾ. ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ಬಿ, ಪ್ರಭಾವತಿ ಪ್ರಾಣೇಶ ಮಾತನಾಡಿದರು. ಶ್ರೀ ಬಸವದೇವರು ಅರಿವಿನ ಮನೆ ಸಾನಿಧ್ಯವಹಿಸಿದ್ದರು.
2023-24ನೇ ಸಾಲಿನ ಸಮಾಜಮುಖಿ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಎಲ್.ವಿ.ಬಸವರಾಜ ಸರ್ಕಾರಿ ಪ್ರೌಢ ಶಾಲೆ ಮಸರಕಲ್, ಶೇಖರಯ್ಯ ಸರ್ಕಾರಿ ಪ್ರೌಢ ಶಾಲೆ ಎನ್. ಗಣೇಕಲ್, ಸುರೇಶ ಸರ್ಕಾರಿ ಪ್ರೌಢ ಶಾಲೆ ಕಮಲದಿನ್ನಿ, ಮೀನಾಕ್ಷಿ ಸರ್ಕಾರಿ ಪ್ರೌಢ ಶಾಲೆ ಅರಕೇರಾ, ಪರಮಾನಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಧರ್ಮ ನಾಯಕ ತಾಂಡ, ವಿಜಯಲಕ್ಷ್ಮಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂಗಳದಾಳ, ರಾಜೇಂದ್ರ ಪ್ರಸಾದ್ ಬಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೀಲಗಲ್, ಬಸವಲಿಂಗ ಕರಿಗಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾನಾಪುರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಡಾ. ಮಾರುತಿ ಕುಮಾರ ನಾಯಕ ಮಲದಕಲ್ ಸಹಾಯಕ ಪ್ರಾಧ್ಯಾಪಕರು ಸ.ಪ್ರ.ದ.ಕಾಲೇಜು ಹಲಸೂರು, ಕೆ.ವಿನೋದ ಕುಮಾರ ಹಿರೇಬೂದೂರು, ನಾಗರಾಜ ಪೂಜಾರಿ ಮಾನಸಗಲ್, ಷಣ್ಮುಖ ಹೂಗಾರ ಸೇರಿದಂತೆ ಇತರರು ಇದ್ದರು.
