
ಉದಯವಾಹಿನಿಚಿಂಚೋಳಿ: ಪಟ್ಟಣದ ತಾಲ್ಲೂಕಾ ಕ್ರೀಡಾಂಗಣದಲ್ಲಿ ಸೆ.25ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಯವರ ನೇತೃತ್ವದಲ್ಲಿ ನಡೆಯುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳು ಪರಿಹರಿಸಲು ವಿವಿಧ ಇಲಾಖೆ ವತಿಯಿಂದ ಸುಮಾರು 20 ಮಳಿಗೆಗಳು ಹಾಕಲಾಗುವುದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪೌಜೀಯಾ ತರನ್ನುಮ್ ಹೇಳಿದರು.ಪಟ್ಟಣದ ತಾಲ್ಲೂಕಾ ಕ್ರೀಡಾಂಗಣದಲ್ಲಿ ಸೆ.25ರಂದು ಸರ್ಕಾರದಿಂದ ಆಯೋಜಿಸಲಾಗಿದ ಜನತಾ ದರ್ಶನ ಕಾರ್ಯಕ್ರಮದ ಅಂಗವಾಗಿ ಸ್ಥಳಕ್ಕೆ ಭೇಟಿನೀಡಿ ವಿಕ್ಷಣೆ ಮಾಡಿ ತಾಲ್ಲೂಕಾ ಮಟ್ಟದ ಅಧಿಕಾರಿಗಳ ಜೋತೆ ಸಭೆ ನಡೆಸಿ ಬಳಿಕ ಪತ್ರಕರ್ತರ ಜೋತೆ ಮಾತನಾಡಿದ ಅವರು,ಸಾರ್ವಜನಿಕರು ಜನತಾ ದರ್ಶನಕ್ಕೆ ಬರುವಾಗ ಆಧಾರ ಕಾರ್ಡ್,ರಾಷನ್ ಕಾರ್ಡ್,ಬ್ಯಾಂಕ್ ಪಾಸ್ಬುಕ್ ತೆಗೆದುಕೊಂಡು ಅತಿ ಹೆಚ್ಚಿನ ಜನಸಂಖ್ಯೆಯಲ್ಲಿ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿ ಸದುಪಯೋಗ ಪಡೆದುಕೊಳ್ಳಬೇಕು.
ವಿವಿಧ ಇಲಾಖೆಯ ಯೋಜನೆಗಳು ಸಾರ್ವಜನಿಕರಿಗೆ ಅರಿವು ಮೂಡಿಸಲು ವಿವಿಧ ಇಲಾಖೆ ವತಿಯಿಂದ ದೊಡ್ಡ ದೊಡ್ಡ ಬ್ಯಾನರ್ ಹಾಕಲಾಗುವುದು,ಈಗಾಗಲೇ 600ರಿಂದ 700 ಫಲಾನುಭವಿಗಳಿಗೆ ಗುರುತಿಸಲಾಗಿದ್ದು ಅವರನ್ನು ಕರೆದುಕೊಂಡು ಬರಲು ವಿವಿಧ ಇಲಾಖೆಗಳಿಗೆ ಜವಾಬ್ದಾರಿ ನೀಡಲಾಗಿದೆ,ಬಸ್ ನಿಲ್ದಾಣದಿಂದ ಹೆಚ್ಚಿನ ಬಸ್ಸಿನ ವ್ಯವಸ್ಥೆ ಕೂಡ ಮಾಡಲಾಗಿದೆ. ಗ್ರಾಮೀಣ ಪ್ರದೇಶ ಹಾಗೂ ಪಟ್ಟಣದ ಯಾವುದೇ ಸಮಸ್ಯೆ ಇದ್ದಲ್ಲಿ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಬೇಕು,ಸಣ್ಣಪುಟ್ಟ ಸಮಸ್ಯೆಗಳು ಸ್ಥಳದಲ್ಲಿಯೇ ಪರಿಹರಿಸಲಾಗುವುದು ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕಾ ಮಟ್ಟದ ಎಲ್ಲಾ ಅಧಿಕಾರಿಗಳು ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ.ಸಿಓ ಭನವರ್ ಸಿಂಗ್ ಮೀನಾ,ಜಿಲ್ಲಾ ಪೋಲಿಸ್ ಎಸ್ಪಿ ಅಡ್ಡೂರ ಶ್ರೀನಿವಾಸ,ಸೇಡಂ ಸಹಾಯಕ ಆಯುಕ್ತ ಹಾಶಪ್ಪ ಪೂಜಾರಿ,ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಡಿವೈಎಸ್ಪಿ ಕೆ.ಬಸವರಾಜ,ತಾಪಂ.ಇಓ ಶಂಕರ ರಾಠೋಡ್,ಗ್ರೇಡ್2 ತಹಸೀಲ್ದಾರ್ ವೆಂಕಟೇಶ ದುಗ್ಗನ್,ಟಿಹೆಚ್ಓ ಮಹ್ಮುದ್ ಗಫಾರ್,ಹಿಂದುಳಿದ ವರ್ಗದ ಅಧಿಕಾರಿ ಅನುಸೋಯಾ ಚವ್ಹಾಣ,ಬಿಸಿಯೂಟ ಜಯಪ್ಪ ಚಾಪಲ್,ಜೇಸ್ಕಾಂ ಸುರೇಶ ಬಾಬು,ಮೋಹನ ರಾಠೋಡ್,ಸಿಡಿಪಿಒ ಗುರುಪ್ರಸಾದ,ಎಇಇ ಬಸವರಾಜ,ಕೃಷಿ ವೀರಶೇಟ್ಟಿ ರಾಠೋಡ್,ತೋಟಗಾರಿಕೆ ರಾಜಕುಮಾರ,ಅನೇಕ ಜಿಲ್ಲಾ ಹಾಗೂ ತಾಲ್ಲೂಕಾ ಮಟ್ಟದ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
ಜನತಾ ದರ್ಶನ ಕಾರ್ಯಕ್ರಮ ಅಂಗವಾಗಿ ವಿವಿಧ ಇಲಾಖೆ ಅಡಿಯಲ್ಲಿ ಈಗಾಗಲೇ 600ರಿಂದ 700 ಫಲಾನುಭವಿಗಳಿಗೆ ಗುರುತಿಸಲಾಗಿದ್ದು ಅವರನ್ನು ಕರೆದುಕೊಂಡು ಬರಲು ವಿವಿಧ ಇಲಾಖೆಗಳಿಗೆ ಜವಾಬ್ದಾರಿ ನೀಡಲಾಗಿದೆ,ಬಸ್ ನಿಲ್ದಾಣದಿಂದ ಹೆಚ್ಚಿನ ಬಸ್ಸಿನ ವ್ಯವಸ್ಥೆ ಕೂಡ ಮಾಡಲಾಗಿದೆ,ಮಹಿಳೆಯರಿಗೆ ಸರ್ಕಾರದಿಂದ ಉಚಿತ ಟಿಕೆಟ್ ಇದ್ದು ಉಳಿದವರು ಟಿಕೆಟ್ ಪಡೆದು ಬರಬೇಕು.
:- ಪೌಜೀಯಾ ತರನ್ನುಮ್ ಜಿಲ್ಲಾಧಿಕಾರಿ ಕಲ್ಬುರ್ಗಿ.
