
ಉದಯವಾಹಿನಿ ಕೊಲ್ಹಾರ: ಕನ್ನಡ ನಾಡು, ನುಡಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಮುಳವಾಡ ಗ್ರಾಮದ ಸತ್ಯ ಸಾಯಿ ರಂಗಮಂದಿರದಲ್ಲಿ ಜರುಗಿದ ಕೊಲ್ಹಾರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಹೆಮ್ಮೆಯ ಸಂಸ್ಥೆಯಾಗಿದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಪರಿಷತ್ತು ಪ್ರಾಮಾಣಿಕ ಪ್ರಯತ್ನ ಮಾಡಿದೆ. ನಾಲ್ವಡಿ ಕೃಷ್ಣರಾಜ ಒಡೆಯರು, ಸರ್ ಎಂ.ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆ ಅಪಾರವಾಗಿದೆ ಎಂದರು.
ಕೊಣ್ಣೂರ ಹಾಗೂ ಮುಳವಾಡ ಹಿರೇಮಠ ಸಂಸ್ಥಾನದ ಸಿದ್ದಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡುತ್ತಾ ಶತಮಾನವನ್ನು ದಾಟಿದ ಕನ್ನಡಿಗರ ಹಿರಿಮೆಯುಳ್ಳ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಸುದೀರ್ಘವಾದ ಇತಿಹಾಸ ಹೊಂದಿದೆ. ಕನ್ನಡ ಭಾಷೆ ಮತ್ತು ಈ ನೆಲದ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಕನ್ನಡ ಸಾಹಿತ್ಯ ಪರಿಷತ್ತು ಜನ್ಮ ತಾಳಿದೆ ಎಂದರು.
ಜಗದೀಶ್ವರ ಹಿರೇಮಠ ಸಂಸ್ಥಾನದ ಪ್ರಭುಕುಮಾರ ಸ್ವಾಮೀಜಿ, ನಾಗರದಿನ್ನಿ ಸದ್ಗುರು ಸದಾನಂದ ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ಕಲಗುಕಿ೯ ದಯಾನಂದ ಹೀರೆಮಠ ಸ್ವಾಮೀಜಿ, ಹಳ್ಳದ ಗೆಣ್ಣೂರ ಭೀರಲಿಂಗೇಶ್ವರ ದೇವಸ್ಥಾನದ ಪೀಠಾಧ್ಯಕ್ಷರಾದ ಸಿದ್ದಪ್ಪ ಪೂಜಾರಿ ಸಾನಿಧ್ಯ ವಹಿಸಿದ್ದರು.ಗ್ರಾ ಪಂ ಅಧ್ಯಕ್ಷ ಹಣಮಂತ ಕಳಸಗೊಂಡ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಅಶೋಕ ಗಿಡ್ಡಪ್ಪಗೋಳ, ಮಲ್ಲು ನಾಗೂರ ಟಿ.ಪಿ ದಳವಾಯಿ, ಗೀತಾ ಕುಲಕರ್ಣಿ, ಮಹಮ್ಮದಗೌಸ ಹವಾಲ್ದಾರ, ಡಾ. ಮಾಧವ ಗುಡಿ, ಮಹಾದೇವ ಮಮದಾಪೂರ, ಸಂಗನಗೌಡ ಪಾಟೀಲ್ ವೇದಿಕೆಯ ಮೇಲಿದ್ದರು.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು. ಗೌರವ ಅಧ್ಯಕ್ಷರಾಗಿ ದಯಾನಂದ ಹೀರೆಮಠ, ಗೌರವ ಸಲಹೆಗಾರಾಗಿ ಬೊರಮ್ಮ ಪತಂಗಿ, ತಾಲೂಕ ಅಧ್ಯಕ್ಷರಾಗಿ ಅಶೋಕ ಆಸಂಗಿ, ಗೌರವ ಕಾರ್ಯದರ್ಶಿಗಳಾಗಿ ಸಂಗಮೇಶ ವಿಜಾಪೂರ, ಶ್ರೀಕಾಂತ ಪಾರಗೊಂಡ, ಗೌರವ ಕೋಶಾಧ್ಯಕರಾಗಿ ಸದಾನಂದ ಮಮದಾಪೂರ, ಸಹ ಕಾರ್ಯದರ್ಶಿಗಳಾಗಿ ರುದ್ರಮ್ಮ ಗಿಡ್ಡಪ್ಪಗೋಳ, ಶೊಭಾ ಭಾಟಿ, ಶಂಕ್ರಪ್ಪ ಪತಂಗಿ, ಸಂಘಟನಾ ಕಾರ್ಯದರ್ಶಿಗಳಾಗಿ ಗೀತಾ ಕುಲಕರ್ಣಿ, ವಿದ್ಯಾ ಗಡಗಿ, ಶಂಕ್ರಮ್ಮಾ ಕವಿಶೆಟ್ಟಿ, ಮಹಿಳಾ ಸಾಹಿತಿಗಳಾಗಿ ಶೀವಲೀಲಾ ಕೋರಿ, ದಾನಮ್ಮ ಪಾಟೀಲ್, ಚಾಂದಬಿ ಕೊಲ್ಹಾರ, ಪರಿಶಿಷ್ಟ ಜಾತಿ ಪ್ರತಿನಿಧಿ ಯು.ಎಲ್ ಪೂಜಾರಿ, ಬಸಪ್ಪ ಚಳಗೇರಿ, ಪರಿಶಿಷ್ಟ ಪಂಗಡ ಪ್ರತಿನಿಧಿ ನಾಗರತ್ನ ದಳವಾಯಿ, ಅಲ್ಪಸಂಖ್ಯಾತರ ಪ್ರತಿನಿಧಿ ಎ.ಡಿ ಮುಲ್ಲಾ, ಸಂಘ ಸಂಸ್ಥೆ ಪ್ರತಿನಿಧಿ ಎಂ.ಕೆ ಸಾವಳಗಿ, ತಾಲೂಕ ಶಿಕ್ಷಣಾಧಿಕಾರಿ ವಸಂತ ನಾಯಕ, ದತ್ತಿ ಪ್ರತಿನಿಧಿ ಕೃಷ್ಣಾನಂದ ಭೀರಗೊಂಡ, ಪತ್ರಿಕಾ ಪ್ರತಿನಿಧಿ ಪರಶುರಾಮ ಗಣಿ, ಮುಶಾಕ ಬಳಗಾರ, ಕಾಯ೯ಕಾರಣಿ ಸದಸ್ಯರು ಬಸವರಾಜ ಗುಡದಿನ್ನಿ, ಮಲ್ಲಿಕಾರ್ಜುನ ಕುಬಕಡ್ಡಿ, ಪದ್ಮಾವತಿ ಶಿರೂರ, ಅನಸೂಯಾ ರಾಜಾಪೂರಿ, ಚಂದ್ರಶೇಖರ ಹಂಚನಾಳ, ಪ್ರಕಾಶ ನಾಯಕ, ಮಹಮ್ಮದಹನೀಫ ಮಕಾಂದರ, ರಮೇಶ ಹಂಚನಾಳ, ಎಸ್.ಎಸ್ ಗೌರಿ, ನೌಷಾದ ಡಾಂಗೆ ಪದಗ್ರಹಣ ಸ್ವೀಕರಿಸಿದರು.
