ಉದಯವಾಹಿನಿ ಮುದ್ದೇಬಿಹಾಳ ; ವೃಕ್ಷವನ್ನು ರಕ್ಷಿಸಿ ಪೋಷಿಸಿದರೆ ವೃಕ್ಷವು ಇಡೀ ಜೀವ ಸಂಕುಲವನ್ನೆ ಅನಂತವಾಗಿ ರಕ್ಷಿಸುತ್ತದೆಂದು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಅನಂತಚತುದರ್ಶಿ ನಿಮಿತ್ತ ಪರಿಸರದ ಮೇಲೆ ಪ್ರೇಮ ಜಾಗೃತಿ ಗೆ ವೃಕ್ಷ ರಕ್ಷಾ ಬಂಧನ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದರು ನಮ್ಮ ಭಾರತೀಯ ಹಬ್ಬ ಹರಿದಿನಗಳ ಆವರಣೆ ಪರಿಸರ ಸಂರಕ್ಷಣಾ ಸೂತ್ರ ತಿಳಿಸುತ್ತವೆ ಪರಿಸರ ಹಾನಿಯ ಚಟುವಟಿಕೆಗಳನ್ನು ಮಾಡದೆ ಪರಿಸರವನ್ನು ಉಳಿಸುವ ಕಾರ್ಯ ಮಾಡಬೇಕಾಗಿದೆ. ಪರಿಸರ ಉಳಿಸುವ ಕರ್ತವ್ಯ ನಮ್ಮ ಮೇಲಿದೆ ಎಂದರು .ಪ್ರಾಥಮಿಕ ಶಾಲೆಯ ಮುಖ್ಯಗುರು ಜಿ.ಜೆ.ಪಾದಗಟ್ಟಿ ಶಾಲಾ ಆವರಣದಲ್ಲಿ ಮಕ್ಕಳಿಂದ ಸಸ್ಯವನ್ನು ನೆಡಿಸುವುದರೊಂದಿಗೆ ಸಸಿಗಳಿಗೆ ಪೂಜೆಮಾಡಿಸಿ, ಅವುಗಳನ್ನು ರಕ್ಷಿಸುತ್ತೇವೆಂದು ಪ್ರತಿಜ್ಞಾ ವಿಧಿ ಭೋಧಿಸಿ ವೃಕ್ಷ ರಕ್ಷಾ ಬಂಧನ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು ಸಸ್ಯಗಳ ಮಹತ್ವ ಹಾಗೂ ಪರಿಸರದ ರಕ್ಷಣೆಯ ಹಿನ್ನೆಲೆಯ ಮತ್ತು ವೃಕ್ಷ ರಕ್ಷಾ ಬಂಧನ ಕಾರ್ಯಕ್ರಮದ ಕುರಿತಾಗಿ ಶಿಕ್ಷಕ ಕಿರಣ ಕಡಿ ಮತ್ತು ಮಾಳಪ್ಪ ನರೂಡಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕಿನ ದೈಹಿಕ ಶಿಕ್ಷಕರುಗಳಾದ ಯು.ಸಿ.ಕೋನರೆಡ್ಡಿ, ಸಚಿನ ರಾಠೋಡ, ಮುತ್ತು ದೊಡಮನಿ, ಶಿಕ್ಷಕ ಬಿ.ಆರ್.ಬೆಳ್ಳಿಕಟ್ಟಿ, ಬಿ.ಟಿ.ಭಜಂತ್ರಿ, ಎಮ್.ಪಿ.ಪಡದಾಳಿ, ಆರ್.ಎಸ್.ಮಡಿವಾಳರ, ಕಾನೂನು ವಿದ್ಯಾರ್ಥಿ ಅಭಿಷೇಕ ಹುನಗುಂದ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!