ಉದಯವಾಹಿನಿ, ನ್ಯೂಯಾರ್ಕ್: ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ ಎಂಬ ಹೆಗ್ಗಲಿಕೆ ಪಡೆದಿರುವ ಅಮೆರಿಕಾ ಜೈಲಿನ ಬಗ್ಗೆ ಅಲ್ಲಿನ ಮಾನವ ಹಕ್ಕುಗಳ ಸಂಘಟನೆ ಆಘಾತಕಾರಿ ಮಾಹಿತಿ ಬಹಿರಂಗ ಪಡಿಸಿದೆ. ಅಮೆರಿಕಾದ ಜೈಲುಗಳಲ್ಲಿ ವರ್ಣಭೇದ ನೀತಿ ಅನುಸರಿಸಲಾಗುತ್ತಿದ್ದು, ಹೆಚ್ಚಿನ ಸುಧಾರಣೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.
ವಿಶ್ವಸಂಸ್ಥೆಯಿಂದ ನೇಮಕಗೊಂಡ ಮೂವರು ತಜ್ಞರು ಏಪ್ರಿಲ್ ಮತ್ತು ಮೇ ತಿಂಗಳ ಅವಧಿಗಳಲ್ಲಿ ಅಮೆರಿಕಾದ ಹಲವು ಜೈಲುಗಳಿಗೆ ಭೇಟಿ ನೀಡಿ, ವಿಸ್ರೃತವಾದ ಅಧ್ಯಯನ ವರದಿ ತಯಾರಿಸಿದ್ದರು. ಈ ವೇಳೆ ಹತ್ತು ಹಲವು ಆಘಾತಕಾರಿ ವಿಚಾರಗಳು ಬಹಿರಂಗವಾಗಿದೆ. ಕಪ್ಪು ವರ್ಣೀಯ ಮಹಿಳೆಯೊಬ್ಬರು ಹೆರಿಗೆಯ ಸಮಯದಲ್ಲಿ ಕೂಡ ಸಂಕೋಲೆಯಿಂದ ಬಂಧಿಸಲಾಗಿದ್ದರೆ ಪುರುಷರ ಕೈದಿಗಳು ಅತ್ಯಂತ ಕಠಿಣಕಾರಿ ಪರಸ್ಥಿತಿಗಳಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ಬಹಿರಂಗವಾಗಿತ್ತು. ಈ ಮೂಲಕ ಅಮೆರಿಕಾ ಜೈಲುಗಳಲ್ಲಿ ಮಾನವ ಹಕ್ಕುಗಳ ಘನತೆಗೆ ಧಕ್ಕೆ ತರುವ ಕೆಲಸ ನಡೆಸಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ವರದಿಯ ಪ್ರತಿಕ್ರಿಯೆ ನೀಡಲು ವಿಶ್ವಸಂಸ್ಥೆಯಲ್ಲಿನ ಅಮೆರಿಕಾ ರಾಯಬಾರಿ ನಿರಾಕರಿಸಿದ್ದಾರೆ. ಅದೂ ಅಲ್ಲದೆ ಸೆರೆವಾಸದಲ್ಲಿರುವ ವ್ಯಕ್ತಿಗಳು, ನೌಕರರು ಹಾಗೂ ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಅಮೆರಿಕಾದ ಫೆಡರಲ್ ಬ್ಯೂರೋ ಆಫ್ ಪ್ರಿಸನ್ಸ್ ಹೇಳಿದೆ.
