ಉದಯವಾಹಿನಿ ಬಸವನಬಾಗೇವಾಡಿ: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವನೆ ಮುಖ್ಯ ಎಂದು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ.ಎಸ್ ಪಾಟೀಲ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಶನಿವಾರ ನಡೆದ ತಾಲೂಕಾ ಪಪೂ ಕಾಲೇಜುಗಳ ಅಥ್ಲೇಟಿಕ್ ಕ್ರೀಡಾಕೂಟ ಹಾಗೂ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಟೆನಿಸ್ ವ್ಹಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ದೈಹಿPವಾಗಿ ಸಧೃಡÀರಾಗುವಂತೆ ಕರೆ ನೀಡಿದ ಅವರು, ಸಂದರ್ಭ ಹಾಗೂ ಸಮಯಕ್ಕನುಸಾರವಾಗಿ ಪ್ರೋತ್ಸಹ ಸಿಕ್ಕಲ್ಲಿ ಜಗತ್ತಿನಲ್ಲಿ ಮಾದರಿ ನಾಯಕನಾಗಲು ಸಾಧ್ಯ. ಪ್ರೋತ್ಸಾಹದ ಹೃದಯ ವೈಶಾಲ್ಯತೆ ಮುಖ್ಯ ಎಂದರು.
ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಪಾಲಕರು ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿ ಮಾಡದೇ ಕ್ರೀಡಾ ಚಟುವಟುಕೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿರಿ ಎಂದರು.
ಈ ಸಂದರ್ಭದಲ್ಲಿ ಈರಣ್ಣ.ಚ.ಪಟ್ಟಣಶೆಟ್ಟಿ, ಬಿ.ಕೆ ಕಲ್ಲೂರ, ಶಂಕರಗೌಡ ಬಿರಾದಾರ, ಸುರೇಶ ಹಾರಿವಾಳ, ಶೇಖರ ಗೊಳಸಂಗಿ, ಡಾ. ಸಿ.ಕೆ ಹೊಸಮನಿ, ಅನಿಲ ಅಗರವಾಲ, ಸಂಗಮೇಶ ಓಲೇಕಾರ, ರವಿ ರಾಠೋಡ, ಸಂಜೀವ ಕಲ್ಯಾಣಿ, ಕಮಲಸಾಬ ಕೊರಬು, ಶಿವಾನಂದ ಮಂಗಾನವರ, ರಮೇಶ ಪೂಜಾರಿ, ಎಸ್ಡಿ ಪಾಟೀಲ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

error: Content is protected !!