ಉದಯವಾಹಿನಿ, ನವದೆಹಲಿ : ಗಾಂಧಿ ಜಯಂತಿಯ ಮುನ್ನಾದಿನವಾದ ಇಂದು (ಭಾನುವಾರ) ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದರು. ಯುವಕರಲ್ಲಿ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಕರೆ ನೀಡಲಾಗಿದ್ದ 75 ದಿನಗಳ ಚಾಲೆಂಜ್​ನಲ್ಲಿ ಯಶಸ್ವಿಯಾದ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಹೆಸರು ಮಾಡಿರುವ ಅಂಕಿತ್ ಬೈಯಾನ್​ಪುರಿಯಾ ಅವರೊಂದಿಗೆ ಸೇರಿ ಪ್ರಧಾನಿ ಕಸ ಗುಡಿಸಿದ್ದು ವಿಶೇಷವಾಗಿತ್ತು.ಸ್ವಚ್ಛ ಭಾರತ ಅಭಿಯಾನದಲ್ಲಿ ಒಂದಾಗಿ ಪಾಲ್ಗೊಂಡಿದ್ದ ಪ್ರಧಾನಿ ಮತ್ತು ಅಂಕಿತ್ ಇಬ್ಬರೂ ಫಿಟ್ನೆಸ್ ಮತ್ತು ಸ್ವಚ್ಛತೆಯ ಬಗ್ಗೆ ಚರ್ಚಿಸಿದರು ಎಂದು ಪಿಎಂ ಮೋದಿ ತಮ್ಮ ಎಕ್ಸ್ ನಲ್ಲಿ ಪೋಸ್ಟ್​ ಮಾಡಿದ ವೀಡಿಯೊದಲ್ಲಿ ತೋರಿಸಲಾಗಿದೆ. ಅಂಕಿತ್ ತನ್ನ ಇನ್​ಸ್ಟಾಗ್ರಾಮ್ ಪ್ರೊಫೈಲ್​ನಲ್ಲಿ 4.9 ಮಿಲಿಯನ್ ಫಾಲೋವರ್​ಗಳನ್ನು ಹೊಂದಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!