ಉದಯವಾಹಿನಿ, ಕೋಲಾರ: ಸ್ವಚ್ಚತಾ ಕಾರ್ಯ ನಡೆಸುವುದು ನಮ್ಮ ಜೀವನದ ಭಾಗವಾಗಲಿ, ಬಸ್‌ನಿಲ್ದಾಣದ ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸೋಣ ಎಂದು ಸಾರಿಗೆ ಸಂಸ್ಥೆ ವಿಭಾಗೀಯ ಸಂಚಲನಾಧಿಕಾರಿ ಜೈಶಾಂತ್ ಕುಮಾರ್ ಕರೆ ನೀಡಿದರು. ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆ ಡಿಸಿ ಮಾರ್ಗದರ್ಶನದಲ್ಲಿ ಸ್ವಚ್ಚಭಾರತ್ ಮಿಷನ್ ಅಡಿಯಲ್ಲಿ ‘ಏಕ್ ತಾರೀಖ್ ಏಕ್ ಗಂಟ್‌ಕ” ಶ್ರಮದಾನ ಕಾರ್ಯಕ್ರಮದ ಭಾಗವಾಗಿ ಅವರೇ ಸ್ವಯಂ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮೋದಿಯವರ ಆಶಯವಾದ ‘ಏಕ್ ತಾರೀಖ್ ಏಕ್ ಗಂಟ್‌ಕ” ಶ್ರಮದಾನ ಕಾರ್ಯಕ್ರಮದ ಉದ್ದೇಶವೇ ವಿಶಾಲವಾಗಿದೆ, ಇದು ಸ್ವಚ್ಚಭಾರತ ನಿರ್ಮಾಣದಲ್ಲಿ ಸಮಾಜದ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂಬ ಪ್ರೇರಣೆ ನೀಡುವಂತದ್ದು ಎಂದರು. ಸಾರಿಗೆ ಸಂಸ್ಥೆ ಬಸ್ಸುಗಳು ಸಾರ್ವಜನಿಕ ಸೇವೆಗಾಗಿಯೇ ಇದ್ದು, ಬಸ್ಸು ಹತ್ತುವ ಪ್ರತಿ ನಾಗರೀಕರಲ್ಲೂ ಸ್ವಚ್ಚತೆಯ ಜವಾಬ್ದಾರಿ ಬರುವಂತಾಗಬೇಕು, ಕಸ,ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಹಾಕುವ ಪರಿಪಾಠ ಬದಲಾಗಬೇಕು, ಅದಕ್ಕಾಗಿ ಚಾಲಕ,ನಿರ್ವಾಹಕರು ಸಮಾಜಕ್ಕೆ ಪ್ರೇರಣೆ ನೀಡುವಂತಾಗಬೇಕು ಎಂದರು.
