ಉದಯವಾಹಿನಿ, ಬಸವನಬಾಗೇವಾಡಿ: ಸೋಮವಾರ ಮಹಾತ್ಮಾ ಗಾಂಧೀಜಿ ಅವರ ಜಯಂತಿ ಹಿನ್ನಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ದಿ ಕೋಶ ಹಾಗೂ ಸ್ಥಳಿಯ ಪುರಸಭೆ ಆಶ್ರಯದಲ್ಲಿ ಬೆಳಿಗ್ಗೆ ಪಟ್ಟಣದ ಶ್ರೀ ಮೂಲನಂದೀಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸ್ವಚ್ಚತಾ ಹಿ ಸೇವೆ ಆ.೧೫ರಿಂದ ಅ.೨ ರವರೆಗೆ ನಡೆದ ವಿಶೇಷ ಜನಾಂದೋಲನ ಕರ‍್ಯಕ್ರಮದ ನಂತರ ಉದ್ಯಾನವನವನ್ನು ಪಟ್ಟಣದ ಶ್ರೀ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಾಡಿನ ಅನೇಕ ಪೂಜ್ಯರು ಸೇರಿ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಚತೆಗೆ ಮುಂದಾದರು.
ಇದೇ ಸಂದರ್ಭದಲ್ಲಿ ಸಿದ್ಧಲಿಂಗ ಸ್ವಾಮೀಜಿ ಪಟ್ಟಣದ ಪುರಸಭೆಯ ಪೌರ ಕಾರ್ಮಿಕರಿಗೆ ರುದ್ರಾಕ್ಷಿ ಧಾರಣೆ ಮಾಡಿ ಮಾತನಾಡಿ, ಸಾರ್ವಜನಿಕರ ಉತ್ತಮ ಆರೋಗ್ಯಕ್ಕೆ ಪೌರ ಕಾರ್ಮಿಕರ ಪಾತ್ರ ಬಹಳಷ್ಟಿದೆ. 11 ದಿನ ಪಾದಯಾತ್ರೆ ಹಿನ್ನಲೆಯಲ್ಲಿ ಪಟ್ಟಣದ ಅನೇಕ ವಾರ್ಡುಗಳ ಸ್ವಚ್ಚತೆಗೆ ಮುಂದಾದ ಹಿನ್ನಲೆಯಲ್ಲಿ ಅವರನ್ನೆಲ್ಲಾ ಸ್ಮರಿಸಿಕೊಂಡು ಅಭಿನಂದಿಸಿದರು. ಸಾರ್ವಜನಿಕರು ಪಟ್ಟಣದ ಸುಂದರ ಪರಿಸರಕ್ಕೆ ಕೈಜೋಡಿಸಬೇಕು. ಪಟ್ಟಣದಲ್ಲಿ ಕಸ ವಿಲೇವಾರಿ ಆಗದ ಕಾರಣ, ಕಸ ವಿಲೇವಾರಿ ಸಮಸ್ಯೆ ಬಹಳಷ್ಟು ಆದ ಹಿನ್ನಲೆಯಲ್ಲಿ ಕೂಡಲೇ ಪುರಸಭೆಯ ಅಧಿಕಾರಿಗಳು ಗಮನಹರಿಸಬೇಕು ಎಂದು ಕರೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್ ಚಿತ್ತರಗಿ ಮಾತನಾಡಿ, ಪಟ್ಟಣ ಸ್ವಚ್ಚತೆಯಾದಲ್ಲಿ ಇಡೀ ದೇಶವೇ ಅಭಿವೃದ್ದಿಯಾದಂತೆ. ಪಟ್ಟಣದ ಸ್ವಚ್ಚತೆಗೆ ಪ್ರತಿಯೊಬ್ಬರೂ ಕೈಜೊಡಿಸಿದ್ದಲ್ಲಿ ಮಾತ್ರ ಪಟ್ಟಣ ಅಭಿವೃದ್ದಿಯಾಗಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ನಾಡಿನ ಅನೇಕ ಪೂಜ್ಯರು, ಕಿರಿಯ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ, ಸದಸ್ಯರಾದ ನೀಲಪ್ಪ ನಾಯಕ, ಜಗದೇವಿ ಗುಂಡಳ್ಳಿ, ಪ್ರವೀಣ ಪೂಜಾರಿ ಮುಖಂಡರಾದ ಶರಣಪ್ಪ ಬೆಲ್ಲದ, ವಿವೇಕ್ ಬ್ರಿಗೇಡ್ ಮುಖ್ಯಸ್ಥ ವಿನೂತ ಕಲ್ಲೂರ ದೇಸಾಯಿ, ಸಂಗಮೇಶ ಹುಜರತಿ ಸೇರಿದಂತೆ ಅನೇಕರು ಇದ್ದರು.
ಸ್ವಚ್ಚತೆ ನಂತರ ಬಸವ ತೀರ್ಥ, ಬಸ್ ನಿಲ್ದಾಣ ಆವರಣ ಸೇರಿದಂತೆ ಪಟ್ಟಣದ ಹಲವು ಸಾರ್ವಜನಿಕ ಪ್ರದೇಶಗಳನ್ನು ಪೌರ ಕಾರ್ಮಿಕರು ಸ್ವಚ್ಚತೆಗೆ ಮುಂದಾದರು.

 

Leave a Reply

Your email address will not be published. Required fields are marked *

error: Content is protected !!