ಉದಯವಾಹಿನಿ, ಇಂಡಿ: ನಿಂತ ನೀರಿನಿಂದ ಮಲೇರಿಯಾ ರೋಗ  ಹರಡುತ್ತದೆ ಕಾರಣ ತಮ್ಮ ಮನೆಯ ಹಾಗೂ ಪರಿಸರ ಸುಂದರವಾಗಿ  ಇರುವಂತೆ ನೋಡಿ ಕೊಳ್ಳಬೇಕು ಹಾಗೂ
ನಮ್ಮ ಆರೋಗ್ಯವನ್ನು ಉತ್ತಮ ಪಡಿಸಿ ಕೊಳ್ಳಲು  ನಮ್ಮ ಸುತ್ತಮುತ್ತ ಉತ್ತಮವಾದ ಪರಿಸರ ನಿರ್ವಹಣೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು  ಹಿರಿಯ  ಆರೋಗ್ಯ ನಿರಕ್ಷಣಾಧಿಕಾರಿ ಶಿವಪುತ್ರ ಅತನೂರ (ಅಂತಗಂಗಿ )ಹೇಳಿದರು. ಇಂಡಿ  ತಾಲೂಕ  ಸರಕಾರಿ  ಚಿಕ್ಕಬೇವನೂರ ಗ್ರಾಮದ  ಆಸ್ಪತ್ರೆಯಲ್ಲಿ ಸ್ವಚ್ಛ ಭಾರತ್ ಅಭಿಯಾನ ಅಂಗವಾಗಿ  ಶ್ರಮ ಧಾನ  ಕಾರ್ಯಕ್ರಮದಲ್ಲಿ  ಅವರು ಮಾತನಾಡಿ ನಮ್ಮ ಆಸ್ಪತ್ರೆಯ ಹೊರಾಂಗಣ ಮತ್ತು ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಪ್ರತಿಯೊಬ್ಬರು ಕಾಪಡಬೇಕು ನಮ್ಮ ಆಸ್ವತ್ರೆ ಸ್ವಚ್ಛಯಾಗಿ ನಿರ್ಮಾಣವಾಗಬೇಕು ಎಂಬ ಗುರಿಯನ್ನು ನಾವುಗಳು ಇನ್ನೂ ತಲುಪಬೇಕಾಗಿದೆ ಎಂದರು.ವೈದ್ಯಾಧಿಕಾರಿ ಡಾ .ಪ್ರಶಾಂತ  ದುಮಗೊಂಡ   ಮಾತನಾಡಿ ನಮ್ಮ ಮನೆಯ ಹಾಗೂ ನಮ್ಮ ಸೂತ್ತಮುತ್ತಲಿನ  ಸ್ವಚ್ಚತೆ ಮತ್ತು ಪರಿಸರ ನೈರ್ಮಲ್ಯದ ಕುರಿತು ಆಗಾಗ್ಗೆ ಚರ್ಚೆಗಳನ್ನು  ಆಗಬೇಕು ನಮ್ಮ ಆರೋಗ್ಯ ಇಲಾಖೆಯ ಸಿಬ್ಬಂದಿವರಿಗೆ ಸ್ವಚ್ಛತೆ ಕಡೆ ಗಮನ ಹರಿಸಬೇಕು  ಎಂದರು. ಹೆಚ್ ಆಯ್ ಓ ಅಧಿಕಾರಿ ರಾಜು ದಸವಂತ ಹಾಗೂ ಪ್ರದೀಪ ಬೂದಿಹಾಳ  ಮಾತನಾಡಿ   ಸ್ವಚ್ಛತೆ ಇರುತ್ತದೆ ಆ ಕಡೆ ದೇವರು ಇರುತ್ತಾನೆ ಎಂದು ಹಿರಿಯರ ಮಾತು ಆದರೆ ತಮ್ಮ ಸುತ್ತಮುತ್ತಲಿ ಪರಿಸರ ಸ್ವಚ್ಛತೆ ಇದ್ದರೆ ಸಂಪೂರ್ಣ ಆರೋಗ್ಯವಂತರಾಗಿರಲು ಸಾಧ್ಯ ಎಂದರು. ಆರೋಗ್ಯ ಅಧಿಕಾರಿ ಮಾರುತಿ ರಾಠೋಡ  ಹಾಗೂ ಮಾಂತೇಶ ಅವರಸಂಗ  ಶಂಕರ ಸಿ ಹೆಚ್ ಓ ಅವರು ಮಾತನಾಡಿ  ಕುಡಿಯುವ ನೀರಿನ ಟ್ಯಾಂಕ್, ಆಹಾರ ತಯಾರಿಸುವ ಪಾತ್ರೆಗಳು, ಅಡುಗೆಮನೆ,  ಇತರೆ ಕೊಠಡಿ, ಊಟಕ್ಕೂ ಮುನ್ನ ಮತ್ತು ನಂತರ ಕೈ ತೊಳೆಯುವ ವಿಧಾನ, ಶೌಚಾಲಯಗಳನ್ನು  ಜೊತೆ ಸೇರಿ ಸಕಾಲಕ್ಕೆ ಸ್ವಚ್ಛ ಮಾಡುತ್ತಿರಬೇಕು.ನಮ್ಮಸುತ್ತ ಮುತ್ತಲು  ಅಕ್ಕಪಕ್ಕದಲ್ಲಿ ಗಿಡಗಳನ್ನು ನೆಟ್ಟು ನೀರು ಗೊಬ್ಬರ ಹಾಕಿ ಪೋಷಿಸುವ ಕೆಲಸ ಮಾಡಬೇಕು ಎಂದರು. ಶ್ರೀಮಂತ ಸಿ ಹೆಚ್ ಓ. ಶಿವಾನಂದ ಸಿ ಹೆಚ್ ಓ . ಪ್ರೀಯಾಂಕ. ವಿದ್ಯಾ ಶ್ರೀ .ಪಾರ್ವತಿ. ಎಸ್.ಎ. ಶೇಖ. ಟಿ.ಎ.ಶೇಖ. ಕಲ್ಪನ . ಸಂಜೀವಕುಮಾರ. ಅಕ್ಷಯ . ಸಿಬ್ಬಂದಿಯವರು ಸೇರಿದಂತೆ ಆಸ್ಪತ್ರೆ  ಸ್ವಚ್ಛಗೊಳಿಸಿದರು.  ಬಸಲಿಂಗ ಅಂಜುಟಗಿ ಸ್ವಾಗತಿಸಿ ವಂದಿಸಿದರು

Leave a Reply

Your email address will not be published. Required fields are marked *

error: Content is protected !!