ಉದಯವಾಹಿನಿ, ಕೀವ್‌ : ರಷ್ಯಾ ವಿರುದ್ಧ ಹೋರಾಟ ನಡೆಸುತ್ತಿರುವ ನಮ್ಮ ಸಂಕಲ್ಪವನ್ನು ಯಾರಿಂದಲೂ ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ಯುದ್ಧ ಪೀಡಿತ ಉಕ್ರೇನ್‌ಗೆ ಆರ್ಥಿಕ ನೆರವು ನೀಡಬೇಕೆಂಬ ಅಧ್ಯಕ್ಷ ಜೋ ಬೈಡನ್ ನಿಲುವಿಗೆ ಯುಎಸ್‌ ಸಂಸತ್‌ನಲ್ಲಿ ನಿರೀಕ್ಷಿತ ಬೆಂಬಲ ದೊರೆತಿಲ್ಲ.
ಆದಾಗ್ಯೂ, ಉಕ್ರೇನ್ ಬೆಂಬಲಿಸುವ ಸಂಸದರು ಈ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಬೈಡನ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ.
ಪ್ರತ್ಯೇಕ ಮಿಲಿಟರಿ ನೆರವು ನೀಡುವುದಾಗಿ ಯುಎಸ್‌ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅವರು ದೂರವಾಣಿ ಸಂಭಾಷಣೆಯಲ್ಲಿ ಭರವಸೆ ನೀಡಿರುವುದಾಗಿ ಉಕ್ರೇನ್‌ ರಕ್ಷಣಾ ಸಚಿವ ರುಸ್ಟೆಂ ಉಮೆರೊವ್ ತಿಳಿಸಿದ್ದಾರೆ.
‘ಕಾರ್ಯದರ್ಶಿ ಆಸ್ಟಿನ್‌ ನನಗೆ ಭರವಸೆ ನೀಡಿದ್ದಾರೆ’ ಎಂದು ಉಮೆರೊವ್ ಎಕ್ಸ್‌ನಲ್ಲಿ(ಟ್ವಿಟರ್‌) ಬರೆದುಕೊಂಡಿದ್ದಾರೆ. ‘ಯುಎಸ್‌ ನೆರವು ನೀಡುವುದನ್ನು ಮುಂದುರಿಸಲಿದೆ. ಉಕ್ರೇನ್‌ ಯೋಧರಿಗೆ ಯುದ್ಧರಂಗದಲ್ಲಿ ಬಲವಾದ ಬೆಂಬಲ ಸಿಗಲಿದೆ’ ಎಂದೂ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!