ಉದಯವಾಹಿನಿ,ಚಿತ್ರದುರ್ಗ: ಪ್ರತಿಯೊಬ್ಬ ನಾಗರೀಕರು ಪ್ರತಿ ತಿಂಗಳ ಒಂದು ಗಂಟೆ ಸಮಯವನ್ನು ತಮ್ಮ ತಮ್ಮ ಮನೆಗಳ ಸುತ್ತಮುತ್ತಲಿನ ಸ್ವಚ್ಚತೆಗಾಗಿ ಮೀಸಲಿಟ್ಟರೆ ಮಹಾತ್ಮ ಗಾಂಧಿಜೀ ಅಂದು ಕಂಡಿದ್ದ ಸ್ವಚ್ಛ ಭಾರತದ ಕನಸು ನಾವು ನನಸು ಮಾಡಬಹುದು ” ಎಂದು ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಯೋಗ ಪ್ರಚಾರಕ ರವಿ ಕೆ.ಅಂಬೇಕರ್ ಅಭಿಪ್ರಾಯ ಪಟ್ಟಿದ್ದಾರೆ.
ಮಹಾತ್ಮ ಗಾಂಧೀಜಿಯವರ 154ನೇ ಜನ್ಮದಿನದ ಅಂಗವಾಗಿ ಸೋಮವಾರ ಚಿತ್ರದುರ್ಗದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಸದಸ್ಯರು ಬ್ಯಾಂಕ್ ಕಾಲೋನಿ ನಾಗರೀಕರ ಸಹಯೋಗದೊಂದಿಗೆ ನಗರದ ತುರುವನೂರು ರಸ್ತೆಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಪ್ರಾಂಗಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸ್ವಚ್ಚತಾ ಹೀ ಸೇವ ಅಭಿಯಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಅವರು ಮಾತನಾಡಿದರು. ಮಹಾತ್ಮಾ ಗಾಂಧೀಜಿಯವರು ತಮ್ಮ ಸುತ್ತಮುತ್ತಲಿನ ಜನರಿಗೆ ಸ್ವಚ್ಛತೆ ಕಾಪಾಡುವ ಬಗ್ಗೆ ಶಿಕ್ಷಣ ನೀಡುವ ಮೂಲಕ ರಾಷ್ಟ್ರಕ್ಕೆ ಅತ್ಯುತ್ತಮ ಸಂದೇಶವನ್ನು ನೀಡಿದರು. ಆ ಮೂಲಕ ಅವರು”ಸ್ವಚ್ಛ ಭಾರತ” ದ ಕನಸು ಕಂಡಿದ್ದರು, ಅವರ ಅಂದಿನ ಕನಸನ್ನು ನನಸು ಮಾಡುವ ಸಲುವಾಗಿ ಇಂದಿನ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸ್ವಚ್ಛತೆಯೇ ಸೇವೆ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ ಅದಕ್ಕೆ ನಾವೆಲ್ಲರೂ ಕೈಜೋಡಿಸಬೇಕಾಗಿದೆ ದೇಶದ ಗಡಿ ಕಾಯುವ ಯೋಧರು ನಮ್ಮನ್ನು ಶತ್ರುಗಳಿಂದ ರಕ್ಷಿಸಿದಂತೆ ದೇಶದ ಒಳಗಡೆ ನಮ್ಮ ಸ್ವಚ್ಚತಾ ಕರ್ಮಿಗಳು ಪ್ರತಿದಿನ ಸಾವಿರಾರು ಕೀಟಾಣುಗಳಿಂದ ಹರಡಬಹುದಾದ ರೋಗಗಳಿಂದ ನಮ್ಮನ್ನು ಕಾಪಾಡಲು ಪ್ರತಿದಿನ ಹೋರಾಡುತ್ತಾರೆ ಅದಕ್ಕಾಗಿ ಸ್ವಚ್ಚತಾ ಕರ್ಮಿಗಳನ್ನು ಸೈನಿಕರಂತೆ ಗೌರವದಿಂದ ಕಾಣಬೇಕು” ಎಂದು ತಿಳಿಸಿದರು. ಯೋಗ ಸಂಸ್ಥೆಯ ಸದಸ್ಯರು ವೆಂಕಟೇಶ್ವರ ದೇವಾಲಯ ಆವರಣವನ್ನು ಸ್ವಚ್ಚಗೊಳಿಸುವುದರ ಜೊತೆಗೆ ದೇವಾಲಯದ ಸುತ್ತಲಿನ ಪ್ಲಾಸ್ಟಿಕ್ ಕವರುಗಳು ಹಾಗೂ ಇನ್ನಿತರ ತ್ಯಾಜ್ಯವನ್ನು ಸಂಗ್ರಹಿಸಿ ಹತ್ತಿರದ ಕಸದ ತೊಟ್ಟಿಗೆ ಹಾಕಿದರು.ಸ್ವಚ್ಚತಾ ಕಾರ್ಯದಲ್ಲಿ ಯೋಗ ಸಾಧಕರಾದ ವನಜಾಕ್ಷಮ್ಮ, ಅಂಬುಜಾ, ಭಾಗ್ಯ, ಮೀನಾಕ್ಷಿ, ರೇಣುಕಾ, ರೂಪ, ಮೂಸ್ಟುಟರಮ್ಮ, ಕುಮುದ, ಹೇಮಲತಾ, ಅನುಸೂಯ. ರಮಾ, ಶೀಲಾ, ಚಿತ್ರಾ, ಡಾ. ಲತಾ.