ಉದಯವಾಹಿನಿ,ತಾಳಿಕೋಟಿ:  ಗಾಂಧಿ ಜಯಂತಿ ಹಾಗೂ ಪ್ರವಾದಿ ಮೊಹಮ್ಮದ ಅವರ  ಜನ್ಮ ದಿನಾಚರಣೆ ಅಂಗವಾಗಿ ಸೋಲಿಡಾರಿಟಿ ಯೂಥ್ ಮೊಮೆಂಟ್ ಹಾಗೂ ಎಪಿಜೆ ಅಬ್ದುಲ್ ಕಲಾಂ ಇವರ ಜಂಟಿ ಆಶ್ರಯದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸೋಮವಾರ ಗಾಂಧೀಜಿ ಜಯಂತಿ ಅಂಗವಾಗಿ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ನಡೆದ  ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಠಾಣಾ  ಪಿಎಸ್ಐ ರಾಮನಗೌಡ ಸಂಕನಾಳ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎರಡು ಸಂಘಟನೆಗಳು ಹಮ್ಮಿಕೊಂಡ ಈ ಶ್ರಮದಾನ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದರು. ಸಾಲಿಡಾರಿಟಿ ಯುಥ್ ಮೂವ್ಮೆಂಟ್ ಕಾರ್ಯದರ್ಶಿ ಹುಸೇನ್ ಪಟೇಲ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಜಗತ್ತಿಗೆ ಶಾಂತಿಯ ಸಂದೇಶವನ್ನು ಕೊಟ್ಟ ಪ್ರವಾದಿ ಮೊಹಮ್ಮದರ ಜಯಂತಿ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಮಹಾನುಭಾವರು ನೀಡಿದ ಆದರ್ಶಗಳನ್ನು ನಾವೆಲ್ಲರೂ ಅನುಸರಿಸಬೇಕಾಗಿದೆ ನಾವೆಲ್ಲರೂ ಒಂದಾಗಿ ನಮ್ಮ ದೇಶವನ್ನು ಪ್ರಗತಿಯ ಯಡೆಗೆ ತೆಗೆದುಕೊಂಡು ಹೋಗಬೇಕಾಗಿದೆ ಈ ಕಾರ್ಯಕ್ರಮದಲ್ಲಿ ಸಹಕರಿಸಿದ ಠಾಣಾ ಮುಖ್ಯಸ್ಥರಿಗೆ ಹಾಗೂ ಸಿಬ್ಬಂದಿಗಳಿಗೆ  ಅಭಿನಂದಿಸುತ್ತೇವೆ ಎಂದರು. ಈ ಸಮಯದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ. ಕೆ. ಚೋರಗಸ್ತಿ. ಏ ಎಸ್ ಐ ಪಡಶೆಟ್ಟಿ. ಹವಾಲ್ದಾರರಾದ ಕುಡಚಿ.ಗಣತಿ. ಮುಖಂಡರಾದ ಮಹಿಬೂಬ್ ಷಾ ಮಕಾಂದಾರ. ದಾವಲ್ ಮೇಸ್ತ್ರಿ. ಮೋದಿನಸಾ ನಗಾಚಿ೯. ಸಂಘಟನೆಯ ಪದಾಧಿಕಾರಿಗಳಾದ ಮೈನುದ್ದೀನ್ ಕೊರ್ತಿ. ಶಫೀಕ ಇನಾಮದಾರ. ಅಜೀಜ ಜಮಾದಾರ.   ಅಯಾಜ ಪಟೇಲ್.ಜಹೀರ ತಾರಘರ. ಶಫೀಕ ರಾಯಚೂರ. ಸದ್ದಾಂ ಕೆಂಭಾವಿ.ಶಫೀಕ ಶಾಫೂರಕರ. ಹೈದರಲಿ ಅರಬ. ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!