
ಉದಯವಾಹಿನಿ,ಚಿಂಚೋಳಿ: ಕಾಂಗ್ರೆಸ್ ನವರ ಗ್ಯಾರಂಟಿಗಳು ಜಾರಿ ಮಾಡಿರುವುದರಿಂದ ದೇಶ ದೀವಾಳಿ ಆಗುತ್ತೆ ಎನ್ನುವ ಬಿಜೆಪಿಗರು ಕೇಂದ್ರದ ಬಿಜೆಪಿ ಸರ್ಕಾರ 10ವರ್ಷದಲ್ಲಿ ದೇಶದ ಶ್ರೀಮಂತ ಜನರ ಸುಮಾರು 11ಲಕ್ಷ ಕೋಟಿ ರೂ.ಸಾಲಮನ್ನಾ ಮಾಡಿ ಬಡವರಿಗೆ ದ್ರೋಹ ಬಗೆದೆದ್ದಾರೆ ಆಗ ದೇಶ ದೀವಾಳಿ ಆಗುತ್ತಿಲ್ಲವೇ ಎಂದು ಬಿಜೆಪಿ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ವಾಗ್ದಾಳಿ ನಡೆಸಿದರು.ತಾಲ್ಲೂಕಿನ ಸುಲೇಪೇಟ ಗ್ರಾಮದ ಮಹಾತೇಂಶ್ವರ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು,ಈಗಾಗಲೇ ಕಾಂಗ್ರೆಸ್ ಪಕ್ಷ ನೀಡಿದ ಐದು ಗ್ಯಾರಂಟಿಗಳ ಭರವಸೆಗಳಲ್ಲಿ 4ಗ್ಯಾರಂಟಿಗಳು ಇಡೇರಿಸಿದ್ದೇವೆ ಐದನೇಯ ಗ್ಯಾರಂಟಿ ಯುವ ನಿಧಿ ಡಿಸೆಂಬರ್ ತಿಂಗಳಲ್ಲಿ ಜಾರಿಗೆ ಮಾಡಿ ನುಡಿದಂತೆ ನಡೆಯುವ ಯಾವುದಾದರು ಪಕ್ಷ ಇದ್ದರೆ ಕಾಂಗ್ರೆಸ್ ಪಕ್ಷ ಮಾತ್ರವಿದೆ.ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಖಾಲಿ ಇರುವ ಎಲ್ಲಾ ಹುದ್ದೆಗಳು ಭರ್ತಿಗೊಳಿಸಲು ನಿರ್ದೇಶನ ನೀಡಲಾಗಿದೆ.
ಐದನೇ ಗ್ಯಾರಂಟಿ ಯುವ ನಿಧಿಗಾಗಿ 250ಕೋಟಿ ರೂ.ಮೀಸಲು ಇಡಲಾಗುವುದು.ಪ್ರತಿಯೋಬ್ಬರಿಗೆ 10ಕೆಜಿ ಅಕ್ಕಿಯ ಬದಲು 5ಕಿಜಿ ಅಕ್ಕಿ 5ಕಿಜಿ ಅಕ್ಕಿಯ ಬದಲು ಹಣ ಹಾಕುತ್ತಿದ್ದೇವೆ,ಸ್ತ್ರೀ ಶಕ್ತಿ ಯೋಜನೆಯಲ್ಲಿ ಮಹಿಳೆಯರು ಬಸ್ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ,ವಿದ್ಯುತ್ ಬಿಲ್ಲನ್ನು ಉಚಿತವಾಗಿ ಮಾಡಲಾಗಿದೆ,ಈಗಾಗಲೇ ರಾಜ್ಯದಲ್ಲಿ 90ಪ್ರತಿಶತಃ ಜನರು ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಇನ್ನುಳಿದ ಜನರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಅಂಥ ಜನರಿಗೆ ಯೋಜನೆ ಮುಟ್ಟಿಸುವಂತ ಕೆಲಸ ಮಾಡಬೇಕು.ಕಲ್ಯಾಣ ಕರ್ನಾಟಕ ಭಾಖದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು 5ಸಾವಿರ ಕೋಟಿ ನೀಡುವ ಭರವಸೆ ನೀಡಿದ್ದು ಈಗಾಗಲೇ 3ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ,ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕ.ಕ.ಭಾಗಕ್ಕೆ ಎರಡು ಮಂತ್ರಿ ಬಿಟ್ಟರೆ ಮಂತ್ರಿಯು ಕೊಟ್ಟಿಲ್ಲ ಅಭಿವೃದ್ಧಿಯೂ ಮಾಡಿಲ್ಲ,ಈ ಭಾಗಕ್ಕೆ ಬಿಜೆಪಿಗರು ಕಡೆಗಣಿಸಿದ್ದಾರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದನಂತರ ಅಭಿವೃದ್ಧಿ ಪಂಥದತ್ತ ನಡೆದು ಕಾಂಗ್ರೆಸ್ ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ ಎಂದರು.ಮಲ್ಲಿಕಾರ್ಜುನ ಗುಲಗಂಜಿ ಸ್ವಾಗತಿಸಿದರು,ರಜಾಕಪಟೆಲ ನಿರೂಪಿಸಿದರು,ಮೇಘರಾಜ ರಾಠೋಡ್ ವಂದಿಸಿದರು.ತಾಹೇರ ಪಟೇಲ,ಬಾಬುರಾವ ಪಾಟೀಲ ಮಾತನಾಡಿದ್ದರು.
ಈ ಸಂದರ್ಭದಲ್ಲಿ ಬಸವರಾಜ ಪಾಟೀಲ ಹುಡಗಿ,ಬಸವರಾಜ ಸಜ್ಜನಶೇಟ್ಟಿ,ಶಿವಕುಮಾರ ಸಜ್ಜನ,ಸುನೀಲಕುಮಾರ ಕೋರಿ,ನಾಸೀರ ಮದ್ದರಗಿ,ಲಿಂಗಶೇಟ್ಟಿ,ಚಾಂದಪಾಷ ಮೋಮೀನ್,ಶಿವಶರಣರೆಡ್ಡಿ ಪಾಟೀಲ,ಬಸವರಾಜ ಮಾಲಿ,ಬಸವರಾಜ ಬಿರಾದಾರ,ಸಂತೋಷ ಗುತ್ತೇದಾರ,ಲಕ್ಷ್ಮಣ ಆವುಂಟಿ,ಶಾಮರಾವ ದೇಸಾಯಿ,ಬಾಬು ಗುಲಗಂಜಿ,ಈಶ್ವರ ಪಾಟೀಲ,ಭೀಮಶಂಕರ ಕೋಳ್ಳಿ,ನಾಗರತ್ನ,ಲಲಿತಾ,ಅಂಕಿತಾ ಕಮಲಾಕರ್,ರುದ್ರಶೇಟ್ಟಿ ಪಡಶೇಟ್ಟಿ,ವಸಂತ ಕುಲಕರ್ಣಿ,ಜಾವೀದ ಖುರೇಷಿ,ಪ್ರಕಾಶ ಮಂತ್ರಿ,ಅಶೋಕ ಐನಾಪೂರ,ಶಿವನಂದಸ್ವಾಮಿ,ಶಿವಕುಮಾರ, ಅನೇಕರಿದ್ದರು.
ನುಡಿದಂತೆ ನಡೆಯುವ ಸರ್ಕಾರ ಕಾಂಗ್ರೆಸ್ ಸರ್ಕಾರವಿದೆ,371ಜೆ ಅಡಿಯಲ್ಲಿ ಜೆಟಿಓನಲ್ಲಿ 15೦೦ಜನರಿಗೆ ನೇಮಕ ಮಾಡುತ್ತೇವೆ,ಫಸಲು ಭೀಮಾ ಯೋಜನೆಯಲ್ಲಿ ದೊಡ್ಡ ಹಗರಣವಿದೆ ದೊಡ್ಡ ದೊಡ್ಡ ಜನರು 40ಸಾವಿರ ಕೋಟಿ ರೂ.ಗುಳಂ ಮಾಡಿದ್ದಾರೆ,ರಾಜ್ಯದ 270ಐಟಿಐ ಕಾಲೇಜುಗಳಲ್ಲಿ 150ಐಟಿಐ ಕಾಲೇಜುಗಳು ಮೇಲ್ದರ್ಜೆಗೆ ಏರಿಸಲು 30ಕೋಟಿ ರೂ.ಖರ್ಚು ಮಾಡಲಾಗುತ್ತಿದ್ದೇವೆ,ಕೌಶಲ್ಯಾಭಿವೃ ಧ್ಧಿ ಇಲಾಖೆಯಲ್ಲಿ ಅನೇಕ ವಿಧ್ಯಾಭ್ಯಾಸ ಮಾಡಿದ ವಿಧ್ಯಾರ್ಥಿಗಳಿಗೆ ಉದ್ಯೋಗ ಸೃಷ್ಟಿ ಮಾಡಲು ಚಿಂತನೆ ನಡೆಯುತ್ತಿದೆ,ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತಿದ್ದೇವೆ ಆದರೆ ಬಿಜೆಪಿ ಜೆಡಿಎಸ್ ಮಾಡುತ್ತಿರುವ ಆರೋಪಗಳು ಹೊಟ್ಟೆಕಿಚ್ಚು ಪಟ್ಟುಕೊಂಡು ಹೇಳುತ್ತಿದ್ದಾರೆ.ಸೇಡಂ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ಮಾಹಿತಿ ಅರಿತು ಮೂರು ಅಧಿಕಾರಿಗಳಿಗೆ ಸಸ್ಪೆಂಡ್ ಮಾಡಲಾಗಿದೆ.
:– ಡಾ.ಶರಣಪ್ರಕಾಶ ಪಾಟೀಲ
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃಧ್ಧಿ ಮತ್ತು ಜೀವನೋಪಯ ಸಚಿವರು.
