
ಉದಯವಾಹಿನಿ,ಶಿಡ್ಲಘಟ್ಟ:ಚಿತ್ರದುರ್ಗದಿಂದ ಪ್ರಾರಂಭವಾಗಿರುವ ಶೌರ್ಯ ಜಾಗರಣ ರಥಯಾತ್ರೆಗೆ ಸೋಮವಾರ ಶಿಡ್ಲಘಟ್ಟ ನಗರದಲ್ಲಿ ಅದ್ಧೂರಿ ಸ್ವಾಗತ ಕೋರಿದರು.
ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಪ್ರಾರಂಭವಾದ ರಥಯಾತ್ರೆ ಹಾಗೂ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಥಕ್ಕೆ ಹೂ ಸಮರ್ಪಿಸುವ ಮೂಲಕ ನಾಗರೀಕರು ಸ್ವಾಗತಿಸಿದರು. ಕೋಟೆ ವೃತ್ತದ ಮೂಲಕ ಹಾದು ಹೋಗಿ ದ್ವಿಮುಖ ಗಣಪತಿ ದೇವಸ್ಥಾನ ,ಬಿಜೆಪಿ ಸೇವಾ ಸೌಧ ಕಛೇರಿಯ ಮುಂಭಾಗ ಪೂಜೆ ಸಲ್ಲಿಸಿ ಚಿಂತಾಮಣಿ ಕಡೆಗೆ ಸಾಗಿತು.
ಬಜರಂಗದಳ ಸ್ಥಾಪನೆಯಾಗಿ 60 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ನಡೆಯುತ್ತಿರುವ ಐತಿಹಾಸಿಕ ರಥಯಾತ್ರೆ 90ರ ದಶಕದಲ್ಲಿ ನಡೆದ ರಾಮಮಂದಿರ ರಥಯಾತ್ರೆಯಷ್ಟೇ ಪ್ರಮುಖವಾಗಿದೆ. ಚಿತ್ರದುರ್ಗದಲ್ಲಿ ಸೆ.25ರಂದು ಆರಂಭವಾಗಿದ್ದು ಅ.10ರಂದು ಉಡುಪಿಯಲ್ಲಿ ಸಮಾರೋಪಗೊಳ್ಳಲಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ನಮೋ ನಾಗರಾಜು ತಿಳಿಸಿದರು.
ಪೊಲೀಸರು ಸಹ ರಥಯಾತ್ರೆ ಚಿಂತಾಮಣಿ ಕಡೆಗೆ ಸಾಗುವವರಿಗೂ ತೀವ್ರ ಕಟ್ಟೆಚ್ಚರ ವಹಿಸಿದ್ದರು.ಬಜರಂಗದಳದ ಮಾಜಿ ಶಾಸಕರಾದ ರಾಜಣ್ಣ, ಜಗದೀಶ್ , ಯುವ ಮೋರ್ಚಾ ಅಧ್ಯಕ್ಷ ಭರತ್, ನಮೋ ನಾಗೇಶ್,ಭಾಜಪ ಮುಖಂಡ ಸೀಕಲ್ ಆನಂದ್ ಗೌಡ, ತ್ರಿವೇಣಿ, ಅಶ್ಪತಪ್ಪ, ಶ್ರೀನಾಥ್, ಹರೀಶ್, ಲೋಕೇಶ್, ಕಿಶೋರ್, ನವೀನ್ ಹಾಗೂ ವಿವಿಧ ಸಂಘಟನೆಗಳಿಂದ ರಾಮಾಂಜನೇಯ ,ರವಿ , ಗಂಗಾಧರ, ಮಂಜು ಮತ್ತಿತರರು ಹಾಜರಿದ್ದರು.
