
ಉದಯವಾಹಿನಿ, ಪೀಣ್ಯ ದಾಸರಹಳ್ಳಿ : ಈಗಿನ ಪರಿಸ್ಥಿತಿಯಲ್ಲಿ ರಾಷ್ಟ ನಾಯಕರ ಮತ್ತು ಮಹಾಪುರುಷರ ಜಯಂತಿ ಆಚರಣೆ ಮಾಡುವುದರ ಜೊತೆಗೆ ಈಗಿನ ಪೀಳಿಗೆಗೆ ಅವರು ಜೀವನ ಚರಿತ್ರೆ ಪುಸ್ತಕಗಳು ಓದಿ ತಿಳಿದು ಕೊಳ್ಳುವ ರೂಡಿ ಮಾಡಿ ಕೊಳ್ಳಬೇಕು ಎಂದು ಕಾಂಗ್ರೆಸ್ ಪ್ರಭಾವಿ ನಾಯಕ ಲಗ್ಗೆರೆ ನಾರಾಯಣ ಸ್ವಾಮಿ ಹೇಳಿದರು. ರಾಜಗೋಪಾಲ ನಗರ ಮುಖ್ಯ ರಸ್ತೆಯಲ್ಲಿ ರುವ ಕರ್ನಾಟಕ ನ್ಯೂಸ್ ಪ್ರೆಸ್ ಕ್ಲಬ್ ಹಾಗೂ ಭಾರತ ವೈಭವ ಕನ್ನಡ ದಿನಪತ್ರಿಕೆಯ ಕಚೇರಿಯಲ್ಲಿ ಭಾರತ ವೈಭವ ಪತ್ರಿಕೆಯ ವರದಿಗಾರ ಅಯ್ಯಣ್ಣ ಮಾಸ್ಟರ್, ಭೀಮ ಸಂದೇಶ ಪತ್ರಿಕೆಯ ಸಂಪಾದಕ ಹಾಗೂ ಬಯಲು ಸಿಂಹ ವರದಿಗಾರ ವೈ ಜಿ ನರಸಿಂಹ ಮೂರ್ತಿ, ರಾಜಕೀಯ ದುನಿಯಾ ಪತ್ರಿಕೆಯ ಸಂಪಾದಕ ಹಾಗೂ ಬಸವ ಕ್ರಾಂತಿ ಪತ್ರಿಕೆಯ ವರದಿಗಾರ ಕೆ ಎನ್ ರಮೇಶ್, ವಿಶ್ವ ವಾರಧಿ ಪತ್ರಿಕೆಯ ವರದಿಗಾರ ಗೋಪಿ ಇವರುಗಳ ನೇತೃತ್ವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಗಾಂಧಿ ಜೀ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗಾಂಧೀಜಿಯವರ ತತ್ವ ಸಿದ್ಧಾಂತಗಳು ಮತ್ತು ಆದರ್ಶಗಳನ್ನು ಈಗಿನ ಪೀಳಿಗೆಗೆ ಮತ್ತು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಹೋಗಬೇಕು ಎಂದು ಲಗ್ಗೆರೆ ನಾರಾಯಣ ಸ್ವಾಮಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಏಳಿಗೆಗಾಗಿ ಹೋರಾಡಿದ ಮಹಾನ್ ನಾಯಕರಲ್ಲಿ ಗಾಂಧೀಜಿ ಅವರು ಪ್ರಮುಖರು ಅವರ ಪ್ರೇರಣೆ ದೇಶದ ನೂರಾಮುವತ್ತು ಕೋಟಿ ಜನತೆಗೆ ಸ್ಪೂರ್ತಿ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಹಾಗೂ ರಾಮಯ್ಯ ಬಡಾವಣೆಯ ಹಿರಿಯ ಮುಖಂಡ ಶಿವಣ್ಣ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ರಾಜಗೋಪಾಲ ನಗರ ವಾರ್ಡಿನ ಸಮಾಜ ಸೇವಕ ಹಾಗೂ ವಿದ್ಯಾರ್ಥಿಗಳ ಮಿತ್ರ ಡಾ. ಎಚ್ ಎಸ್ ಬಿರೆದಾರ್ ಮಾತನಾಡಿದರು. ಇದೆ ವೇಳೆ ರಾಜಗೋಪಾಲ್ ನಗರ ವಾರ್ಡಿನ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಎನ್.ಅಮರೇಶ್ ರವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ವಿಶೇಷವಾಗಿ ಕೇಕ್ ತಿನ್ನಿಸಿ ಹುಟ್ಟುಹಬ್ಬದ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಎಚ್ ಎನ್ ಗಂಗಾಧರ್, ನ್ಯೂ ಸ್ಟಾಂರ್ಡ್ ಡ್ ಶಾಲೆಯ ಶಿಕ್ಷಕ ಹನುಮಂತರಾಯಪ್ಪ, ಅಂತರರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಶ್ರೀ ಕಾಂತ್, ಮುನಿಭೈರಪ್ಪ, ಸಂಜೀವ ಕುಮಾರ್, ಮಲ್ಲೇಶ್,ಭರತ್, ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
