ಉದಯವಾಹಿನಿ, ಕೋಲಾರ : ತಾಲೂಕಿನ ಹುತ್ತೂರು ಹೋಬಳಿಯ ವಿಟ್ಟಪನಹಳ್ಳಿ ಗ್ರಾಮದಲ್ಲಿ ಪಶುವೈದ್ಯ ಇಲಾಖೆಯ ವತಿಯಿಂದ ಗ್ರಾಮದ ಸುಮಾರು 150 ಕ್ಕೂ ಹೆಚ್ಚಿನ ರಾಸುಗಳಿಗೆ ಕಾಲು-ಬಾಯಿ ಜ್ವರದ ಲಸಿಕೆ ಹಾಕಲಾಯಿತು.ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಗ್ರಾಮದ ಡೇರಿ ಕಾರ್ಯದರ್ಶಿ ವಿಟ್ಟಪನಹಳ್ಳಿ ವೆಂಕಟೇಶ್ ಮಾತನಾಡಿ ಹಾಲು ಉತ್ಪಾದಕರು ಹಾಗೂ ರೈತರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೇ ಕಡ್ಡಾಯವಾಗಿ ರಾಸುಗಳಿಗೆ ಕಾಲು ಬಾಯಿ ಜ್ವರದ ವಿರುದ್ಧ ಲಸಿಕೆ ಹಾಕುವ ಮೂಲಕ ಜಾನುವಾರುಗಳ ರಕ್ಷಣೆ ಮಾಡಿ ಕೊಳ್ಳಬೇಕು ರಾಸುಗಳು ಆರೋಗ್ಯಕರವಾಗಿದ್ದರೆ ಮಾತ್ರ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಲ್ ನಾಗಪ್ಪ, ಪಶು ಪರೀಕ್ಷಕ ಕಾಂತರಾಜ್, ಸಹಾಯಕ ಡಿ.ನಾರಾಯಣಸ್ವಾಮಿ, ಪಶು ಇಲಾಖೆಯ ರೂಪ ಸೇರಿದಂತೆ ಹಾಲು ಉತ್ಪಾದಕರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!