
ಉದಯವಾಹಿನಿ, ಮಾಲೂರು: ತಾಲೂಕಿನ ಮಡಿವಾಳ ಗ್ರಾ.ಪಂ.ನ ಚೊಕ್ಕಂಡಹಳ್ಳಿ ಗ್ರಾಮದ ರೈತ ನಾಗೇಶ್ ಸೇವಂತಿ ಹೂವಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ಬೆಲೆ ಇಲ್ಲದ ಕಾರಣ ಸೇವಂತಿ ಹೂವಿನ ಬೆಳೆ ಹಾಕಿದ ರೈತರು ಸೇವಂತಿ ಹೂವಿನ ತೋಟವನ್ನು ರೋಟರಿ ಹೊಡೆದು ಕಿತ್ತು ಹಾಕುತ್ತಿದ್ದಾರೆ.ಕೋಲಾರ ಜಿಲ್ಲೆಯಲ್ಲಿ ಮಾಲೂರು ತಾಲೂಕು ಹೂ, ತರಕಾರಿಗೆ ಪ್ರಸಿದ್ಧವಾಗಿದ್ದು, ಇಲ್ಲಿ ಬೆಳೆಯುವ ತರಕಾರಿಗಳು, ಹೂಗಳನ್ನು ಇತರೆ ರಾಜ್ಯದ ಪ್ರಮುಖ ನಗರಗಳಿಗೆ ರವಾನಿಸುತ್ತಾರೆ. ರೈತರು ಉತ್ತಮ ಬೆಲೆ ಸಿಗಬಹುದೆಂದು ಸೇವಂತಿ ಹೂವಿನ ಬೆಳೆಯನ್ನು ಹಾಕಿದ್ದರು. ಮಾರುಕಟ್ಟೆಯಲ್ಲಿ ಸೇವಂತಿ ಹೂವಿಗೆ ಬೇಡಿಕೆ ಹಾಗೂ ಬೆಲೆ ಸಿಗದ ಕಾರಣ ರೈತರು ತಮ್ಮ ತೋಟಗಳಲ್ಲಿ ಹಾಕಿದ್ದ ಸೇವಂತಿ ಬೆಳೆಯನ್ನು ಟ್ರ‍್ಯಾಕ್ಟರ್ ರೋಟ್ರಿ ಮೂಲಕ ಕಿತ್ತು ಹಾಕುತ್ತಿದ್ದಾರೆ. ಸೇವಂತಿ ಬೆಳೆ ಹಾಕಿದ ರೈತರಿಗೆ ನಷ್ಟವಾಗುತ್ತಿದ್ದು, ಚೊಕ್ಕಂಡಹಳ್ಳಿ ಗ್ರಾಮದ ರೈತ ನಾಗೇಶ್ ಎಂಬುವರು 5 ಎಕರೆ ಜಮೀನಿನಲ್ಲಿ ಸೇವಂತಿ ಹೂವಿನ ಬೆಳೆ ಹಾಕಿದ್ದರು.ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದ ಕಾರಣ ಹೂಗಳನ್ನು ಬಿಡಿಸಿ ಮಾರುಕಟ್ಟೆಗೆ ಹಾಕಿದರೆ ಕೂಲಿಕಾರರ ಕೂಲಿ ಹಣ ಸಿಗುವುದಿಲ್ಲವೆಂದು, ಸೇವಂತಿ ಬೆಳೆಯನ್ನು ತಮ್ಮ ಟ್ರ‍್ಯಾಕ್ಟರ್ ನಿಂದ ಮುತ್ತು ಸೇವಂತಿ ಬೆಳೆಯನ್ನು ಕಿತ್ತು ನಾಶ ಮಾಡಿದ್ದಾರೆ.
