
ಉದಯವಾಹಿನಿ ಕೆಂಗೇರಿ ಉಪನಗರ : ಕೆಂಗೇರಿ ಉಪನಗರದ ಬ್ರಾಹ್ಮಣ ಸಭಾದ ಗಾಯತ್ರಿ ಮಂದಿರದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿಶೇಷವಾಗಿ ಪಿ ಎಚ್ ಡಿ ಮತ್ತು ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾರ್ಗದರ್ಶನದ ನುಡಿಗಳನ್ನಾಡಿದ ಸರ್ ಎಂ ವಿಶ್ವೇಶ್ವರಯ್ಯ ಅವರ ಮರಿ ಮೊಮ್ಮಗ ಹಾಗೂ ಹಿರಿಯ ಮಾರ್ಗದರ್ಶಕರಾದ ಎಂವಿ ಶೇಷಾದ್ರಿ ಮಾತನಾಡಿ ಸರ್ ಎಂ ವಿಶ್ವೇಶ್ವರಯ್ಯನವರ ಕೊಡುಗೆ ಅತ್ಯಂತ ಅಪಾರವಾಗಿದೆ ಎಂದು ಅವರ ಕೆಲವೊಂದು ದೃಷ್ಟಾಂತಗಳನ್ನು ವಿವರಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳು ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಮೊದಲನೆಯದಾಗಿ ತಂದೆ ತಾಯಿ ಎರಡನೆಯದು ಓದಿದ ಶಾಲೆ ಮೂರನೆಯದು ನಮ್ಮ ದೇಶ ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜೀವನ ನಡೆಸಬೇಕು ಎಂದು ಹೇಳಿದರು. ಸಭಾದ ಅತ್ಯುತ್ತಮವಾದ ಕಾರ್ಯವನ್ನ ಶ್ಲಾಘಿಸಿದರು.ಖ್ಯಾತ ವಾಣಿಜ್ಯೋದ್ಯಮಿ ಡಾಕ್ಟರ್ ಕಿರಣ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವುದರ ಮೂಲಕ ಸಾಧನೆ ಮಾಡಿದ್ದಾರೆ ದೇಶಕ್ಕೆ ಅವರ ಸೇವೆ ಸಲ್ಲಲಿ ಎಂದು ಹೇಳಿದರು ಹಾಗೆಯೇ ಬ್ರಾಹ್ಮಣರು ಸಂಘಟಿತರಾಗುವ ಮೂಲಕ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸಬೇಕು ಎಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ರಾಹ್ಮಣಸವಾದ ಅಧ್ಯಕ್ಷ ಸುಧೀಂದ್ರ ಕುಮಾರ್ ಮಾತನಾಡಿ ಜಾತ್ಯಾತೀತವಾಗಿ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸುತ್ತಿರುವೆ ಮಾರ್ಗದರ್ಶಕ ಸಂಘಟನೆ ಕೆಂಗೇರಿ ಬ್ರಾಹ್ಮಣ ಸಭಾ ಎನ್ನುವುದನ್ನು ತಿಳಿಸಿದರು.
ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋಭವ ಎನ್ನುವ ತತ್ವವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಮಾತೃ ಋಣ ಪಿತೃ ಋಣ ಸಮಾಜದ ಋಣ ತೀರಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭೆ ಪಲಾಯನವಾಗದೆ ರಾಜ್ಯ ರಾಷ್ಟ್ರಕ್ಕೆ ಕೊಡುಗೆ ನೀಡುವಂತಾಗಲಿ ಎಂದು ಆಶಿಸಿದರು.
ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಭೂಮಿಕಾ ಎಚ್ ಜಿ ಪ್ರಾರ್ಥಿಸಿದರು ಕಾರ್ಯದರ್ಶಿ ಎಎನ್ ಶಿವ ಸ್ವಾಮಿ ಸ್ವಾಗತಿಸಿದರು ಖಜಾಂಚಿ ಶ್ರೀಕಂಠ ಮೂರ್ತಿ ವಂದಿಸಿದರು. ರಮೇಶ್ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಉಷಾ ಗುರುದತ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸದಸ್ಯರಾದ ಗುರುಮೂರ್ತಿ ನರಸಿಂಹರಾಜು ವಿಶ್ವನಾಥ್ ವಿವೇಕ್ ಅರುಣಾಚಲ ಲಕ್ಷ್ಮೀಶ ಉಪಸ್ಥಿತರಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು. ಎಸ್ ಎಸ್ ಎಲ್ ಸಿ ಪಿಯುಸಿ ಇಂಜಿನಿಯರಿಂಗ್ ನಲ್ಲಿ ಬ್ರಾಹ್ಮಣ ಸಭಾ ದಿಂದ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿ ನಿಹಾರಿಕ ಉದ್ಯೋಗದಲ್ಲಿದ್ದು ಪ್ರಥಮ ಸಂಬಳದಲ್ಲಿ ಪುರಸ್ಕಾರಕ್ಕಾಗಿ ದೇಣಿಗೆಯನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಮೇಲ್ಪಂತಿ ಹಾಡಿದಳು. ಹಲವು ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು.
