ಉದಯವಾಹಿನಿ ಹೊಸಕೋಟೆ: ಬೆಂಗಳೂರು ಗ್ರಾಮಾಂತರಜಿಲ್ಲೆ ಹೊಸಕೋಟೆ ಪೊಲೀಸರು ಭರ್ಜರಿಕಾರ್ಯಾಚರಣೆಕಾರ್ಯಾಚರಣೆ ನಡೆಸಿದ್ದು, ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 5 ಜನ ಆರೋಪಿಗಳನ್ನು ಪತ್ತೆ ಮಾಡಿ 1 ಕೋಟಿ ಮೌಲ್ಯದ ೯೦೦ ಗ್ರಾಂಚಿನ್ನಾಭರಣ ಮತ್ತು ವಿವಿಧಕಂಪನಿಯ 15೦ ಸ್ಮಾರ್ಟ್ ಪೋನ್‌ಗಳನ್ನು ವಶಪಡಿಸಿಕೊಂಡಿದ್ದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೊಸಕೋಟೆ ಪೊಲೀಸರಿಗೆ ಅಬಿನಂದಿಸಿದ್ದಾರೆ. ಕದ್ದ ಮೊಬೈಲ್‌ಗಳನ್ನು ಮಾರಾಟ ಮಾಡಿ ಗೋವಾ, ಹೈದರಾಬಾದ್ ಸೇರಿದಂತೆದೊಡ್ಡದೊಡ್ಡ ನಗರಗಳಿಗೆ ತೆರಳಿ ವಿಲಾಸಿ ಜೀವನ ನಡೆಸುತ್ತಿದ್ದ.ಅಲ್ಲದೆ ಮೊಬೈಲ್ ಲಾಕ್‌ಗಳನ್ನು ಒಪನ್ ಮಾಡಿಗೂಗಲ್‌ಪೇ, ಪೋನ್‌ಪೇ ಮೂಲಕ ಸುಮಾರು ೨ ಲಕ್ಷದವರೆಗೂ ಹಣವನ್ನು ಪಡೆದುಕೊಂಡಿದ್ದು, ಹೊಸಕೋಟೆ ಪೋಲೀಸ್‌ಠಾಣೆಇನ್ಸ್ಪೆಕ್ಟರ್ ಬಿ.ಎಸ್‌ಅಶೋಕ್ ಹಾಗೂ ಸಿಬ್ಬಂದಿಗಳು ಆತನನ್ನು ಬಂದಿಸಿ ಜೈಲಿಗಟ್ಟಿದ್ದಾರೆ ಎಂದರು,
ಈ ಎಲ್ಲ ಪ್ರಕರಣಗಳ ಕಾರ್ಯಾಚರಣೆ ಯಶಸ್ವಿಯಾಗಲು ಡಿವೈಎಸ್‌ಪಿ ಶಂಕರ್‌ಗೌಡಅಣ್ಣಾ ಸಾಹೇಬ್ ಪಾಟೀಲ್‌ರವರ ಮಾರ್ಗದರ್ಶನದಲ್ಲಿ ಪಾಲ್ಗೊಂಡಿದ್ದ ಹೊಸಕೋಟೆ ಪೋಲೀಸ್‌ಠಾಣೆಇನ್ಸ್ಪೆಕ್ಟರ್ ಬಿ.ಎಸ್.ಅಶೋಕ್, ಪಿಎಸ್‌ಐ ಮುನಿರಾಜು, ಅಪರಾಧ ಸಿಬ್ಬಂದಿಗಳಾದ ದತ್ತಾತ್ರೇಯ. ಪ್ರಕಾಶ್‌ಬಾಬು, ರಮೇಶ್, ನಾಗರಾಜು, ವಿಠಲ್, ಜೊಯಲ್, ಜೊರಾಲ್ಡ್, ಗೋಪಾಲ್, ಮಣಿವಣ್ಣನ್, ಜಗನ್ನಾಥ್, ಮಹಿಳಾಪಿಸಿ ಮುಬಾರಕ್, ರವರನ್ನು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ,ಅಪರ ಪೋಲೀಸ್‌ಅಧೀಕ್ಷಕರಾದ ಎಂ.ಎಲ್.ಪುರುಷೋತ್ತಮ್, ಅಭಿನಂದಿಸಿದರು.
