ಉದಯವಾಹಿನಿ ಬಸವನಬಾಗೇವಾಡಿ: ಗುರು ವಿರಕ್ತರನ್ನು ಬೇಸುಗೆ ಮಾಡಿದ ಕುಮಾರ ಸ್ವಾಮೀಜಿಯವರ ಕುರಿತು 1೦ ದಿನಗಳ ವರೆಗೆ ಪ್ರವಚನ ಮೂಲಕ ಅವರ ಜೀವನ ಸಾಧನೆಗಳನ್ನು ತಿಳಿಸುವ ಕಾರ್ಯ ಪಟ್ಟಣದಲ್ಲಿ ನಡೆಸುವ ಮೂಲಕ ಹೆಚ್ಚಿನ ಸಂಖ್ಯೆಯ ಜನರು ಧಾರ್ಮಿಕ ಕಾರ್ಯದಲ್ಲಿ ತೊಡಗುವಂತೆ ಜಯಂತ್ಯೋತ್ಸವ ಸಮಿತಿಯವರು ಮಾಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು. ಪಟ್ಟಣದ ಬಸವೇಶ್ವರ ದೇವಾಲಯದ ಅಂತರಾಷ್ಟಿಯ ಶಾಲೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಾನಗಲ್ಲ ಕುಮಾರ ಸ್ವಾಮೀಜಿ ಅವರ 165ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದರು.ಮಹಿಳೆಯಿಂದ ಮನೆಯಲ್ಲಿ ಉತ್ತಮ ಸಂಸ್ಕಾರ ಬೆಳೆಯುತ್ತವೆ. ಸಂಸ್ಕಾರ ಪಡೆದ ಮಕ್ಕಳ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಮುಂಬರುವ ದಿನಗಳಲ್ಲಿ ಪಟ್ಟಣವು ಧಾರ್ಮಿಕ ಕಾರ್ಯಕ್ರಮದ ಮೂಲಕ ಮೂಲಕ ಗುರುತಿಸಿಕೊಳ್ಳಲಿದೆ ಎಂದು ಹೇಳಿದರು.
ಸಾನಿಧ್ಯತೆ ವಹಿಸಿದ್ದ ಗದಗ, ಡಂಬಳದ ಯಡಿಯೂರು ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಅವರು ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಹಾನಗಲ್ಲ ಕುಮಾರ ಸ್ವಾಮೀಜಿ ಅವರ ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ. ಕುಮಾರ ಸ್ವಾಮೀಜಿ ಅವರು ಶಿವಯೋಗಮಂದಿರ ಸ್ಥಾಪನೆ ಮಾಡುವ ಮೂಲಕ ಅನೇಕ ಮಠಾಧೀಶರನ್ನು ಈ ನಾಡಿಗೆ ನೀಡಿದ್ದಾರೆ. ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿದೆ ಎಂದರು.ಪ್ರವಚನಕಾರ ಉಪ್ಪಿನ ಬೇಟಗೇರಿಯ ಕುಮಾರ ವೀರೂಪಾಕ್ಷಿ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಲೇಸು ಏನಿಸಿಕೊಂಡವರು ನೂರು ವರ್ಷ ಬದುಕುತ್ತಾರೆ. ನರಕ ಸ್ವರ್ಗಗಳೆರಡು ಇಲ್ಲಿಯೇ ಇವೆ. ಪ್ರತಿಯೊಬ್ಬರೂ ಸ್ವರ್ಗದ ದಾರಿ ಕಂಡುಕೊಳ್ಳಬೇಕು. ಎಲ್ಲರೂ ಸೈ ಅನ್ನುವ ಹಾಗೆ ನಾವು ಬದುಕಬೇಕು. ಹಾನಗಲ್ಲ ಕುಮಾರ ಸ್ವಾಮೀಜಿ ಅವರು ಮಾಡಿದ ಕಾರ್ಯಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಹೇಳಿದರು.ಮುರಘೇಂದ್ರ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಗುರುಪಾದೇಶ್ವರ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಸಿದ್ಧರಾಮ ಸ್ವಾಮೀಜಿ, ಕಲ್ಲಿನಾಥ ದೇವರು, ಸಿದ್ಧಲಿಂಗ ಸ್ವಾಮೀಜಿ, ಚರಲಿಂಗೇಶ್ವರ ಸ್ವಾಮೀಜಿ, ಈರಣ್ಣ ಪಟಣ್ಟಶೆಟ್ಟಿ, ಬಸವರಾಜ ಹಾರಿವಾಳ, ಅನಿಲ ಅಗರವಾಲ, ಎಸ್.ಎಸ್.ಝಳಕಿ, ಶೇಖರ ಗೊಳಸಂಗಿ, ಸುರೇಶ ಹಾರಿವಾಳ, ಸಂಗಮೇಶ ಓಲೇಕಾರ ಮಾತನಾಡಿದರು.ಗುರುಪಾದೇಶ್ವರ ಶಿವಾಚಾರ್ಯ ಸ್ವಾಮೀಜಿ ಸ್ವಾಗತಿಸಿದರು, ಎಚ್.ಬಿ.ಬಾರಿಕಾಯಿ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!