
ಉದಯವಾಹಿನಿ ಸುರಪುರ : ತಾಲೂಕಿನ ಯಕ್ತಾಪುರ ಹಾಗೂ ಹುಣಸಗಿ ತಾಲೂಕಿನ ಕನ್ನಳ್ಳಿ ಗ್ರಾಮದಲ್ಲಿರುವ ಕಸ್ತೂರಬಾ ವಸತಿ ಶಾಲೆಯ ವಿದ್ಯಾರ್ಥಿಗಳು ಕಲುಷಿತ ನೀರು ಸೇವಿಸಿ.ವಾಂತಿ ಭೇದಿಯಾಗಿ ಹಲವಾರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಘಟನೆಗೆ ಯಾದಗಿರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡುವಂತೆ ಸುರಪುರ ತಾಲೂಕು ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿಪತ್ರವನ್ನು ಸಲ್ಲಿಸಿದರು.ಈ ಸಂಧರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕರಾದ ನಿಂಗಣ್ಣ ಎಮ್ ಗೋನಾಲ್ ಮಾತನಾಡಿ, ಜಿಲ್ಲಾಡಳಿತ ನಾಮ ಕೆ ವಾಸ್ತೆ ಗ್ರಾಮ ವಾಸ್ತವ್ಯ ಮಾಡುತ್ತಾರೆ, ಇದೇ ಗ್ರಾಮದಲ್ಲಿ ಹಿಂದೇ ಗ್ರಾಮ ವಾಸ್ತವ್ಯ ಮಾಡಿದ್ದರು ಕೊಡ ಇನ್ನೂವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಕಂಡಿಲ್ಲ ಎಂದು ಹೇಳಿದರು.ಕಲುಷಿತ ನೀರು ಕುಡಿದ ಘಟನೆಯಲ್ಲಿ ಕೆಲವೊಂದು ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದೆ. ಇನ್ನೂ ಕೆಲವು ಪೋಷಕರು ತಮ್ಮ ಮಕ್ಕಳನ್ನು ಸಾಲ ಶೂಲ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆ ಕೊಡೆಸುತ್ತಿದ್ದಾರೆ.ಕೆಲವೊಂದು ಮಕ್ಕಳು ಚೇತರಿಸಿಕೊಂಡಿದ್ದಾರೆ. ವಾಂತಿ ಭೇದಿಯಿಂದ ಅಸ್ವಸ್ಥಗೊಂಡ ಮಕ್ಕಳ ಪಾಲಕರು, ಪೋಷಕರು, ಸಂಬಂಧಿಗಳು ಕಡು ಬಡವರಾಗಿದ್ದರಿಂದ ಆರ್ಥಿಕವಾಗಿ ಅನಾನುಕೂಲತೆ ಹೊಂದಿರುವುದರಿಂದ ಸರ್ಕಾರವೇ ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸಬೇಕು ಹಾಗೂ ಸರ್ಕಾರದಿಂದ ಕುಡಿಯುವ ನೀರಿಗಾಗಿ ಸಾಕಷ್ಟು ಅನುದಾನವನ್ನು ಜಾರಿಗೆ ತಂದರು ಕೂಡಾ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ಬಳಕೆಯಾಗದೆ ಇರುವುದರಿಂದ ಈ ಒಂದು ದುರ್ಘಟನೆಯಾಗಿದೆ.
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ನಿಂಗಣ್ಣ ಎಮ್ ಗೋನಾಲ ಆಗ್ರಹ ಮಾಡಿದರು.ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಪದಾಧಿಕಾರಿಗಳಾದ ನಾಗರಾಜ ಹೋಕಳಿ, ಧರ್ಮಣ್ಣ ಹೊಸಮನಿ, ಹೆಚ್.ಆರ್ ಬಡಿಗೇರ್,ಹಾಗೂ ಸುರಪುರ ತಾಲೂಕು ಸಂಚಾಲಕ ರಮೇಶ ಪೂಜಾರಿ, ಮುಖಂಡ ನಾಗು ಗೋಗಿಕೇರಿ, ಸದಾಶಿವ ಬೊಮ್ಮನಹಳ್ಳಿ, ಶಿವಣ್ಣ ನಾಗರಾಲಕ, ಅನಿಲ ಕುಮಾರ್, ಬಸವರಾಜ ನಾಟೇಕಾರ್, ಸೋಮು ಬಂದೊಡ್ಡಿ, ಸಾಬಣ್ಣ ಎಂಟಮನಿ, ಜಿಂದಾವಲಿ ಇತರರು ಉಪಸ್ಥಿತರಿದ್ದರು.
