ಉದಯವಾಹಿನಿ ದೇವದುರ್ಗ: ಸಮೀಪದ ಪರ್ತಪುರು ಗ್ರಾಮದ ಇಮಾಮ್ ಎಂಬ ವ್ಯಕ್ತಿ ಎತ್ತು ತೊಳೆಯಲು ಕೃಷ್ಣನದಿಗೆ ಹೋದಾಗ ಮೊಸುಳೆ ದಾಳಿಯಿಂದ ಕಾಲು ಕಳೆದುಕೊಂಡಿದ್ದರು. ವಲಯ ಅರಣ್ಯ ಇಲಾಖೆಯಿಂದ ವನ್ಯಜೀವಿ ಪರಿಹಾರ ನಿಧಿಯಿಂದ 10ಲಕ್ಷ ರೂ. ಪರಿಹಾರ ಶಾಸಕಿ ಕರೆಮ್ಮ ಗೋಪಾಲಕೃಷ್ಣ ಚೆಕ್ ವಿತರಣೆ ಮಾಡಿದರು. ಅರಣ್ಯ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.
