ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಬಹುಜನ ವಿದ್ಯಾರ್ಥಿ ಪೇಡ್ರೇಷನ ಫಾರ್ ಈಕ್ವಾಲಿಟಿ ಸಂಘಟನೆ ವತಿಯಿಂದ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.ಸಂಘಟನೆಯ ಮುಖಂಡ ಮಾರುತಿ ಗಂಜಗಿರಿ ಮಾತನಾಡಿ ಸುಲೇಪೇಟ ಬಸ್ ನಿಲ್ದಾಣದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿ,ಮಹಿಳೆಯರಿಗಾಗಿ ವಿಶ್ರಾಂತಿ ಕೋಣೆ ಮಾಡಿ,ಗ್ರಾಮದ ಶಾಲಾ ಕಾಲೇಜು ಬಿಟ್ಟಾಗ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಸುರಕ್ಷತೆಗೆ ಖಾಯಂ ಪೋಲಿಸ್ ಗಸ್ತು ನೀಡಿ,ಕಾಳಗಿ ರುಮ್ಮನಗೂಡ ಮಾರ್ಗವಾಗಿ ಬರುವ ಬಸ್ ತಾಡಪಳ್ಳಿ ವಾಯಾ ಮಾಡಬೇಕು,ಹುಮ್ನಾಬಾದನಿಂದ ಸುಲೇಪೇಟ ಬಸ್ ಪುನಃ ಪ್ರಾರಂಭಿಸಿ,ಕೆರೋಳ್ಳಿ ಗಡಿಕೇಶ್ವಾರ,ಭಂಟನಳ್ಳಿ ಸಮಯಕ್ಕೆ ತಕ್ಕಂತೆ ಬಸ್ ಕಲ್ಪಿಸಿ,ನಿಡಗುಂದಾ ಕೊಡಂಪಳ್ಳಿ ಮಾರ್ಗವಾಗಿ ಸುಲೇಪೇಟ ಬರುವ ಬಸ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸಂಚರಿಸಬೇಕು.
ರುಸ್ತಂಪೂರ ಗ್ರಾಮಕ್ಕೆ ಬೆಳಿಗ್ಗೆ 9ಘಂಟೆಗೆ ಮತ್ತು ಸಾಯಂಕಾಲ 6ಗಂಟೆಗೆ ಬಸ್ ವ್ಯವಸ್ಥೆ ಕಲ್ಪಿಸಿ,ಸರಕಾರಿ ಕನ್ಯಾ ಪ್ರೌಢ ಶಾಲೆಗೆ ಹೋಗುವ ರಸ್ತೆಯ ದುರಸ್ತಿ ಹಾಗೂ ಮುಸ್ಲಿಂ ಸಮುದಾಯದ ಖಬರಸ್ತಾನಕ್ಕೆ ಮತ್ತು ಕಂದಾಯ ನಿರೀಕ್ಷಕರ ಕಾರ್ಯಾಲಯಕ್ಕೆ ಹೋಗುವ ಸಾರ್ವಜನಿಕರ ಸಮಸ್ಯೆ ಬಗೆಹರಿಸಬೇಕು. ಈ ಸಂದರ್ಭದಲ್ಲಿ ಸುಭಾಷ್ ತಾಡಪಳ್ಳಿ,ಮೋಹನ ಐನಾಪೂರ,ಮಾರುತಿ ಜಾಧವ,ಮೌನೇಶ ಗಾರಂಪಳ್ಳಿ,ವಿಜಯ ತಾಡಪಳ್ಳಿ,ಸುನೀಲ ಹೂಡೆಬೀರನಳ್ಳಿ,ಸಚೀನಕುಮಾರ,ಆಶಾಲತಾ,ವಿಜಯಾ ಶೀಲಾ,ಕನ್ಯಾಕುಮಾರಿ,ಹರ್ಷವರ್ಧನ ಚಿಮ್ಮನಕಟ್ಟಿ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!