ಉದಯವಾಹಿನಿ, ನೈನಿತಾಲ್ (ಉತ್ತರಾಖಂಡ): ಹರಿಯಾಣದಿಂದ ಬರುತ್ತಿದ್ದ ಬಸ್ ಒಂದು ನೈನಿತಾಲ್ ಜಿಲ್ಲೆಯ ಸಮೀಪ ಕಂದಕಕ್ಕೆ ಉರಳಿ 7 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಒಂದು ಮಗು, ಐವರು ಮಹಿಳೆಯರು ಹಾಗೂ ಓರ್ವ ಪುರುಷ ಹಾಗೂ ಸೇರಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈವರೆಗೆ 28 ಜನರನ್ನು ರಕ್ಷಿಸಲಾಗಿದ್ದು, ಹೆಚ್ಚಿನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರ ಶವಗಳನ್ನು ಎಸ್‌ಡಿಆರ್‌ಎಫ್ ಸಿವಿಲ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
30 ರಿಂದ 33 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಕಲಾಧುಂಗಿ ರಸ್ತೆಯ ಸಮೀಪ ಕಂದಕಕ್ಕೆ ಉರುಳಿದೆ ಎಂದು ನೈನಿತಾಲ್‌ನ ವಿಪತ್ತು ನಿಯಂತ್ರಣ ಕೊಠಡಿಯಿಂದ ಎಸ್‌ಡಿಆರ್‌ಎಫ್‌ಗೆ ಮಾಹಿತಿ ರವಾನೆಯಾಗಿದೆ. ಮಾಹಿತಿಯ ಮೇರೆಗೆ ಎಸ್‌ಡಿಆರ್‌ಎಫ್ ಕಮಾಂಡೆಂಟ್ ಮಣಿಕಾಂತ್ ಮಿಶ್ರಾ ಅವರ ನೇತೃತ್ವ ರಕ್ಷಣಾ ತಂಡ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿವೆ.ಚಾಲಕನ ನಿಯಂತ್ರಣ ತಪ್ಪಿದ ಬಸ್ ಸುಮಾರು 200 ಮೀಟರ್ ಆಳದ ಕಂದಕಕ್ಕೆ ಉರುಳಿದೆ. ಹರಿಯಾಣದ ಹಿಸಾರ್‌ನಿಂದ ನೈನಿತಾಲ್‌ಗೆ ಹೋಗುತ್ತಿದ್ದ ಈ ಬಸ್‌ನಲ್ಲಿ 33 ಜನರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
\
